ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತಯಂತ್ರದ ಫಲಿತಾಂಶ ವಿವಿಪ್ಯಾಟ್‌ ಜತೆ ತಾಳೆ: ಚುನಾವಣಾ ಆಯೋಗ

By Nayana
|
Google Oneindia Kannada News

ಬೆಂಗಳೂರು, ಮೇ 15: ದೇಶದಲ್ಲಿ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ವಿವಿಪ್ಯಾಟ್ ಯಂತ್ರಗಳನ್ನು ಬಳಸಲಾಗುತ್ತಿದೆ. ಹಾಗೆಯೇ ಮತ ಎಣಿಕೆ ನಡೆಯುವಾಗ ಪ್ರತಿ ಮತ ಕ್ಷೇತ್ರಕ್ಕೆ ಒಂದರಂತೆ ಈ ವಿವಿಪ್ಯಾಟ್ ಯಂತ್ರಗಳನ್ನು ತೆರೆದು ಅಲ್ಲಿರುವ ಮುದ್ರಿತ ಪ್ರತಿಗಳನ್ನು ಲೆಕ್ಕ ಹಾಕಿ ಮತ ಯಂತ್ರದಲ್ಲಿ ಬರುವ ಫಲಿತಾಂಶವನ್ನು ಇದರೊಂದಿಗೆ ತಾಳೆ ಮಾಡಲಾಗುವುದು.

ಮತಯಂತ್ರವನ್ನು ಯಾವುದೇ ರೀತಿಯಲ್ಲಿ ತಿರುಚಲು ಸಾಧ್ಯವಿಲ್ಲ ಮತ್ತು ಅವುಗಳು ಹೆಚ್ಚು ಖಚಿತತೆಯಿಂದ ಕೂಡಿರುತ್ತವೆ ಎನ್ನುವುದನ್ನು ವಿವಿಪ್ಯಾಟ್‍ನ ಮುದ್ರಿತ ಪ್ರತಿಗಳು ಮತ್ತು ಮತಯಂತ್ರಗಳು ಖಚಿತ ಪಡಿಸುತ್ತವೆ.

LIVE: ಕರ್ನಾಟಕ ಚುನಾವಣೆ 2018, ಮತಎಣಿಕೆ ಅಪ್ಡೇಟ್ಸ್ LIVE: ಕರ್ನಾಟಕ ಚುನಾವಣೆ 2018, ಮತಎಣಿಕೆ ಅಪ್ಡೇಟ್ಸ್

ಇದೇ ಮೊದಲ ಬಾರಿಗೆ ವಿವಿಪ್ಯಾಟ್‍ನಲ್ಲಿರುವ ಮುದ್ರಿತ ಪ್ರತಿಗಳನ್ನು ಲೆಕ್ಕ ಹಾಕಲು ಅನುವಾಗುವಂತೆ ಪಾರದರ್ಶಕ ಪೆಟ್ಟಿಗೆಯಲ್ಲಿ ಪಿಜನ್ ಹೋಲ್ ಮಾದರಿಯಲ್ಲಿ ಸಣ್ಣ ಸಣ್ಣ ಬಾಕ್ಸ್‌ಗಳನ್ನು ವಿನ್ಯಾಸಗೊಳಿಸಿದೆ. ಮತಗಟ್ಟೆಯಲ್ಲಿ ಹಾಜರಿರುವವರ ಸಮ್ಮುಖದಲ್ಲಿ ತೆಗೆದು ಅವರ ಮುಂದೆ ವಿಂಗಡಿಸಿ, ಬಳಿಕ ಲೆಕ್ಕ ಹಾಕಲಾಗುವುದು.

VV PAT details will compare to EVM outcome

ಮತ ಎಣಿಕೆ ನಡೆಯುವ 222 ಮತಕ್ಷೇತ್ರಗಳ ಪೈಕಿ ಸುಮಾರು 217 ಮತಕ್ಷೇತ್ರಗಳ ಮತ ಎಣಿಕೆಯು 14 ಟೇಬಲ್‌ಗಳಿಂದ ಕೂಡಿರುವ ಹಾಲ್‌ನಲ್ಲಿ ನಡೆಯಲಿದೆ.

ಮತ ಎಣಿಕೆ ಕೇಂದ್ರಕ್ಕೆ ಗುರುತಿನ ಚೀಟಿ ಇದ್ದವರಿಗಷ್ಟೇ ಪ್ರವೇಶಮತ ಎಣಿಕೆ ಕೇಂದ್ರಕ್ಕೆ ಗುರುತಿನ ಚೀಟಿ ಇದ್ದವರಿಗಷ್ಟೇ ಪ್ರವೇಶ

ಪ್ರತಿ ಮತ ಕ್ಷೇತ್ರಕ್ಕೆ ಸುಮಾರು 80 ಮಂದಿ ಅಣಿಕೆ ಮಾಡುವವರನ್ನು ನಿಯೋಜಿಸಲಾಗಿದೆ. ಈ ಪೈಕಿ 14 ಮಂದಿ ಪತ ಎಣಿಕೆ ಮೇಲ್ವಿಚಾರಕರು, 14 ಎಣಿಕೆ ಸಹಾಯಕರು ಮತ್ತು 14 ಮೈಕ್ರೋ ಅಬ್ಸರ್ವರ್ಸ್ ಗಳಿಂದ ಕೂಡಿರುವ ಒಂದು ತಂಡವಾಗಿ ಕಾರ್ಯ ನಿರ್ವಹಿಸಲಿದೆ.

English summary
Election commission has clarified that total voting count in VV PAT will be compared with Electronic Voting Machine's (EVM) outcome to confirm the efficiency of the EVMs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X