ವಾಸ್ತು ಪ್ರಕಾರ ಮನೆ ನಿರ್ಮಾಣದಲ್ಲಿ ದೇವರ ಕೋಣೆ ಪ್ರತ್ಯೇಕವಾಗಿರಬೇಕಾ? ಇಲ್ಲಿದೆ ಸ್ಪಷ್ಟನೆ

ಮನೆ ನಿರ್ಮಾಣದಲ್ಲಿ ವಾಸ್ತು ಶಾಸ್ತ್ರಕ್ಕೆ ನಾವು ತುಂಬಾ ಮಹತ್ವ ನೀಡುತ್ತೇವೆ. ಆದರೆ ಇಲ್ಲಿ ಒಂದು ಸಾಮಾನ್ಯ ಪ್ರಶ್ನೆ ಹುಟ್ಟುತ್ತದೆ ಅದೆನೆಂದರೆ, ದೇವರ ಕೋಣೆ ಪ್ರತ್ಯೇಕವಾಗಿ ಮಾಡಬೇಕಾ? ಅಥವಾ ಜೊತೆಗೆ ಮಾಡಬೇಕಾ ಮತ್ತು ಮೃತರ ಫೋಟೋಗಳನ್ನು ಪೂಜಾ ಕೋಣೆಯಲ್ಲಿ ಇಡಬಹುದೇ? ಎಂಬುದಾಗಿದೆ. ಈ ಬಗ್ಗೆ ವಾಸ್ತು ತಜ್ಞರ ಅಭಿಪ್ರಾಯಗಳು ಭಿನ್ನವಾಗಿದ್ದು, ಜನರಲ್ಲಿ ಗೊಂದಲವೂ ಕೂಡ ಇದೆ.

ಸಾಮಾನ್ಯವಾಗಿ ವಾಸ್ತು ಪ್ರಕಾರ ದೇವರ ಕೋಣೆಗೆ ಈಶಾನ್ಯ ದಿಕ್ಕು (ಈಶಾನ್ಯ ಮೂಲೆಯು) ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಆದರೆ ಈ ದಿಕ್ಕಿನಲ್ಲಿ ಹೆಚ್ಚು ತೂಕ ಅಥವಾ ಭಾರವಾದ ವಸ್ತುಗಳನ್ನು ಇಡುವುದು ಸರಿಯಲ್ಲ ಎಂದು ಕೆಲ ತಜ್ಞರು ಹೇಳುತ್ತಾರೆ. ಕೆಲವರು ದೇವರ ಮೂರ್ತಿಗಳನ್ನು ಅಥವಾ ಪೋಟೊಗಳನ್ನು ಪೂರ್ವಾಭಿಮುಖವಾಗಿ ಇಡಲು ಸಲಹೆ ನೀಡುತ್ತಾರೆ, ಅಂದರೆ ನಾವು ಪೂಜೆ ಮಾಡುವಾಗ ಪೂರ್ವ ದಿಕ್ಕಿನತ್ತ ಮುಖವಾಗಿರಬೇಕು.

Vastu Tips for Pooja Room

ದೇವರ ಕೋಣೆ ಪ್ರತ್ಯೇಕವಾಗಿದ್ದರೆ ಪ್ರಾರ್ಥನೆ ವೇಳೆ ಮನಸ್ಸು ಹೆಚ್ಚು ಏಕಾಗ್ರವಾಗುತ್ತದೆ ಎಂದು ವಾಸ್ತು ಸೂಚಿಸುತ್ತದೆ. ಆದರೆ ಸಣ್ಣ ಮನೆಗಳಲ್ಲಿ ಪ್ರತ್ಯೇಕ ಕೋಣೆ ಮಾಡಲು ಸಾಧ್ಯವಿಲ್ಲದಿದ್ದರೆ, ಸ್ವಚ್ಛವಾದ ಮತ್ತು ಶಾಂತವಾದ ಈಶಾನ್ಯ ದಿಕ್ಕಿನ ಒಂದು ಮೂಲೆಯಲ್ಲಿ ಸಣ್ಣದಾಗಿ ಪೂಜೆ ಮಾಡುವ ಕೋಣೆಯನ್ನು ನಿರ್ಮಿಸಬಹುದು.

ವಾಸ್ತು ಪ್ರಕಾರ ಇನ್ನೂ ಕೆಲವು ಪ್ರಮುಖ ನಿಯಮಗಳೂ ಇವೆ. ದೇವರ ಕೋಣೆ ಮಲಗುವ ಕೋಣೆಯ ಪಕ್ಕದಲ್ಲಿ ಇರಬಾರದು. ಅದರ ಹಿಂದಿನ ಗೋಡೆಗೆ ಸ್ನಾನಗೃಹ ಅಥವಾ ಶೌಚಾಲಯ ಇರಬಾರದು. ಹಾಗೆಯೇ ಮೆಟ್ಟಿಲುಗಳ ಕೆಳಗೆ ದೇವರ ಕೋಣೆಯನ್ನು ನಿರ್ಮಿಸುವುದರಿಂದ ವಾಸ್ತು ದೋಷ ಎಂದು ಪರಿಗಣಿಸಲಾಗುತ್ತದೆ.

ಮೃತರ ಫೋಟೋಗಳ ವಿಷಯದಲ್ಲಿ ವಾಸ್ತು ತಜ್ಞರ ಅಭಿಪ್ರಾಯಗಳು ವಿಭಿನ್ನವಾಗಿವೆ. ಕೆಲವು ಜನರು ಭಕ್ತಿ ಮತ್ತು ಗೌರವದಿಂದ ಪೂಜಾ ಕೋಣೆಯಲ್ಲೇ ಇಡುತ್ತಾರೆ. ಆದರೆ ವಾಸ್ತು ಪ್ರಕಾರ ದೇವತೆಗಳು ಮತ್ತು ಪಿತೃಗಳು ವಿಭಿನ್ನವಾಗಿದ್ದು, ಪೂಜಾ ಕೋಣೆಯಲ್ಲಿ ಮೃತರ ಫೋಟೋಗಳನ್ನು ಇಡುವುದನ್ನು ಒಳ್ಳೆಯದಲ್ಲಾ ಎಂದು ಹೇಳಲಾಗುತ್ತದೆ.

ಮೃತರ ಫೋಟೋಗಳನ್ನು ಮನೆಯ ದಕ್ಷಿಣ ಅಥವಾ ನೈಋತ್ಯ ದಿಕ್ಕಿನ ಗೋಡೆ ಮೇಲೆ ಇಡುವುದು ಸೂಕ್ತ. ಫೋಟೋಗಳು ಉತ್ತರದತ್ತ ಮುಖವಾಗಿರಬೇಕು. ಪಿತೃಗಳ ಚಿತ್ರಗಳನ್ನು ದೇವತೆಗಳ ಜೊತೆ ಅಥವಾ ಅವುಗಳಿಗಿಂತ ಎತ್ತರದಲ್ಲಿ ಇಡುವುದನ್ನು ಒಳ್ಳೆಯದಲ್ಲಾ.

ದೇವರ ಕೋಣೆಯನ್ನು ಪ್ರತ್ಯೇಕವಾಗಿ ಇಡುವುದು ಉತ್ತಮ ಆದರೂ, ಸಾಧ್ಯತೆಗಳ ಆಧಾರದ ಮೇಲೆ ಸರಿಯಾದ ದಿಕ್ಕು ಮತ್ತು ನಿಯಮಗಳನ್ನು ಪಾಲಿಸುವುದು ಮುಖ್ಯ. ಮೃತರ ಫೋಟೋಗಳನ್ನು ಪೂಜಾ ಕೋಣೆಯಲ್ಲಿ ಇಡುವುದಕ್ಕಿಂತ ಬೇರೆ ಸ್ಥಳದಲ್ಲಿ ಆಯ್ಕೆ ಮಾಡಿ ಗೌರವದಿಂದ ಇಡುವುದು ವಾಸ್ತು ದೃಷ್ಟಿಯಿಂದ ಉತ್ತಮ ಎನ್ನಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+