ಕಣ್ಣು ಸಮಸ್ಯೆಗಳು ಹೆಚ್ಚುತ್ತಿವೆಯೇ? ಈ ಆಹಾರಗಳು ನಿಮ್ಮ ದೃಷ್ಟಿಯನ್ನು ರಕ್ಷಿಸುತ್ತವೆ
ನಮ್ಮ ಇಂದಿನ ಜೀವನದ ಶೈಲಿಯಲ್ಲಿ ಕಣ್ಣಿನ ಸಮಸ್ಯೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ದೀರ್ಘ ಸಮಯ ಮೊಬೈಲ್, ಲ್ಯಾಪ್‌ಟಾಪ್ ಬಳಕೆ, ಪರಿಸರ ಮಾಲಿನ್ಯ ಮತ್ತು ನಮ್ಮ ಆಹಾರ ಪದ್ಧತಿಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ವೈದ್ಯರು ಸೂಚಿಸುತ್ತಾರೆ. ಈ ಹಿನ್ನೆಲೆಯಲ್ಲಿ ನಾವು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಿಯಾದ ಪೌಷ್ಟಿಕ ಆಹಾರ ಸೇವನೆ ಮಾಡುವುದು ಅತ್ಯಗತ್ಯವೆಂದು ಸಲಹೆ ನೀಡುತ್ತಾರೆ.
ಕಣ್ಣುಗಳ ಆರೋಗ್ಯಕ್ಕೆ ವಿಟಮಿನ್ ಎ, ಸಿ, ಇ, ಸತು (ಜಿಂಕ್) ಹಾಗೂ ಒಮೆಗಾ-3 ಕೊಬ್ಬಿನ ಅಂಶಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಇವು ಕಣ್ಣಿನ ರೆಟಿನಾವನ್ನು ರಕ್ಷಿಸುವುದಲ್ಲದೆ, ಕಣ್ಣಿನ ಪೊರೆ, ಮ್ಯಾಕ್ಯುಲರ್ ಡಿ-ಜನರೇಷನ್ ಮತ್ತು ಒಣ ಕಣ್ಣುಗಳಂತಹ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ಹಸಿರು ತರಕಾರಿಗಳು ಕಣ್ಣಿನ ಆರೋಗ್ಯಕ್ಕೆ ಬಹಳ ಉಪಯುಕ್ತಕಾರಿ ಆಗಿವೆ. ಲೆಟಿಸ್ ಸೊಪ್ಪು, ಮೆಂತ್ಯ ಸೊಪ್ಪು ಮೊದಲಾದ ಹಸಿರು ತರಕಾರಿಗಳಲ್ಲಿ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಅಂಶಗಳು ಸಮೃದ್ಧವಾಗಿವೆ. ಇವು ಕಣ್ಣಿನ ರೆಟಿನಾವನ್ನು ರಕ್ಷಿಸಿ ದೃಷ್ಟಿಯನ್ನು ಉತ್ತಮಗೊಳಿಸುತ್ತವೆ. ದಿನನಿತ್ಯದ ಆಹಾರದಲ್ಲಿ ಈ ತರಕಾರಿಗಳನ್ನು ಸೇರಿಸುವುದು ಒಳ್ಳೆಯದು.
ಕ್ಯಾರೆಟ್, ಕುಂಬಳಕಾಯಿ ಮತ್ತು ಸಿಹಿ ಗೆಣಸುಗಳಲ್ಲಿ ಬೀಟಾ-ಕ್ಯಾರೋಟಿನ್ ಅಧಿಕವಾಗಿದ್ದು, ಇದು ವಿಟಮಿನ್ ಎ-ಗೆ ಪಡೆಯಲು ತುಂಬಾ ಅನುಕೂಲಕರ ಆಗಿವೆ. ವಿಟಮಿನ್ ಎ ಕಣ್ಣಿನ ಕಾರ್ನಿಯಾವನ್ನು ರಕ್ಷಿಸಿ, ಕಡಿಮೆ ಬೆಳಕಿನಲ್ಲೂ ಸ್ಪಷ್ಟವಾಗಿ ನೋಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಹಣ್ಣುಗಳಲ್ಲಿಯೂ ಕಣ್ಣಿನ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಳು ಸಿಗುತ್ತವೆ. ಆಮ್ಲಾ, ಕಿತ್ತಳೆ ಮೊದಲಾದ ಸಿಟ್ರಸ್ ಹಣ್ಣುಗಳು ವಿಟಮಿನ್ ಸಿ ನೀಡುತ್ತವೆ. ಇವು ಕಣ್ಣಿನ ರಕ್ತನಾಳಗಳನ್ನು ಬಲಪಡಿಸಿ ದೃಷ್ಟಿ ಆರೋಗ್ಯವನ್ನು ಸದಾ ಆರೋಗ್ಯಕರವಾಗಿ ಇರಲು ಸಹಾಯಮಾಡುತ್ತವೆ.
ಬಾದಾಮಿ, ವಾಲ್ನಟ್ ಮತ್ತು ಅಗಸೆ ಬೀಜಗಳು ವಿಟಮಿನ್ ಇ ಹಾಗೂ ಆರೋಗ್ಯಕರ ಕೊಬ್ಬಿನ ಅಂಶಗಳು ಇದರಲ್ಲಿ ಸಮೃದ್ಧವಾಗಿವೆ. ಇವು ಕಣ್ಣಿನ ಕೋಶಗಳನ್ನು ಹಾನಿ ಆಗುವುದನ್ನು ರಕ್ಷಿಸುವುದಲ್ಲದೆ, ಒಮೆಗಾ-3 ಅಂಶಗಳ ಮೂಲಕ ಕಣ್ಣಿನ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತವೆ.
ನುಗ್ಗೆಕಾಯಿ ಎಲೆಗಳು ಮತ್ತು ಬೀಜಗಳು ಕೂಡ ಪೋಷಕಾಂಶಗಳ ಭಂಡಾರವಾಗಿವೆ. ಇವು ವಿಟಮಿನ್ ಎ, ಸಿ, ಕ್ಯಾಲ್ಸಿಯಂ ಮತ್ತು ಕಬ್ಬಿಣವನ್ನು ಒದಗಿಸಿ ಕಣ್ಣುಗಳ ಜೊತೆಗೆ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ತುಂಬಾ ಮಹತ್ವದ ಪಾತ್ರವನ್ನುವಹಿಸುತ್ತವೆ ಎಂದು ಹೆಳಲಾಗುತ್ತದೆ.
ನಾವು ಸರಿಯಾದ ಆಹಾರ ಪದ್ಧತಿ, ಮೊಬೈಲ್, ಲ್ಯಾಪ್‌ಟಾಪ್ ಬಳಕೆ ಸಮಯವನ್ನು ಕಡಿಮೆ ಮಾಡುವುದು ಮತ್ತು ಕಣ್ಣುಗಳಿಗೆ ವಿಶ್ರಾಂತಿ ನೀಡುವುದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳವುದು ಅತ್ಯಂತ ಮುಖ್ಯವಾಗಿದೆ ಎಂದು ಆರೋಗ್ಯ ತಜ್ಙರು ಅಭಿಪ್ರಾಯ ಪಡುತ್ತಾರೆ.












Click it and Unblock the Notifications