Pomegranate Juice Benefits: 6 ದಿನಗಳಲ್ಲಿ ಕಾಣುವ ಆರೋಗ್ಯ ಬದಲಾವಣೆಗಳು
ದಾಳಿಂಬೆ ಇದು ಕೇವಲ ರುಚಿಕರವಾದ ಹಣ್ಣು ಮಾತ್ರ ಅಲ್ಲಾ. ಅದು ನಮ್ಮ ಆರೋಗ್ಯಕ್ಕೆ ಶಕ್ತಿ ತುಂಬುವ ಪೋಷಕಾಂಶಗಳಿರುವ ಭಂಡಾರವೆ ಆಗಿದೆ. ಸಾಮಾನ್ಯವಾಗಿ ನಾವು ಇದನ್ನು ದಿನ ನಿತ್ಯ ಸೇವಿಸುವುದಿಲ್ಲಾ ಕೆಲವೊಮ್ಮೆ ಮಾತ್ರ ಸೇವಿಸುತ್ತೇವೆ. ಆದರೆ ನಾವು ಇದನ್ನು ದಿನ ನಿತ್ಯ ಸೇವಿಸುವುದರಿಂದ ಕೇವಲ ಒಂದು ವಾರದಲ್ಲಿ ದೇಹದಲ್ಲಿ ಆಗುವ ಗಮನಾರ್ಹ ಬದಲಾವಣೆಳನ್ನು ನಾವು ಕಾಣಬಹುದು ಎಂದು ತಜ್ಞರು ಹೇಳುತ್ತಾರೆ. ಹೃದಯದ ಆರೋಗ್ಯ ಸುಧಾರಿಸುತ್ತದೆ, ಚರ್ಮದ ಕಾಂತಿಯು ಹೆಚ್ಚುತ್ತದೆ, ದೇಹದಲ್ಲಿ ಶಕ್ತಿಯು ಹೆಚ್ಚುತ್ತದೆ ಹಾಗೂ ಜೀರ್ಣಕ್ರಿಯೆಯಿಂದ ಹಿಡಿದು ಅನೇಕ ಆರೋಗ್ಯ ಸುಧಾರಿಸುವ ಹಲವು ಲಾಭಗಳು ಇದರಿಂದ ದೊರೆಯುತ್ತದೆ.
ದಿನ 1 ಶಕ್ತಿ ಹೆಚ್ಚಳ, ರಕ್ತ ಪರಿಚಲನೆಗೆ ಸಹಾಯ
ದಾಳಿಂಬೆ ಹಣ್ಣಿನ ರಸದಲ್ಲಿ ನೈಸರ್ಗಿಕ ನೈಟ್ರೇಟ್ಗಳು ಇರುವುದರಿಂದ ನಮ್ಮ ದೇಹದಲ್ಲಿರುವ ರಕ್ತನಾಳಗಳು ವಿಸ್ತಾರವಾಗುತ್ತವೆ. ಇದರಿಂದ ರಕ್ತ ಪರಿಚಲನೆ ಸುಧಾರಿಸಿ ದೇಹಕ್ಕೆ ಆಮ್ಲಜನಕ ಸರಿಯಾಗಿ ತಲುಪುತ್ತದೆ.

ದಿನ 2 ರಕ್ತ ಪರಿಚಲನೆಗೆ ಸಹಾಯ
ಎರಡು ದಿನಗಳಲ್ಲಿ ನೀವು ಹೆಚ್ಚು ಚುರುಕಾಗಿ, ಕಡಿಮೆ ಆಯಾಸದಿಂದ ಇರುವುದನ್ನು ಅನುಭವಿಸಬಹುದು.
ದಿನ 3: ಚರ್ಮದಲ್ಲಿ ಕಾಂತಿ
ರೋಗನಿರೋಧಕ ಶಕ್ತಿಯಿಂದ ಸಮೃದ್ಧವಾದ ಈ ರಸವು ಚರ್ಮದ ಒಳಗಿನ ಕೋಶಗಳನ್ನು ಪುನರ್ನಿರ್ಮಾಣ ಮಾಡಲು ಸಹಾಯ ಮಾಡುತ್ತದೆ. ಕೆಲವು ದಿನಗಳಲ್ಲಿ ಚರ್ಮ ತಾಜಾ, ಮೃದುವಾಗಿದ್ದು ಹೊಳೆಯುವಂತೆ ಕಾಣಲು ಪ್ರಾರಂಭಿಸುತ್ತದೆ. ಮೊಡವೆ ಗುರುತುಗಳು ಮತ್ತು ಮಂದತೆ ಕಡಿಮೆಯಾಗಲು ಸಹಾಯವಾಗುತ್ತದೆ.
ದಿನ 4: ಹೃದಯ ಆರೋಗ್ಯದಲ್ಲಿ ಸುಧಾರಣೆ
ದಾಳಿಂಬೆ ರಸವು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ರಕ್ತದೊತ್ತಡವನ್ನು ಸಮತೋಲನದಲ್ಲಿಡುತ್ತದೆ ಮತ್ತು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಅಪಧಮನಿಗಳಲ್ಲಿ ಕೊಬ್ಬು ಸಂಗ್ರಹವಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.
ದಿನ 5: ರೋಗನಿರೋಧಕ ಶಕ್ತಿ
ವಿಟಮಿನ್ C ಮತ್ತು ಇ ಇವುಗಳಿಂದ ಸಮೃದ್ಧವಾದ ದಾಳಿಂಬೆ ರಸವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಶೀತ, ಕೆಮ್ಮು ಮತ್ತು ಇತರ ಸಾಮಾನ್ಯ ಸೋಂಕುಗಳಿಂದ ರಕ್ಷಣೆ ನೀಡುತ್ತದೆ.
ದಿನ 6: ಜೀರ್ಣಕ್ರಿಯೆ
ವಾರದ ಅಂತ್ಯದ ವೇಳೆಗೆ ಜೀರ್ಣಾಂಗ ವ್ಯವಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸಲು ಆರಂಭಿಸುತ್ತದೆ. ಹೊಟ್ಟೆ ಉಬ್ಬರ, ಮಲಬದ್ಧತೆ ಮತ್ತು ಮುಂತಾದ ಸಮಸ್ಯೆಗಳು ಕಡಿಮೆಯಾಗುತ್ತವೆ. ದೇಹ ಒಳಗಿನಿಂದ ಹಗುರವಾದ ಅನುಭವ ಆಗುತ್ತದೆ.
ಮನೆಯಲ್ಲಿ ತಾಜಾ ದಾಳಿಂಬೆ ರಸ ತಯಾರಿಸುವುದು ಸುಲಭ:
* ದಾಳಿಂಬೆ ಬೀಜಗಳನ್ನು ತೆಗೆದು ತೊಳೆಯಿರಿ
* ಕೆಲವು ಪುದೀನ ಎಲೆಗಳನ್ನು ಸೇರಿಸಿ ಮಿಶ್ರಣ ಮಾಡಿ
* ಹೆಚ್ಚು ಮಿಕ್ಸ್ ಮಾಡದೆ ರಸವನ್ನು ಸೋಸಿ
* ರುಚಿಗೆ ಸ್ವಲ್ಪ ನಿಂಬೆ ರಸ ಮತ್ತು ಕಪ್ಪು ಉಪ್ಪು ಅಥವಾ ಜೇನು ಸೇರಿಸಬಹುದು
* ತಯಾರಿಸಿದ 10-15 ನಿಮಿಷಗಳಲ್ಲಿ ಕುಡಿಯುವುದು ಉತ್ತಮ
ಮೂತ್ರಪಿಂಡ ಸಮಸ್ಯೆಗಳು ಅಥವಾ ಮಧುಮೇಹ ಔಷಧಿಗಳನ್ನು ತೆಗೆದುಕೊಳ್ಳುವವರು ಇದನ್ನು ನಿಯಮಿತವಾಗಿ ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಪ್ರತಿದಿನ ಒಂದು ಗ್ಲಾಸ್ ದಾಳಿಂಬೆ ರಸ ಕುಡಿಯುವುದು ಸಣ್ಣ ಅಭ್ಯಾಸವಾಗಿ ಕಾಣಬಹುದು. ಆದರೆ ಕೇವಲ 7 ದಿನಗಳಲ್ಲಿ ದೇಹ ಮತ್ತು ಮನಸ್ಸಿನಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಬಲ್ಲ ಆರೋಗ್ಯಕರ ಕ್ರಮವಾಗಿದೆ.
-
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
ಬೆಳಿಗ್ಗೆ ನಿಂಬೆ ಹಣ್ಣಿನ ರಸ ಕುಡಿಯುತ್ತಿದ್ದೀರಾ? ಲಾಭಗಳ ಜೊತೆ ಈ ಅಪಾಯಗಳೂ ಇವೆ -
ಕಣ್ಣು ಸಮಸ್ಯೆಗಳು ಹೆಚ್ಚುತ್ತಿವೆಯೇ? ಈ ಆಹಾರಗಳು ನಿಮ್ಮ ದೃಷ್ಟಿಯನ್ನು ರಕ್ಷಿಸುತ್ತವೆ -
ವಾಸ್ತು ಪ್ರಕಾರ ಮನೆ ನಿರ್ಮಾಣದಲ್ಲಿ ದೇವರ ಕೋಣೆ ಪ್ರತ್ಯೇಕವಾಗಿರಬೇಕಾ? ಇಲ್ಲಿದೆ ಸ್ಪಷ್ಟನೆ -
ಬಿಸಿಲಿನ ತಾಪಕ್ಕೆ ಕಳೆಗುಂದಿದೆಯೇ ಮುಖದ ಕಾಂತಿ? ಬೇಸಿಗೆಯಲ್ಲಿ ತ್ವಚೆಯ ರಕ್ಷಣೆಗೆ ಇಲ್ಲಿವೆ 12 ಸರಳ ಸೂತ್ರ -
Powerful Vastu Plants: ಮನೆಗೆ ಪಾಸಿಟಿವ್ ಎನರ್ಜಿ ಬೇಕಾ? ಈ ಸಸ್ಯಗಳನ್ನು ಇಡಿ, ಜೀವನವೇ ಬದಲಾಗುತ್ತದೆ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು














Click it and Unblock the Notifications