ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಕ್ಫ್ ಭೂಮಿ ಕಬಳಿಕೆ: ಹೆಸರಾಂತ ವಕೀಲರ ಕೈಗೆ ಪ್ರಕರಣಗಳು?

|
Google Oneindia Kannada News

ಮಂಗಳೂರು, ಸೆ. 27: ವಕ್ಫ್ ಮಂಡಳಿಯ ಹಲವು ಜಮೀನುಗಳನ್ನು ಒತ್ತುವರಿ ಮಾಡಲಾಗಿದೆ ಎಂಬ ವರದಿ ಬಂದಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಂತಿರುವ ವಕ್ಫ್ ಬೋರ್ಡ್ ಇದೀಗ ಕಾನೂನು ಮೂಲಕ ಹೋರಾಡಲು ಹೆಚ್ಚು ಬದ್ಧವಾಗಿದೆ. 'ಪ್ರಭಾವಿ'ಗಳಿಂದ ಒತ್ತುವರಿಯಾದ ಜಮೀನುಗಳನ್ನು ಮರಳಿಪಡೆಯಲು ವಕ್ಫ್ ಮಂಡಳಿ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ವ್ಯಾಜ್ಯ ಪ್ರಕರಣಗಳನ್ನು ಕೋರ್ಟ್‌ನಲ್ಲಿ ಎದುರಿಸಲು ಹೆಸರಾಂತ ವಕೀಲರನ್ನು ನೇಮಿಸಿಕೊಂಡಿರುವುದು ತಿಳಿದು ಬಂದಿದೆ.

ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಶಫಿ ಸಆದ್ ಈ ವಿಚಾರವನ್ನು ಸೋಮವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕಳೆದ ಬಾರಿ ನಡೆದ ವಕ್ಫ್ ಮಂಡಳಿ ಸಭೆಯಲ್ಲೇ ಒತ್ತುವರಿ ಪ್ರಕರಣಗಳಲ್ಲಿ ಹೋರಾಡಲು ಹಿರಿಯ ವಕೀಲರನ್ನು ಬಳಸಿಕೊಳ್ಳಲಾಗುವ ಬಗ್ಗೆ ನಿರ್ಧಾರವಾಗಿತ್ತು ಎಂದು ಹೇಳಿದ ಶಫಿ ಸಾದ್, ಹಿರಿಯ ವಕೀಲರಾದ ಅಶೋಕ್ ಹಾರ್ನಹಳ್ಳಿ, ಡಿಎಲ್‌ಎನ್ ರಾವ್, ಜಯಕುಮಾರ್ ಪಾಟೀಲ್ ಮೊದಲಾದವರು ವಕ್ಫ್ ಮಂಡಳಿ ಪರವಾಗಿ ಕೋರ್ಟ್‌ಗಳಲ್ಲಿ ಹೋರಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ವಕ್ಫ್‌ ಬೋರ್ಡ್‌ಗೆ ಪರೇಶ್‌ ಮೆಸ್ತಾ ಕೊಲೆ ಆರೋಪಿ ಉಪಾಧ್ಯಕ್ಷ?: ಸಿದ್ದರಾಮಯ್ಯ ಆಕ್ರೋಶವಕ್ಫ್‌ ಬೋರ್ಡ್‌ಗೆ ಪರೇಶ್‌ ಮೆಸ್ತಾ ಕೊಲೆ ಆರೋಪಿ ಉಪಾಧ್ಯಕ್ಷ?: ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರಿನ ವಿಂಡ್ಸರ್ ಮೇನರ್ ಆಸ್ತಿ ಪ್ರಕರಣವೂ ಸೇರಿದಂತೆ ಮೂರು ಪ್ರಕರಣಗಳನ್ನು ಡಿಎಲ್‌ಎನ್ ರಾವ್ ಅವರಿಗೆ ನೀಡಲಾಗಿದೆ.

Wakf Board Using Renowned Lawyers To Fight Encroachment Cases

"ವಕ್ಫ್ ಮಂಡಳಿ ಶೇ. 50ರಷ್ಟು ಪ್ರಕರಣ ಗೆದ್ದರೂ ಮಂಡಳಿ ನಡೆಸಲು ಸರಕಾರದ ದೇಣಿಗೆ ಅವಶ್ಯಕತೆ ಬೀಳುವುದಿಲ್ಲ. ಮರುವಶಕ್ಕೆ ಪಡೆದ ಆಸ್ತಿಗಳ ಭದ್ರತೆಗಾಗಿ 70 ಕೋಟಿ ರೂ ವೆಚ್ಚದಲ್ಲಿ ಕಾಂಪೌಂಟ್ ಗೋಡೆಗಳನ್ನು ಕಟ್ಟಲಾಗುತ್ತಿದೆ" ಎಂದು ಅವರು ಮಾಹಿತಿ ನೀಡಿದ್ಧಾರೆ.

ಹೈಕೋರ್ಟ್ ಮೆಟ್ಟಿಲೇರಿದ ಚಾಮರಾಜಪೇಟೆ ಈದ್ಗಾ ವಿವಾದ: ಅ.25ರಂದು ವಿಚಾರಣೆಹೈಕೋರ್ಟ್ ಮೆಟ್ಟಿಲೇರಿದ ಚಾಮರಾಜಪೇಟೆ ಈದ್ಗಾ ವಿವಾದ: ಅ.25ರಂದು ವಿಚಾರಣೆ

ಇನ್ನು, ವಕ್ಫ್ ಮಂಡಳಿಗೆ ಸೇರಿದ ಜಮೀನಿನ ಅತಿಕ್ರಮಣದ ಬಗ್ಗೆ ಅನ್ವರ್ ಮಾಣಿಪ್ಪಾಡಿ ಸಲ್ಲಿರುವ ವರದಿ ಬಗ್ಗೆ ಮಾತನಾಡಿದ ಶಫಿ ಸಾದಿ, ಸಿಬಿಐ ಅಥವಾ ಲೋಕಾಯುಕ್ತ ಅಥವಾ ಯಾವುದೇ ಸಂಸ್ಥೆಯಿಂದ ತನಿಖೆ ಆದರೂ ಸ್ವಾಗತಿಸುತ್ತೇವೆ ಎಂದಿದ್ದಾರೆ. ಹಾಗೆಯೇ, ಮಾಣಿಪ್ಪಾಡಿಯ ವರದಿಯಲ್ಲಿ ತಿಳಿಸಲಾಗಿರುವುದಕ್ಕಿಂತ ತುಂಬಾ ಹೆಚ್ಚು ಜಮೀನು ಒತ್ತುವರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಅನ್ವರ್ ಮಾಣಿಪ್ಪಾಡಿ ವರದಿ ಏನು?

ವಕ್ಫ್ ಆಸ್ತಿ ಕಬಳಿಕೆ ಕುರಿತು ಅನ್ವರ್ ಮಾಣಿಪ್ಪಾಡಿಯ ವರದಿಯನ್ನು ಕಳೆದ ವಾರದಂದು ರಾಜ್ಯದ ಮೇಲ್ಮನೆಯಲ್ಲಿ ಮಂಡಿಸಲಾಯಿತು. ಈ ವರದಿಯಲ್ಲಿ ಕಾಂಗ್ರೆಸ್‌ನ ಜಮೀರ್ ಅಹ್ಮದ್, ಖಮರುಲ್ ಇಸ್ಲಾಂ, ನಜೀರ್ ಅಹ್ಮದ್ ಮೊದಲಾದವರ ಹೆಸರು ಇದೆ ಎಂಬುದು ಬಿಜೆಪಿಯ ಆರೋಪ.

Wakf Board Using Renowned Lawyers To Fight Encroachment Cases

ಹಿಂದೆ ವಕ್ಫ್ ಮಂಡಳಿಯ ಚುಕ್ಕಾಣಿ ಹಿಡಿದವರಲ್ಲಿ ಕೆಲವರು ಭೂಮಿಯ ಅತಿಕ್ರಮಣ ಮಾಡಿದ್ದಾರೆ ಎಂದು ಅನ್ವರ್ ಮಾಣಿಪ್ಪಾಡಿಯ ವರದಿಯಲ್ಲಿದೆ ಎಂದು ಹೇಳಲಾಗಿದೆ.

ಒಂದು ಅಂದಾಜು ಪ್ರಕಾರ 29 ಸಾವಿರ ಎಕರೆಯಷ್ಟು ವಕ್ಫ್ ಆಸ್ತಿಯ ಒತ್ತವರಿ ಆಗಿದೆ. ಇದು 2-3 ಲಕ್ಷಕೋಟಿ ಮೌಲ್ಯದಷ್ಟು ಬೃಹತ್ ಹಗರಣ ಎಂಬ ಆರೋಪಗಳಿವೆ. 2012ರಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರು ತನಿಖೆ ನಡೆಸಿ ವರದಿ ಸಿದ್ಧಪಡಿಸಿದ್ದರು. ಆ ವರದಿಯನ್ನು ಕಳೆದ ವಾರ ವಿಧಾನಪರಿಷತ್‌ನಲ್ಲಿ ಮಂಡನೆ ಮಾಡಲಾಗಿದೆ.

(ಒನ್ಇಂಡಿಯಾ ಸುದ್ದಿ)

English summary
Karnataka State Waqf Board is using well known lawyers to fight encroachment cases. Its Chairman Shafi Saad has said if the board wins half the cases, then dependency on government funding will be over.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X