ಬೆಂಗಳೂರಲ್ಲಿ ರಾಷ್ಟ್ರೀಯ ಜನಗಣತಿ ಆರಂಭ: ಗೈರಾದ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕ್ಕದ್ದಮೆ! ಖಡಕ್ ಎಚ್ಚರಿಕೆ
National Census 2027: ರಾಷ್ಟ್ರೀಯ ಜನಗಣತಿ -2027 ಕಾರ್ಯ ಏಪ್ರಿಲ್ 1ರಿಂದ ಎಲ್ಲೆಡೆ ಆರಂಭವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಜನಗಣತಿ ಇನ್ನೇನು ಶುರುವಾಗಲಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ (ಜಿಬಿಎ) ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಗಣತಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಷ್ಟ್ರೀಯ ಜನಗಣತಿ-2027 ಮನೆಪಟ್ಟಿ ಮತ್ತು ವಸತಿ ಗಣತಿ ಕಏಪ್ರಿಲ್ 16 ರಿಂದ ಮೇ 15ರವರೆಗೆ ನಡೆಯಲಿದೆ. ಈ ಸಮೀಕ್ಷೆ ಕಾರ್ಯಕ್ಕೆ 4678 ಗಣತಿದಾರರು, 798 ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ.
ಜನಗಣತಿ ಸಿಬ್ಬಂದಿಗೆ ಏಪ್ರಿಲ್ 06 ರಿಂದ 08 ರವರೆಗೆ ಒಟ್ಟು 16 ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ನೀಡಿರುವ ಆದೇಶದಲ್ಲಿ ತರಬೇತಿ ಸ್ಥಳ ಹಾಗೂ ದಿನಾಂಕಗಳನ್ನು ನಿಗದಿಪಡಿಸಲಾಗಿರುತ್ತದೆ. ತರಬೇತಿ ಕಾರ್ಯಕ್ಕೆ ಜನಗಣತಿ ಸಿಬ್ಬಂದಿ ಕಡ್ಡಾಯವಾಗಿ ಹಾಜರಾಗತಕ್ಕದ್ದು. ತಪ್ಪಿದಲ್ಲಿ,ಅಂತಹ ಸಿಬ್ಬಂದಿ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್ ರಮೇಶ್ ಅವರು ಎಚ್ಚರಿಸಿದ್ದಾರೆ.

ಯಾವೆಲ್ಲ ಕ್ರಮ ಜರುಗಿಸುವುದಾಗಿ ಪಾಲಿಕೆ ಎಚ್ಚರಿಸಿದೆ
* ಜನಗಣತಿ ಕಾಯ್ದೆ 1948 ರ ಸೆಕ್ಷನ್ 11 ಪ್ರಕಾರ ತಮ್ಮ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.
* ನೀಡಲಾದ ಆದೇಶಗಳನ್ನು ಪಾಲಿಸದಿದ್ದಕ್ಕಾಗಿ, ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ, 2023 ರ ಕಲಂ 223 ಅಡಿಯಲ್ಲಿ ಪ್ರಥಮ ವರ್ತಮಾನ ವರದಿ (FIR) ದಾಖಲಿಸುವುದು.
* ಸಂಪೂರ್ಣ ದುರ್ನಡತೆ ಮತ್ತು ಅವಿಧೇಯತೆಗಾಗಿ ಅಮಾನತ್ತು ಮತ್ತು ಶಿಸ್ತು ಕ್ರಮಗಳನ್ನು ಕೈಗೊಳ್ಳಲಾಗುವುದು.
* ಅನಧಿಕೃತ ಗೈರುಹಾಜರಿಯನ್ನು (ಕೆಲಸ ಮಾಡದ ದಿನ) ಎಂದು ಪರಿಗಣಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸಿಬ್ಬಂದಿಗೆ ಅಗತ್ಯ ತರಬೇತಿ
ಏಪ್ರಿಲ್ 1ರಿಂದಲೇ ಬೆಂಗಳೂರು ಕೇಂದ್ರ ನಗರ ಪಾಲಿಕೆ ವತಿಯಿಂದ ರಾಷ್ಟ್ರೀಯ ಜನಗಣತಿ-2027 ಶುರುವಾಗಿದೆ. ಇದರ ಅಂಗವಾಗಿ ಏಪ್ರಿಲ್ 1 ರಿಂದ ಮನೆ ಪಟ್ಟಿ ಮತ್ತು ಮನೆ ಗಣತಿ ಕಾರ್ಯ ನಡೆಸಲಾಗುತ್ತಿದೆ. ಜನಗಣತಿ ಕಾರ್ಯವನ್ನು ಸಮರ್ಪಕವಾಗಿ ಹಾಗೂ ಸಮಯೋಚಿತವಾಗಿ ಕೈಗೊಳ್ಳಲಾಗುತ್ತಿದೆ.
ಗಣತಿ ಸುಸೂತ್ರವಾಗಿ ನಡೆಸಲು ಅನುಕೂಲವಾಗುವಂತೆ ಫೀಲ್ಡ್ ಟ್ರೈನರ್ ಗಳಿಗೆ, ಚಾರ್ಜ್ ಆಫೀಸರ್ಸ್ ಗಳಿಗೆ, ಕಂದಾಯ ಅಧಿಕಾರಿಗಳಿಗೆ, ಟೆಕ್ನಿಕಲ್ ಅಸಿಸ್ಟೆಂಟ್ ಗಳಿಗೆ ಗಣತಿ ಕಾರ್ಯದ ಮುಖ್ಯ ಪಾತ್ರವಹಿಸುವ 6 ವಿಧಾನಸಭಾ ಕ್ಷೇತ್ರವಾರು ನೇಮಕಗೊಂಡ ಸಿಬ್ಬಂದಿಗೆ ಅಪರ ಆಯುಕ್ತರ ನೇತೃತ್ವದಲ್ಲಿ ತರಬೇತುದಾರರಿಂದ ಟ್ರೈನಿಂಗ್ ನೀಡಲಾಗಿದೆ ಎಂದು ಆಯುಕ್ತರಾದ ರಾಜೇಂದ್ರ ಚೋಳನ್ ಮಾಹಿತಿ ನೀಡಿದ್ದಾರೆ.












Click it and Unblock the Notifications