• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದ್ವಿತೀಯ ಪಿಯು ಪ್ರಿಪರೇಟರಿಗೆ ಹಳೆ ಪ್ರಶ್ನೆ ಪತ್ರಿಕೆ? ಇಲಾಖೆ ಸಭೆ ಇಂದು

|

ಬೆಂಗಳೂರು, ಜನವರಿ 3: ಸಚಿವ ಸಂಪುಟ ವಿಸ್ತರಣೆಯಾಗಿದ್ದರೂ ಶಿಕ್ಷಣ ಸಚಿವರ ನೇಮಕ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಬಿಎಸ್‌ಪಿಯ ಮಹೇಶ್ ರಾಜೀನಾಮೆಯಿಂದ ತೆರವಾದ ಶಿಕ್ಷಣ ಖಾತೆಗೆ ಇನ್ನೂ ಸಚಿವರ ನೇಮಕವಾಗಿಲ್ಲ. ಪರೀಕ್ಷೆಗಳೂ ಕೂಡ ಹತ್ತಿರ ಬರುತ್ತಿವೆ.

ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ಹಿಂದಿನ ವರ್ಷ ಮುಖ್ಯ ಪರೀಕ್ಷೆಗೆ ಸಿದ್ಧಪಡಿಸಿದ್ದ ಹೆಚ್ಚುವರಿ ಪ್ರಶ್ನೆ ಪತ್ರಿಕೆಗಳನ್ನು ನೀಡಲು ಪದವಿಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ.

ಪಿಯು ವಿದ್ಯಾರ್ಥಿಗಳು ಮುಚ್ಚಳಿಕೆ ಬರೆದು ಕೊಡುವುದು ಇನ್ನು ಕಡ್ಡಾಯ

ಇಲಾಖೆಯ ಈ ಕ್ರಮಕ್ಕೆ ಪ್ರಾಂಶುಪಾಲರು, ಉಪನ್ಯಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪರೀಕ್ಷೆಗಳು ಸಮೀಪಿಸುತ್ತಿದ್ದರೂ ಖಾಲಿ ಇರುವ ಇಲಾಖೆಗೆ ಸಚಿವರು ಹಾಗೂ ಪಿಯು ಇಲಾಖೆ ನಿರ್ದೇಶಕ ಎರಡೂ ಹುದ್ದೆಗಳನ್ನು ತುಂಬುವ ಕೆಲಸಕ್ಕೆ ಸರ್ಕಾರ ಮುಂದಾಗುತ್ತಿಲ್ಲ. ಸದ್ಯ ಹೆಚ್ಚುವರಿ ನಿರ್ದೇಶಕರು ಇರುವುದರಿಂದ ಸಾರ್ವಜನಿಕರು, ಶೈಕ್ಷಣಿಕ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳ ಸಮಸ್ಯೆಗೆ ತಕ್ಷಣವೇ ಪರಿಹಾರ ದೊರೆಯುತ್ತಿಲ್ಲ.

ಇಲಾಖೆಗೆ ಸಂಬಂಧಿಸಿದ ಕಡತಗಳು ಸರಿಯಾದ ಸಮಯದಲ್ಲಿ ವಿಲೇವಾರಿ ಆಗುತ್ತಿಲ್ಲ. ಇನ್ನು ಸಚಿವರು ಇಲ್ಲದಿರುವುದರಿಂದ ಸದ್ಯ ಈ ಇಲಾಖೆ ಮುಖ್ಯಮಂತ್ರಿಗಳ ಬಳಿ ಇದೆ. ಹೀಗಾಗಿ ಪ್ರಮುಖವಾದ ಯಾವುದೇ ನಿರ್ಣಯಗಳನ್ನು ಮುಖ್ಯಮಂತ್ರಿಗಳ ಬಳಿಯೇ ಕೊಂಡೊಯ್ಯಬೇಕಿದೆ.

ಪಾಫಿಯಾಗಳಿಗೆ ರಹದಾರಿ

ಪಾಫಿಯಾಗಳಿಗೆ ರಹದಾರಿ

ಕಳೆದ ಆಗಸ್ಟ್‌ನಲ್ಲಿ ಶಿಖಾ ಅವರನ್ನು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿಯನ್ನಾಗಿ ವರ್ಗಾವಣೆ ಮಾಡಿದ ಬಳಿಕ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಾದ ಡಾ. ಪಿಸಿ ಜಾಫರ್ ಅವರಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ. ಎರಡು ವರ್ಷದ ಹಿಂದೆ ಪ್ರಶ್ನೆಪತ್ರಿಕೆಗಳು ಸೋರಿಕೆಯಾದ ಸಂದರ್ಭದಲ್ಲೂ ಇಲಾಖೆಗೆ ಕಾಯಂ ನಿರ್ದೇಶಕರು ಇರಲಿಲ್ಲ. ಪ್ರತಿ ಮೂರು ತಿಂಗಳಿಗೊಮ್ಮೆ ನಿರ್ದೇಶಕರನ್ನು ಬದಲಾಯಿಸುವ ಮೂಲಕ ನಿರ್ಲಕ್ಷ್ಯ ವಹಿಸಿದ್ದೇ ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣವಾಗಿತ್ತು ಎಂದು ಹಲವು ಶಿಕ್ಷಣ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ನಾಲ್ಕು ವರ್ಷಗಳಲ್ಲಿ ಎಂಟು ನಿರ್ದೇಶಕರ ಎತ್ತಂಗಡಿ

ನಾಲ್ಕು ವರ್ಷಗಳಲ್ಲಿ ಎಂಟು ನಿರ್ದೇಶಕರ ಎತ್ತಂಗಡಿ

2012ರಿಂದ 2016ರವರೆಗೆ ನಾಲ್ಕು ವರ್ಷಗಳಲ್ಲಿ ಎಂಟು ನಿರ್ದೇಶಕರನ್ನು ವರ್ಗಾವಣೆ ಮಾಡಲಾಗಿತ್ತು. ಹೊಸದಾಗಿ ಅಧಿಕಾರ ವಹಿಸಿಕೊಂಡ ಅಧಿಕಾರಿಗಳು ಇಲಾಖೆಯಲ್ಲಿನ ಆಡಳಿತದ ಮೇಲೆ ಹಿಡಿತ ಸಾಧಿಸುವ ಮುನ್ನವೇ ಅವರನ್ನು ಬೇರೊಂದು ಇಲಾಖೆಗೆ ಎತ್ತಂಗಡಿ ಮಾಡುತ್ತಿದ್ದ ಪರಿಣಾಮ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಹಲವು ಸಮಸ್ಯೆಗಳು ಉದ್ಭವಿಸಿದ್ದವು.

3 ವರ್ಷಗಳಿಂದ ವರ್ಗಾವಣೆ ಸ್ಥಗಿತ: ಉಪವಾಸಕ್ಕೆ ಮುಂದಾದ ಶಿಕ್ಷಕರು

ಶಿಕ್ಷಣ ಇಲಾಖೆ ಸಭೆ ಇಂದು

ಶಿಕ್ಷಣ ಇಲಾಖೆ ಸಭೆ ಇಂದು

ದ್ವತೀಯ ಪಿಯುಸಿ ಪಠ್ಯಕ್ರಮಗಳು ಪೂರ್ಣಗೊಂಡು ಪುನರಾವರ್ತನೆ ತರಗತಿಗಳು ನಡೆಯುತ್ತಿವೆ. ವಾರ್ಷಿಕ ಪರೀಕ್ಷೆಯ ಯಾವ ಮಾದರಿ ಪ್ರಶ್ನೆಗಳಿರುತ್ತವೆ ಎಂಬುದು ವಿದ್ಯಾರ್ಥಿಗಳಿಗೆ ತಿಳಿಯಲಿ ಎಂಬ ಉದ್ದೇಶದಿಂದ ಕಳೆದ ಬಾರಿಯ ವಾರ್ಷಿಕ ಪರೀಕ್ಷೆಯ ಹೆಚ್ಚುವರಿ ಪ್ರಶ್ನೆಪತ್ರಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಜನವರಿ 3ರಂದು ಸಭೆಯ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಕಾರ್ಯದರ್ಶಿ ಎಸ್‌ಆರ್ ಉಮಾಶಂಕರ್ ತಿಳಿಸಿದ್ದಾರೆ.

ಇಲಾಖೆಯ ಈ ಕ್ರಮಕ್ಕೆ ತೀವ್ರ ವಿರೋಧ

ಇಲಾಖೆಯ ಈ ಕ್ರಮಕ್ಕೆ ತೀವ್ರ ವಿರೋಧ

ಇಲಾಖೆಯ ಈ ಕ್ರಮಕ್ಕೆ ಉಪ ನಿರ್ದೇಶಕರು, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಚಾರ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಪಿಯುಸಿ ಪರೀಕ್ಷಾ ವ್ಯವಸ್ಥೆ ಮೇಲೆ ಅನುಮಾನ ಮತ್ತು ಅಪನಂಬಿಕೆ ಸೃಷ್ಟಿಯಾಗಲಿದೆ.

ಉಪನ್ಯಾಸಕರಿಗೆ ಚೆಕ್‌ಪೋಸ್ಟ್ ಕೆಲಸಕೊಟ್ಟ ಚುನಾವಣಾ ಆಯೋಗ

English summary
PU department is decided to use last year additional question paper for preparatory exam. But lectures are making objections for this step.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X