ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು- ಬೆಂಗಳೂರು ನಡುವೆ ನವೆಂಬರ್‌ 10ರಿಂದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರ

|
Google Oneindia Kannada News

ಬೆಂಗಳೂರು, ಅಕ್ಟೋಬರ್‌ 14: ಸ್ವದೇಶಿ ನಿರ್ಮಿತ ಸೆಮಿ ಹೈಸ್ಪೀಡ್‌ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಐದನೇ ರೈಲು ಮುಂದಿನ ತಿಂಗಳು ನವೆಂಬರ್ 10 ರಂದು ಚೆನ್ನೈ- ಬೆಂಗಳೂರು- ಮೈಸೂರು ಮಾರ್ಗಗಳಲ್ಲಿ ಸಂಚರಿಸಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ನಾಲ್ಕನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸೇವೆಗಳಿಗೆ ಚಾಲನೆ ನೀಡಿದರು. ನಂತರ ಹಿಮಾಚಲ ಪ್ರದೇಶ ಮತ್ತು ಹರಿಯಾಣ ಎರಡು ರಾಜ್ಯಗಳ ಮುಖ್ಯಮಂತ್ರಿಗಳಾದ ಜೈರಾಮ್ ಠಾಕೂರ್ ಮತ್ತು ಮನೋಹರ್ ಲಾಲ್ ಖಟ್ಟರ್ ಹೈಸ್ಪೀಡ್ ರೈಲಿನಲ್ಲಿ ಸವಾರಿ ಮಾಡಿದರು.

ಹಿಮಾಚಲ ಪ್ರದೇಶ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಚಾಲನೆಹಿಮಾಚಲ ಪ್ರದೇಶ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

ಮುಂದಿನ ವಾರದಿಂದ ದೆಹಲಿ ಮತ್ತು ಚಂಡೀಗಢ ನಡುವಿನ ಪ್ರಯಾಣದ ಸಮಯವನ್ನು ಮೂರು ಗಂಟೆಗಳವರೆಗೆ ತರಲು ರೈಲು ಸಿದ್ಧವಾಗಿದೆ. ಉನಾದಿಂದ ನವದೆಹಲಿಗೆ ಪ್ರಯಾಣದ ಸಮಯವನ್ನು ಎರಡು ಗಂಟೆಗಳಷ್ಟು ಕಡಿಮೆಗೊಳಿಸಲಾಗುವುದು ಎಂದು ಸರ್ಕಾರದ ಹೇಳಿಕೆ ತಿಳಿಸಿದೆ. ವಂದೇ ಭಾರತ್ 2.0 ಕೇವಲ 52 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿಲೋಮೀಟರ್ ವೇಗವನ್ನು ಮತ್ತು ಗಂಟೆಗೆ 180 ಕಿಲೋಮೀಟರ್ ವರೆಗೆ ಗರಿಷ್ಠ ವೇಗವನ್ನು ತಲುಪುವಂತಹ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ. ಸುಧಾರಿತ ವಂದೇ ಭಾರತ್ ಎಕ್ಸ್‌ಪ್ರೆಸ್ 430 ಟನ್‌ಗಳ ಹಿಂದಿನ ಆವೃತ್ತಿಗೆ ಹೋಲಿಸಿದರೆ 392 ಟನ್ ತೂಕವನ್ನು ಹೊಂದಿರುತ್ತದೆ.

ಇದು ಬೇಡಿಕೆಯ ಮೇರೆಗೆ ವೈಫೈ ಸೇವೆಯನ್ನು ಸಹ ಹೊಂದಿರುತ್ತದೆ. ಇದು ವಿಮಾನದಂತಹ ಪ್ರಯಾಣದ ಅನುಭವಗಳು ಮತ್ತು ದೇಶೀಯವಾಗಿ ಅಭಿವೃದ್ಧಿಪಡಿಸಿದ ಕವಾಚ್‌ ಸುರಕ್ಷತಾ ಕ್ರಮ ಸೇರಿದಂತೆ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಪ್ರಧಾನ ಮಂತ್ರಿ ಕಚೇರಿಯ ಹೇಳಿಕೆ ನೀಡಿದೆ. ಮೂರನೇ ವಂದೇ ಭಾರತ್ ರೈಲನ್ನು ಈ ತಿಂಗಳ ಆರಂಭದಲ್ಲಿ ಪ್ರಧಾನಿ ಮೋದಿ ಅವರು ಗುಜರಾತ್‌ನಲ್ಲಿ ಚಾಲನೆ ನೀಡಿದ್ದರು.

ದೆಹಲಿ-ವಾರಣಾಸಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಚಕ್ರಗಳು ಜಾಮ್ದೆಹಲಿ-ವಾರಣಾಸಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಚಕ್ರಗಳು ಜಾಮ್

 ಕೆಲವೇ ದಿನಗಳಲ್ಲಿ ಮೂರನೇ ಲೋಪ

ಕೆಲವೇ ದಿನಗಳಲ್ಲಿ ಮೂರನೇ ಲೋಪ

ಆದಾಗ್ಯೂ ಈ ಹೈಸ್ಪೀಡ್ ರೈಲಿಗೆ ಸಂಬಂಧಿಸಿದ ಕೆಲವು ಘಟನೆಗಳು ವರದಿಯಾಗಿವೆ. ಅವುಗಳೆಂದರೆ ಕಳೆದ ವಾರ ನವದೆಹಲಿ-ವಾರಣಾಸಿ ಸೆಮಿ-ಹೈ ಸ್ಪೀಡ್ ರೈಲು ತಾಂತ್ರಿಕ ದೋಷ ಕಂಡ ಪರಿಣಾಮವಾಗಿ ಪ್ರಯಾಣಿಕರಿಗೆ ವಿಳಂಬವಾಯಿತು. ಇದು ಕೆಲವೇ ದಿನಗಳಲ್ಲಿ ಮೂರನೇ ಲೋಪವಾಗಿತ್ತು. ಈ ಹಿಂದೆ ಗುಜರಾತ್‌ನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮರುದಿನ ಮೂರು ಎಮ್ಮೆ ಮತ್ತು ಹಸುವಿಗೆ ಡಿಕ್ಕಿ ಹೊಡೆದಿತ್ತು.

 ಎಂಟು ಫ್ಲಾಟ್‌ಫಾರ್ಮ್ ಸೈಡ್ ಕ್ಯಾಮೆರಾ

ಎಂಟು ಫ್ಲಾಟ್‌ಫಾರ್ಮ್ ಸೈಡ್ ಕ್ಯಾಮೆರಾ

ರೈಲು ಮಾರ್ಗಗಳ ಮೂಲಕ ಸರಕು ಸಾಗಣೆಯನ್ನು ಸಮಯೋಚಿತವಾಗಿ ತಲುಪಿಸಲು ಅನುಕೂಲವಾಗುವಂತೆ ಭಾರತೀಯ ರೈಲ್ವೇಯು ವಂದೇ ಭಾರತ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚಿನ ವೇಗದ ಸರಕು ಸಾಗಣೆ ರೈಲುಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ. ರೈಲಿನ ಹೊರಭಾಗವು ಎಂಟು ಫ್ಲಾಟ್‌ಫಾರ್ಮ್ ಸೈಡ್ ಕ್ಯಾಮೆರಾಗಳನ್ನು ಹೊಂದಿದ್ದು, ನಾಲ್ಕು ಕೋಚ್‌ಗಳಲ್ಲಿ ಪ್ರಯಾಣಿಕರ ಗಾರ್ಡ್ ಸಂವಹನ ಸೌಲಭ್ಯವೂ ಇದೆ. ಇದು ಸ್ವಯಂಚಾಲಿತ ಧ್ವನಿ ರೆಕಾರ್ಡಿಂಗ್ ವೈಶಿಷ್ಟ್ಯವನ್ನು ಒಳಗೊಂಡಿರುತ್ತದೆ.

 ಕಡಿಮೆ ಅವಧಿಯಲ್ಲಿ ಹೆಚ್ಚಿನ ವೇಗ

ಕಡಿಮೆ ಅವಧಿಯಲ್ಲಿ ಹೆಚ್ಚಿನ ವೇಗ

ಹೊಸ ವಂದೇ ಭಾರತ್ ರೈಲು ಹಿಂದಿನ ರೈಲುಗಳಿಗೆ ಹೋಲಿಸಿದರೆ ಇದು ಸುಧಾರಿತ ಆವೃತ್ತಿಯಾಗಿದೆ. ಇದು ಹೆಚ್ಚು ಹಗುರವಾಗಿಮತ್ತು ಕಡಿಮೆ ಅವಧಿಯಲ್ಲಿ ಹೆಚ್ಚಿನ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ವಂದೇ ಭಾರತ್ 2.0 ರೈಲುಗಳು ಕವಾಚ್ ಎಂಬ ರೈಲು ಘರ್ಷಣೆ ತಪ್ಪಿಸುವ ವ್ಯವಸ್ಥೆಯನ್ನು ಹೊಂದಿದ್ದು, ಮೂರು ಗಂಟೆಗಳ ಬ್ಯಾಟರಿ ಬ್ಯಾಕಪ್‌ನೊಂದಿಗೆ ಕೋಚ್‌ಗಳು ಡಿಸಾಸ್ಟರ್ ಲೈಟ್‌ಗಳನ್ನು ಹೊಂದಿವೆ.

 ವಾರದಲ್ಲಿ ಆರು ದಿನ ಓಡಾಟ

ವಾರದಲ್ಲಿ ಆರು ದಿನ ಓಡಾಟ

ಉನಾದಿಂದ ನವದೆಹಲಿಗೆ ಪ್ರಯಾಣದ ಸಮಯವು ಎರಡು ಗಂಟೆಗಳಷ್ಟು ಕಡಿಮೆಯಾಗುತ್ತದೆ. ರೈಲು ಗುಡ್ಡಗಾಡು ರಾಜ್ಯದ ಅಂಬ್ ಅಂಡೌರಾದಿಂದ ನವದೆಹಲಿಗೆ ವಾರದಲ್ಲಿ ಬುಧವಾರ ಹೊರತುಪಡಿಸಿ ಆರು ದಿನಗಳು ಚಲಿಸುತ್ತದೆ. ಅಂಬಾಲಾ, ಚಂಡೀಗಢ, ಆನಂದಪುರ ಸಾಹಿಬ್ ಮತ್ತು ಉನಾದಲ್ಲಿ ನಿಲುಗಡೆ ಇರುತ್ತದೆ.

English summary
The fifth train of the indigenously built semi-high speed Vande Bharat Express will run on the Chennai-Bangalore-Mysore route next month on November 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X