ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

51 ಮನೆಯ ಒಡೆಯನ ತಿಂಗಳ ಸಂಬಳ 21 ಸಾವಿರ!

|
Google Oneindia Kannada News

ಬೆಂಗಳೂರು, ಜೂ. 12 : ಅಕ್ರಮ ಆಸ್ತಿಗಳಿಕೆ ಆರೋಪದ ಹಿನ್ನಲೆಯಲ್ಲಿ ಲೋಕಾಯುಕ್ತ ಪೊಲೀಸರು ಗುರುವಾರ 6 ಜಿಲ್ಲೆಗಳ 8 ಸರ್ಕಾರಿ ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ಮಾಡಿದ್ದಾರೆ. ದಾಳಿಗೆ ಗುರಿಯಾದ ಸಹಾಯಕ ಸಬ್‌ ಇನ್ಸ್‌ಪೆಕ್ಟರ್ 51 ಮನೆಗಳ ಒಡೆಯನಾಗಿದ್ದರೆ, ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಬಳಿ 6 ಕೋಟಿ ಮೌಲ್ಯದ ಆಸ್ತಿ ಇರುವುದು ಪತ್ತೆಯಾಗಿದೆ.

ಲೋಕಾಯುಕ್ತ ಪೊಲೀಸರು ಗುರುವಾರ ಬೆಂಗಳೂರು ನಗರ, ಬಾಗಲಕೋಟೆ, ಬೆಳಗಾವಿ, ಕೊಡಗು, ಮೈಸೂರು ಮತ್ತು ರಾಮನಗರ ಜಿಲ್ಲೆಗಳ 18 ಸ್ಥಳಗಳಲ್ಲಿ 8 ಅಧಿಕಾರಿಗಳ ಕಚೇರಿ ಹಾಗೂ ನಿವಾಸಗಳ ಮೇಲೆ ದಾಳಿ ಮಾಡಿದ್ದರು. ಸುಮಾರು 9.5 ಕೋಟಿ ರೂ.ಗೂ ಅಧಿಕ ಪ್ರಮಾಣದ ಅಕ್ರಮ ಆಸ್ತಿಗಳನ್ನು ದಾಳಿಯ ವೇಳೆ ಪತ್ತೆ ಹಚ್ಚಲಾಗಿದೆ. [ಲೋಕಾಯುಕ್ತ ದಾಳಿ : 6 ಜಿಲ್ಲೆಗಳು, 8 ಸರ್ಕಾರಿ ಅಧಿಕಾರಿಗಳು]

lokayukta

ದಾಳಿಗೆ ಒಳಗಾದವರು : ರಾಮನಗರದ ಬಿಡದಿ ಠಾಣೆಯ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಜಗದೀಶ್‌, ಲೋಕೋಪಯೋಗಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಯ ಮುಖ್ಯ ಇಂಜಿನಿಯರ್ ಎ.ಎನ್‌.ತ್ಯಾಗರಾಜ್‌, ಬೆಂಗಳೂರಿನ ರಾಜ್ಯ ಕೋ-ಆಪರೇಟಿವ್‌ ಮಾರ್ಕೆಂಟಿಂಗ್‌ ಫೆಡರೇಷನ್‌ ವ್ಯವಸ್ಥಾಪಕ ನಾಗಯ್ಯ ಅಂದಾನಯ್ಯ ಹಿರೇಮಠ್,

ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಅಭಿಯಂತರ ಮಲ್ಲಿಕಾರ್ಜುನ ರೇವಣಸಿದ್ದಪ್ಪ ನ್ಯಾನಗಲಿ, ಬೆಳಗಾವಿಯ ಚಿಕ್ಕೋಡಿ ತಾಲೂಕು ಹಿರೇಕೋಡಿ ಗ್ರಾಮ ಲೆಕ್ಕಾಧಿಕಾರಿ ಸಿದ್ದಾರ್ಥ ಬೋಪಾಲ್‌ ಸಿಂಗಾಡಿ, ಲೋಕೋಪಯೋಗಿ ಇಲಾಖೆ ಲೆಕ್ಕ ಅಧೀಕ್ಷಕ ಕೃಷ್ಣ ಮಹದೇವಪ್ಪ ಕರಮಡಿ, ಕೊಡಗು ಜಿಲ್ಲೆಯ ವಲಯ ಅರಣ್ಯಾಧಿಕಾರಿ ಬಾಲಕೃಷ್ಣಾಚಾರ್ಯ, ಮೈಸೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಅಣ್ಣೇಗೌಡ.

ದಾಳಿಗೆ ಒಳಗಾದ ಎಲ್ಲಾ ಅಧಿಕಾರಿಗಳ ಆಸ್ತಿ ಮೌಲ್ಯದ ಪರಿಶೀಲನೆ ಕಾರ್ಯ ನಡೆಯತ್ತಿದೆ ಎಂದು ಲೋಕಾಯುಕ್ತ ಎಡಿಜಿಪಿ ಪ್ರೇಮ್‌ ಶಂಕರ್‌ ಮೀನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇಬ್ಬರ ಆಸ್ತಿ ಮೌಲ್ಯದ ಕುರಿತು ಮಾಹಿತಿ ಮಾತ್ರ ಲಭ್ಯವಾಗಿದೆ.

51 ಮನೆಗಳ ಒಡೆಯ : ಲೋಕಾಯುಕ್ತರು ದಾಳಿ ನಡೆಸಿದ ಬಿಡದಿ ಠಾಣೆಯ ಸಹಾಯಕ ಇನ್ಸ್‌ಪೆಕ್ಟರ್ ಜಗದೀಶ್ 51 ಮನೆಗಳ ಒಡೆಯನಾಗಿದ್ದು, ಎಲ್ಲಾ ಮನೆಗಳನ್ನು ಬಾಡಿಗೆಗೆ ನೀಡಿದ್ದಾರೆ. ತಿಂಗಳಿಗೆ ಸುಮಾರು 21 ಸಾವಿರ ಸಂಬಳ ಪಡೆಯುವ ಜಗದೀಶ್ ನಾಲ್ಕು ಐಷಾರಾಮಿ ಕಾರು ಮತ್ತು 2 ಬುಲೆಟ್ ಬೈಕ್‌ಗಳನ್ನು ಹೊಂದಿದ್ದಾರೆ.

ಜಗದೀಶ್ 5 ಮಹಡಿಗಳ ಅಪಾರ್ಟ್‌ಮೆಂಟ್‌ನಲ್ಲಿ 51 ಮನೆಗಳನ್ನು ಹೊಂದಿದ್ದಾರೆ. ತಲಘಟ್ಟಪುರದ ರಘುವಿನಹಳ್ಳಿ ಬಳಿ ಈ ಅಪಾರ್ಟ್‌ಮೆಂಟ್ ಇದೆ. 51 ಮನೆಗಳನ್ನು ಬಾಡಿಗೆಗೆ ನೀಡಲಾಗಿದೆ. ಜಗದೀಶ್ ಹಲವು ಬಾರಿ ಸೇವೆಯಿಂದ ಅಮಾನತುಗೊಂಡಿದ್ದರು ಎಂದು ತಿಳಿದುಬಂದಿದೆ.

6 ಕೋಟಿ ಒಡೆಯ : ದಕ್ಷಿಣ ಕನ್ನಡ ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಎ.ಎನ್‌.ತ್ಯಾಗರಾಜ್‌ ಬೆಂಗಳೂರಿನ ಯಲಹಂಕ, ಕೆ.ಆರ್‌.ಪುರಂನಲ್ಲಿ 2 ಮನೆ, ಒಂದು ನಿವೇಶನ, ವಾಣಿಜ್ಯ ಕಟ್ಟಡ, ದೇವಹಳ್ಳಿಯಲ್ಲಿ ವಿವಿಧ ಕಡೆ ಜಮೀನು ಸೇರಿದಂತೆ ಒಟ್ಟು 5.88 ಕೋಟಿ ರೂ.ಮೌಲ್ಯದ ಆಸ್ತಿ ಹೊಂದಿದ್ದಾರೆ.

English summary
Karnataka Lokayukta officials raided the house of an Assistant Sub-Inspector Jagadish, attached to Bidadi Police on charges of holding disproportionate assets. Officials recovered documents related to 51 houses, four cars and two bullet motorcycles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X