ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲೆ-ಕಾಲೇಜು ಆರಂಭಿಸುವ ಬಗ್ಗೆ ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ!

|
Google Oneindia Kannada News

ಬೆಂಗಳೂರು, ಅ. 08: ಶಾಲೆ ಆರಂಭಿಸಲು ರಾಜ್ಯ ಶಿಕ್ಷಣ ಇಲಾಖೆ ಪ್ರಯತ್ನ ನಡೆಸಿರುವಾಗಲೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಮಹತ್ವದ ಸಲಹೆ ಕೊಟ್ಟಿದ್ದಾರೆ. ಈ ಕುರಿತು ಸರ್ಕಾರ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದು ತಮ್ಮ ಅಭಿಪ್ರಾಯ ತಿಳಿಸುವುದಾಗಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಬೆಂಗಳೂರಿನ ಕುಮಾರಕೃಪಾ ರಸ್ತೆಯ ಸರ್ಕಾರಿ ನಿವಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಿದ್ದರಾಮಯ್ಯ ಮಾತನಾಡಿದರು.

ನನ್ನ ಪ್ರಕಾರ ಶಾಲೆ ಪ್ರಾರಂಭ ಮಾಡಬಾರದು. ಕೊರೊನಾ ವೈರಸ್‌ಗೆ ತುತ್ತಾಗುವವರ ಸಂಖ್ಯೆ ಈಗಲೇ ದಿನಕ್ಕೆ 9 ರಿಂದ 10 ಸಾವಿರ ದಾಟುತ್ತಿದೆ. ಪರೀಕ್ಷೆ ಹೆಚ್ಚು ಮಾಡಿದರೆ ಇನ್ನು ಇನ್ನು ಜಾಸ್ತಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಬುದ್ಧಿ ಇರುವ ನಾವೇ ಸರಿಯಾಗಿ ಎಚ್ಚರಿಕೆಯಿಂದ ಇರಲ್ಲ. ಮಾಸ್ಕ್ ದರಿಸಲ್ಲ ಮಕ್ಕಳು ಜಾಗೃತೆಯಿಂದ ಇರ್ತಾವಾ? ನೋಡಿ ನೀವೆ ಮಾಸ್ಕ್ ಹಾಕಿಲ್ಲ ಎಂದು ಮಾಧ್ಯಮದವರನ್ನೇ ಪ್ರಶ್ನೆ ಮಾಡಿದರು.

Siddaramaiah Has Advised The Government Not To Open Schools And Colleges

ಪೋಷಕರು ಒಪ್ಪಲಿ ಬಿಡಲಿ ಸರ್ಕಾರ ಶಾಲೆಗಳನ್ನು ಆರಂಭಿಸಬಾರದು. ನಾನು ಇದನ್ನು ಪ್ರಬಲವಾಗಿ ಒತ್ತಾಯಿಸುತ್ತೇನೆ. ಈ ಒಂದು ವರ್ಷ ಎಲ್ಲಾ ಮಕ್ಕಳನ್ನು ಪ್ರಮೋಶನ್ ಕೊಟ್ಟು ಪಾಸ್ ಮಾಡಲಿ. ಹಾಗೆ ಮಾಡುವುದರಿಂದ ಕಳೆದುಕೊಳ್ಳುವುದು ಏನು ಇಲ್ಲ. ಬೇಕಾದರೆ ಆನ್‌ಲೈನ್ ಕ್ಲಾಸ್ ಬೇಕಾದರೆ ಮಾಡಲಿ. ಯಾವ ಕಾರಣಕ್ಕೂ ಶಾಲೆ ಆರಂಭಿಸಬಾರದು. ಇದು ಕಾಲೇಜು ವಿದ್ಯಾರ್ಥಿಗಳಿಗೂ ಅನ್ವಯ ವಾಗುತ್ತದೆ. ಕಾಲೇಜುಗಳನ್ನು ಆರಂಭಿಸಿವುದು ಬೇಡ ಎಂದು ಒತ್ತಾಯಿಸಿದ್ದಾರೆ.

Recommended Video

Kusuma : ರಾಜಕೀಯ ವ್ಯಾಪಾರ ಅಲ್ಲ ,ಪ್ರತಿ ಸ್ಪರ್ಧಿ ಬಗ್ಗೆ NO TENSION | Oneindia Kannada

ಈ ಸಂಬಂಧ ನಾನು ಸಹಾ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ಇದೊಂದು ವರ್ಷ ಮಕ್ಕಳಿಗೆ ಬಡ್ತಿಕೊಟ್ಟು ಪಾಸ್ ಮಾಡಲಿ, ಏನೂ ಆಗುವುದಿಲ್ಲ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

English summary
Leader of the Opposition Siddaramaiah has advised the government not to open school and colleges,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X