ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಪಂಥಾಹ್ವಾನ ಸ್ವೀಕರಿಸಿ, ಸಿದ್ದರಾಮಯ್ಯರಿಂದ ಟ್ವೀಟ್!

|
Google Oneindia Kannada News

Recommended Video

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ವಾರ್ ಶುರು ಮಾಡಿದ್ದಾರೆ | Oneindia Kannada

ಬೆಂಗಳೂರು, ಜನವರಿ 16: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂಬ ಬೆಳವಣಿಗೆ ಕುರಿತಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ವಾರ್ ಶುರು ಮಾಡಿದ್ದಾರೆ. ಆಪರೇಷನ್ ಕಮಲದ ಸವಾಲನ್ನು ಸ್ವೀಕರಿಸಿ, ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಂತಿದೆ.

ಹರ್ಯಾಣದ ಗುರುಗ್ರಾಮದಲ್ಲಿ ಶಾಸಕರನ್ನು ಬಿಜೆಪಿ ಇರಿಸಿಕೊಂಡಿರುವುದರಿಂದ ಪ್ರಧಾನಿ ಮೋದಿಗೆ ಟ್ವೀಟ್ ಮಾಡಿ, ಶಾಸಕರನ್ನು ಕಾಯುವ ಚೌಕಿದಾರ್ ಆಗಿಬಿಟ್ಟಿದ್ದೀರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದರು.

ಶಾಸಕರನ್ನು ಕಾಯುವ ಚೌಕಿದಾರ್ ಆಗಿಬಿಟ್ಟೀರಲ್ಲಾ ಮೋದಿ: ಸಿದ್ದರಾಮಯ್ಯಶಾಸಕರನ್ನು ಕಾಯುವ ಚೌಕಿದಾರ್ ಆಗಿಬಿಟ್ಟೀರಲ್ಲಾ ಮೋದಿ: ಸಿದ್ದರಾಮಯ್ಯ

ಇದಾದ ಬಳಿಕ ಮತ್ತೊಂದು ಟ್ವೀಟ್ ಮಾಡಿ, ಆಪರೇಷನ್ ಕಮಲಕ್ಕೆ ಕಾಂಗ್ರೆಸ್ ಪ್ರತ್ಯುತ್ತರ ನೀಡಲು ಸಿದ್ಧವಾಗಿದೆ. ರಾಜಕೀಯ ಎಂಬ ಕುಸ್ತಿ ಅಖಾಡದಲ್ಲಿ ಪಟ್ಟುಗಳನ್ನು ಹಾಕಲು ನಾವು ಸಿದ್ಧ, ಕೆಲವು ಬಿಜೆಪಿ ಶಾಸಕರು ನಮ್ಮ ಜತೆ ಸಂಪರ್ಕದಲ್ಲಿದ್ದಾರೆ ಎಂದಿದ್ದಾರೆ.

'ಯಾರೋ ಮೂವರು ಶಾಸಕರು ಹೊರಕ್ಕೆ ಹೋಗಿದ್ದಾರೆ, ಬರ್ತಾರೆ ಬಿಡಿ' ಎಂದು ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು ಸದ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಅವರ ಜತೆ ಮಹತ್ವದ ಚರ್ಚೆ ನಡೆಸಿದ್ದಾರೆ.

ನೇರವಾಗಿ ಮೋದಿ ಟೀಕಿಸಿದ್ದರು.

ನೇರವಾಗಿ ಮೋದಿ ಟೀಕಿಸಿದ್ದರು.

'ಸ್ಥಿರ ಸರ್ಕಾರ ಅಸ್ಥಿರಗೊಳಿಸುವ ಗಂಧಾ ನಿಯತ್ ಬಿಜೆಪಿಯ ಮುಖವಾಡ ಕಳಚಿದ್ದು, ನಿಮ್ಮ ನಿಜವಾದ ನಿಯತ್ತು ಏನೆಂಬುದು ಬಹಿರಂಗಗೊಂಡಿದೆ. ರಾಜ್ಯದ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದ್ದು, ತನ್ನದೇ ಶಾಸಕರನ್ನು ದಿಗ್ಬಂಧನದಲ್ಲಿಟ್ಟು ಅಭದ್ರತೆಯಿಂದ ನರಳುತ್ತಿದೆ' ಎಂದು ಮತ್ತೊಂದು ಟ್ವೀಟ್​ನಲ್ಲಿ ಟೀಕಿಸಿದ್ದರು.

ನಾನು ಈ ದೇಶದ ಪ್ರಧಾನಿಯಲ್ಲ, ಪ್ರಧಾನ ಸೇವಕ, ನಿಮ್ಮನ್ನು ಕಾಯುವ ಚೌಕಿದಾರ ಎಂದು ಮೋದಿ ಅವರು ಅಗಾಗ ಭಾಷಣ ಮಾಡುವುದಿದೆ. ಇದನ್ನೇ ಮುಂದಿಟ್ಟುಕೊಂಡು ರಾಹುಲ್ ಗಾಂಧಿ ಕೂಡಾ ಹಲವು ಬಾರಿ ಮೋದಿಯನ್ನು ಗೇಲಿ ಮಾಡಿದ್ದರು. ಈಗ ಸಿದ್ದರಾಮಯ್ಯ ಅವರು ಕೂಡಾ ವ್ಯಂಗ್ಯಭರಿತ ಟ್ವೀಟ್ ಮಾಡಿದ್ದಾರೆ.

ನಾವೇನು ಕೈಕಟ್ಟಿ ಕೂತಿಲ್ಲ

ರಾಜ್ಯದ ಕೆಲವು ಬಿಜೆಪಿ‌ ಶಾಸಕರು ಕೂಡಾ ನಮ್ಮ ಸಂಪರ್ಕದಲ್ಲಿದ್ದಾರೆ. ನಾವೇನು ಕೈಕಟ್ಟಿ ಕೂತಿಲ್ಲ.‌ ರಾಜಕೀಯದ ಅಖಾಡದಲ್ಲಿ‌ ನಾವೂ ಕುಸ್ತಿ ಆಡಿದವರು, ಪಟ್ಟುಗಳು ನಮಗೂ ಗೊತ್ತು- ಎಂದು ಟ್ವೀಟ್ ಮಾಡಿದ ಸಿದ್ದರಾಮಯ್ಯ

ಸಿದ್ದು ಟ್ವೀಟ್ ಹಾಸ್ಯಭರಿತ ಎಂದು ಬಿಜೆಪಿ ಬೆಂಬಲಿಗರು

ಸಿದ್ದರಾಮಯ್ಯ ಅವರ ಕುಸ್ತಿ ಪಟ್ಟು ಟ್ವೀಟ್ ಹಾಸ್ಯಭರಿತವಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕುಸ್ತಿಪಟ್ಟು ಮಣ್ಣು ಮುಕ್ಕಿದ್ದನ್ನು ನೋಡಿದ್ದೇವೆ ಎಂದು ಬಿಜೆಪಿ ಬೆಂಬಲಿಗರಿಂದ ಪ್ರತ್ಯುತ್ತರ.

ಕಮಲ ಕುದುರೆ ವ್ಯಾಪಾರ ಮಾಡಲಿಲ್ಲವೇ?

ಹೇಳೋದು ಶಾಸ್ತ್ರ ತಿನ್ನೋದು ಬದನೆಕಾಯಿ
ನೀವು ಕಮಲ ಕುದುರೆಗಳನ್ನು ವ್ಯಾಪಾರ ಮಾಡಲು 25ರಿಂದ 30ಕೋಟಿ ಕೊಡುತ್ತಿದ್ದರು ಹೇಗೆ....ಈ ಹಣ ಎಲ್ಲಿಂದ ಬಂತು? ಹೋ ಹೋ ಬಹುಶಃ ಕಳೆದ ಬಾರಿ ಕೇಂದ್ರದಲ್ಲಿ ನಿಮ್ಮ ಅಧಿಕಾರವಿದ್ದಾಗ ಹಗರಣಗಳ ಸರಮಾಲೆ ಇಂದ ಕೊಳ್ಳೆ ಹೊಡೆದ ಹಣ ಇರಬಹುದು ಆಲ್ವಾ ಎಂದು ಸಿದ್ದರಾಮಯ್ಯ ಅವರಿಗೆ ಪ್ರಶ್ನೆ.

ನೀವು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದೇಕೆ?

ಅಧಿಕಾರಕ್ಕಾಗಿಯೇ ಅಲ್ವಾ ರಾಜಕೀಯ ಆಶ್ರಯ ನೀಡಿದ ಜೆಡಿಎಸ್ ಪಕ್ಷವನ್ನು ತಾವೇ ವಿರೋಧಿಸಿದ ಕಾಂಗ್ರೆಸ್ ಅಪ್ಪಿಕೊಂಡಿದ್ದು ಆಗ ನಿಮಗೆ ನಿಷ್ಠೆ ನಿಯತ್ತು ಪದ ಅಪರಿಚಿತವಾಗಿತ್ತೇ?

ಸಿದ್ದಣ್ಣ ನೀವು ಪಟ್ಟು ಹಾಕ್ತಿರೋದು ಯಾರಿಗೆ?

ಸಿದ್ದಣ್ಣ ನೀವು ಪಟ್ಟು ಹಾಕ್ತಿರೋದು ಬಿಜೆಪಿಗೊ ಇಲ್ಲ ಜೆಡಿಎಸ್ ಗೋ..? ಯಡಿಯೂರಪ್ಪನವರಿಗೋ..? ಕುಮಾರಣ್ಣನಿಗೋ?? ಇಲ್ಲಾ ಡಿಕೆಶಿ ಅಣ್ಣನಿಗೋ..?? ಅಂತ ಚೂರು ಕ್ಲಾರಿಫೈ ಮಾಡಿ ಬಿಡಿ..ಯಾಕಂದ್ರೆ ಇದೆ ಕನ್ಫ್ಯೂಷನ್ ಇರೋ ಕಾರಣಕ್ಕೆ ನಿಮ್ಮ 15 ಜನ ಶಾಸಕರು ಮುಂಬೈಗೆ ಹೋಗಿರೋದು ಅಂತ ಕುಮಾರಣ್ಣನಿಗೆ ಗುಪ್ತಚರ ಮಾಹಿತಿ ಬಂದಿದೆ ಅಂತೆ..!!

English summary
Former CM Siddaramaiah has tweeted saying he has accepted the challenge and we also know how to play wrestling in political arena, few BJP MLAs are in contact with Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X