ನಾವು ಸೇವಿಸುವ ಈ ಆಹಾರಗಳಲ್ಲಿ ಆಲ್ಕೋಹಾಲ್ ಇರುತ್ತದೆ.. ಇದು ನಿಮಗೆ ಗೊತ್ತಿರಲಿ
ಸಾಮಾನ್ಯವಾಗಿ ಆಲ್ಕೋಹಾಲ್ ಎಂದರೆ ಮದ್ಯಪಾನ ಎನ್ನುವ ಭಾವನೆ ನಮ್ಮಲ್ಲಿದೆ. ಆದರೆ ವಾಸ್ತವದಲ್ಲಿ ನಾವು ಪ್ರತಿದಿನ ತಿನ್ನುವ ಕೆಲವು ಆಹಾರಗಳಲ್ಲಿ ಸಹ ಅತಿ ಕಡಿಮೆ ಪ್ರಮಾಣದಲ್ಲಿ ಆಲ್ಕೋಹಾಲ್ ಸಹಜವಾಗಿಯೇ ಇರುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕ ಅಲ್ಲಾ. ಏಕೆಂದರೆ ಇದು ನೈಸರ್ಗಿಕವಾಗಿ ಅಗುವ ಆಲ್ಕೋಹಾಲ್ ಅಥವಾ ಆಮ್ಲವಾಗಿ ಪರಿವರ್ತನೆಯಾಗುವ ಜೈವಿಕ ರಾಸಾಯನಿಕ ಪ್ರಕ್ರಿಯೆ ಆಗಿದೆ.
ಹಣ್ಣುಗಳಲ್ಲಿ ಅಲ್ಪ ಪ್ರಮಾಣದಲ್ಲಿಯ ಆಲ್ಕೋಹಾಲ್
ಮಾಗಿದ ಹಣ್ಣುಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಆದರು ಆಲ್ಕೋಹಾಲ್ ಸಹಜವಾಗಿ ಕಂಡು ಬರುತ್ತದೆ. ಸೇಬು, ದ್ರಾಕ್ಷಿ, ಬಾಳೆಹಣ್ಣು ಮುಂತಾದ ಹಣ್ಣುಗಳ ಹುದುಗಿಸಿಟ್ಟಾಗ ನೈಸರ್ಗಿಕವಾಗಿ ಅತಿ ಕಡಿಮೆ ಪ್ರಮಾಣದ ಆಲ್ಕೋಹಾಲ್ ಅನ್ನು ಉತ್ಪಾದಿಸುತ್ತವೆ.

ಮೊಸರು ಮತ್ತು ಹುದುಗಿಸಿಟ್ಟ ಆಹಾರಗಳು
ಮೊಸರು ತಯಾರಿಸುವಾಗ ಹಾಲು ಹುದುಗುವಿಕೆಯ ಮೂಲಕ ಬದಲಾಗುತ್ತದೆ. ಈ ಪ್ರಕ್ರಿಯಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಆಲ್ಕೋಹಾಲ್ ಉತ್ಪತ್ತಿ ಆಗಬಹುದು. ಇದೆ ರೀತಿ ದೋಸೆ ಹಿಟ್ಟು, ಇಡ್ಲಿ ಹಿಟ್ಟುನ್ನು ಹುದುಗಿಸುವಾಗಲು ಅಲ್ಪ ಪ್ರಮಾಣದಲ್ಲಿ ಎಥೆನಾಲ್ ನಿರ್ಮಾಣ ಅಗುತ್ತದೆ.
ಬ್ರೆಡ್ ಮತ್ತು ಅದರ ಉತ್ಪನ್ನಗಳು
ಬ್ರೆಡ್ ತಯಾರಿಸಲು ಯೀಸ್ಟ ಅನ್ನುವ ಪದಾರ್ಥ ಬಳಸಲಾಗಿತ್ತದೆ. ಈ ಯೀಸ್ಟ ಬಳಸುವ ವೇಳೆ ಆಲ್ಕೋಹಾಲ್ ಉತ್ಪಾದಿಸುತ್ತದೆ. ಆದರೆ ಬ್ರೆಡ್ ಬೇಯಿಸುವಾಗ ಹೆಚ್ಚಿನ ಪ್ರಮಾಣದ ಆಲ್ಕೋಹಾಲ್ ಆವಿಯಾಗುತ್ತದೆ. ಬರ್ಗರ್, ಪಿಜ್ಜಾ, ಡೋನಟ್‌ಗಳಲ್ಲೂ ಇದೇ ಪ್ರಕ್ರಿಯೆ ಅನ್ವಯಿಸುತ್ತದೆ ಆದರೆ ಬೇಯಿಸುವ ಪ್ರಕ್ರಿಯೆಯಲ್ಲಿ ಆಲ್ಕೋಹಾಲ್ ಅಂಶವು ಇಲ್ಲದಂತಾಗುತ್ತದೆ.
ಹಣ್ಣಿನ ರಸ ಮತ್ತು ಪಾನೀಯಗಳು
ಹಣ್ಣಿನ ರಸಗಳನ್ನು ಹೆಚ್ಚು ಸಮಯ ಇಟ್ಟರೆ ಅವು ಹುದುಗಲು ಶುರುವಾಗುತ್ತದೆ. ಇದರ ಪರಿಣಾಮವಾಗಿ ಸ್ವಲ್ಪ ಪ್ರಮಾಣದ ಆಲ್ಕೋಹಾಲ್ ಉತ್ಪತ್ತಿಯಾಗಬಹುದು. ಪ್ಯಾಕ್ ಮಾಡಿದ ಜ್ಯೂಸ್‌ಗಳಲ್ಲಿಯೂ ಅತಿ ಕಡಿಮೆ ಪ್ರಮಾಣದಲ್ಲಿ ಇದು ಕಂಡುಬರುವ ಸಾಧ್ಯತೆ ಇರುತ್ತದೆ.
ನೈಸರ್ಗಿಕವಾಗಿ ಆಲ್ಕೋಹಾಲ್ ಏಕೆ ಹಾನಿಕಾರಕ ಅಲ್ಲ
ಆಹಾರಗಳಲ್ಲಿ ಉಂಟಾಗುವ ಆಲ್ಕೋಹಾಲ್ ಪ್ರಮಾಣವು ಅತ್ಯಂತ ಕಡಿಮೆ ಅಂದರೆ ಶೇ. 01 ಕ್ಕಿಂತಲೂ ಕಡಿಮೆ ಇರುತ್ತದೆ. ಇದು ನಮ್ಮ ದೇಹದ ಮೇಲೆ ಯಾವುದೇ ಪರಿಣಾಮ ಬೀರುವಷ್ಟು ಪ್ರಮಾಣದಲ್ಲಿ ಇರುವುದಿಲ್ಲ. ಜೊತೆಗೆ ನಮ್ಮ ದೇಹವು ಇಂತಹ ಅಲ್ಪ ಪ್ರಮಾಣದ ಎಥೆನಾಲ್ ಅನ್ನು ಸುಲಭವಾಗಿ ಜೀರ್ಣಿಸಿ ಕೊಳ್ಳಬಹುದು. ಆದ್ದರಿಂದ, ಈ ಆಹಾರಗಳುನ್ನು ಸೇವಿಸುವುದರಿಂದ ಮದ್ಯಪಾನದಂತೆ ಪರಿಣಾಮ ಬೀರುವುದಿಲ್ಲ ಎಂಬುದನ್ನು ನಾವು ತಳಿದುಕೊಳ್ಳವುದು ಮುಖ್ಯ.
ಗಮನದಲ್ಲಿಟ್ಟುಕೊಳ್ಳಬಹುದಾದ ಕೆಲವು ಅಂಶಗಳು
ಹಣ್ಣುಗಳು ಅಥವಾ ಹಣ್ಣಿನ ರಸಗಳನ್ನು ಹೆಚ್ಚು ಸಮಯ ಸಂಗ್ರಹಿಸಿಟ್ಟರೆ ಹುದುಗುವಿಕೆ ಹೆಚ್ಚಾಗಿ ಆಲ್ಕೋಹಾಲ್ ಪ್ರಮಾಣವು ಸ್ವಲ್ಪ ಹೆಚ್ಚಾಗಬಹುದು. ಆದ್ದರಿಂದ ತಾಜಾ ಆಹಾರಗಳನ್ನು ಸೇವಿಸುವುದು ಉತ್ತಮ. ವಿಶೇಷವಾಗಿ ಮಕ್ಕಳು ಅಥವಾ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಇರುವವರು ಕೂಡಿಟ್ಟ ಹಣ್ಣುಗಳ ಅಥವಾ ಹೆಚ್ಚು ಹುದುಗಿದ ಆಹಾರಗಳನ್ನು ಸೇವಿಸದೆ ಇರುವುದು ಉತ್ತಮ. ಸಾಮಾನ್ಯವಾಗಿ ಸರಿಯಾದ ರೀತಿಯಲ್ಲಿ ತಯಾರಿಸಿದ ಮತ್ತು ತಾಜಾ ಆಹಾರಗಳಲ್ಲಿ ಇರುವ ನೈಸರ್ಗಿಕ ಆಲ್ಕೋಹಾಲ್ ನಮ್ಮ ಆರೋಗ್ಯಕ್ಕೆ ಯಾವುದೇ ಅಪಾಯವನ್ನು ಉಂಟು ಮಾಡುವುದಿಲ್ಲ.
ಈ ಎಲ್ಲ ಆಹಾರಗಳಲ್ಲಿ ಇರುವ ಆಲ್ಕೋಹಾಲ್ ಪ್ರಮಾಣ ಅತಿ ಕಡಿಮೆ ಮತ್ತು ಆರೋಗ್ಯಕ್ಕೆ ಹಾನಿಕಾರಕವು ಅಲ್ಲಾ. ಇದು ಸಂಪೂರ್ಣವಾಗಿ ನೈಸರ್ಗಿಕ ಪ್ರಕ್ರಿಯೆಯಿಂದ ಉಂಟಾಗುತ್ತದೆ ಆದ್ದರಿಂದ ನಮ್ಮ ದೈನಂದಿನ ಆಹಾರ ಬಗ್ಗೆ ಚಿಂತಿಸಬೇಕಾದ ಅಗತ್ಯವಿಲ್ಲ.












Click it and Unblock the Notifications