ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಈ ಇಬ್ಬರು ಅಭ್ಯರ್ಥಿಗಳು ಗೆದ್ದಿದ್ದು ಮತಗಳಿಂದಲ್ಲ, ಚೀಟಿಯಿಂದ!

Karnataka Civic Poll Results :ಈ ಇಬ್ಬರು ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದಿದ್ದು ಮತಗಳಿಂದಲ್ಲ, ಬದಲಾಗಿ..?
ಕೊಪ್ಪಳ, ಸೆಪ್ಟೆಂಬರ್ 03: ಕೊಪ್ಪಳ ನಗರಸಭೆಗೆ ನಡೆದ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಕೇವಲ ಅದೃಷ್ಟದ ಮುಖಾಂತರವೇ ಗೆದ್ದಿದ್ದಾರೆ.
ಹೌದು, ಕೊಪ್ಪಳ ನಗರಸಭೆ ಚುನಾವಣೆಗೆ ವಾರ್ಡ್ ನಂ 5ರಿಂದ ಸ್ಪರ್ಧಿಸಿದ್ದ ರೇಣುಕಾ ಪೂಜಾರಿ ಮತ್ತು ವಿದ್ಯಾ ಸುನಿಲ್ ಅವರು ಇಬ್ಬರೂ ಅಭ್ಯರ್ಥಿಗಳು ಸಮನಾಗಿ 233 ಮತಗಳನ್ನು ಗಳಿಸಿದರು.
LIVE: ಸ್ಥಳೀಯ ಸಂಸ್ಥೆ ಫಲಿತಾಂಶ: 846 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದ ಕಾಂಗ್ರೆಸ್
ಸಮ ಮತ ಬಂದ ಕಾರಣ ಮತೆಣಿಕೆ ಕಾರ್ಯದ ಮುಖ್ಯಾಧಿಕಾರಿ ಚೀಟಿ ಮೂಲಕ ವಿಜೇತರನ್ನು ಆಯ್ಕೆ ಮಾಡಲು ಚೀಟಿ ಹಾಕಿದರು. ಬಿಜೆಪಿಯ ವಿದ್ಯಾ ಸುನಿಲ್ ಅವರ ಅದೃಷ್ಟ ಚೆನ್ನಾಗಿದ್ದು ಅವರು ಚೀಟಿ ಪ್ರಕ್ರಿಯೆಯಲ್ಲಿ ಆಯ್ಕೆಯಾದರು.
ಬಾಗಲಕೋಟೆ ಜಿಲ್ಲೆಯಲ್ಲಿ ಅಧಿಕಾರದ ಹೆಚ್ಚಿನ ಪಾಲು ಬಿಜೆಪಿಗೆ
ಮದ್ದೂರಿನಲ್ಲೂ ಹೀಗೆ ಆಗಿದೆ
ಮದ್ದೂರಿನ ಪುರಸಭೆ ಚುನಾವಣೆಗೆ ವಾರ್ಡ್ 9ರಿಂದ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ರತ್ನಾ ಅವರು ತಮ್ಮ ಪ್ರತಿಸ್ಪರ್ಧಿಯಷ್ಟೆ ಮತ ಗಳಿಸಿದ್ದರು ಹಾಗಾಗಿ ಚೀಟಿ ಹಾಕಲಾಯಿತು. ಅದರಲ್ಲಿ ರತ್ನಾ ಅವರು ವಿಜಯಿಯಾದರು.