ಲೋಕಾಯುಕ್ತರ ದಾಳಿ ವೇಳೆ ಪ್ರಾಧ್ಯಾಪಕರ ಮನೆಯಲ್ಲಿ ಸಿಕ್ಕಿದ್ದು 1.4 ಕೋಟಿ!

ಮೈಸೂರು, ಡಿಸೆಂಬರ್‌ 6: ರಾಜ್ಯದ ವಿವಿಧೆಡೆ ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದ ಮೇರೆಗೆ ಹತ್ತಾರು ಕಡೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ. ಅದರಂಯತೆ ನಂಜನಗೂಡಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರೊಬ್ಬರ ಮನೆ ಸೇರಿದಂತೆ 12 ಕಡೆ ಲೋಕಾಯುಕ್ತ ಪೊಲೀಸರು ಮಂಗಳವಾರ ಏಕ ಕಾಲದಲ್ಲಿ ದಾಳಿ ನಡೆಸಿದ್ದಾರೆ.

8.42 ಕೋಟಿ ರೂ. ಅಕ್ರಮ ಆಸ್ತಿ ಪತ್ತೆಯಾಗಿದ್ದು, ಇದರಲ್ಲಿ 2.33 ಕೋಟಿ ರೂ. ಚರಾಸ್ತಿ ಯಾಗಿದೆ. ಪ್ರತಿ ವರ್ಷ 1.4 ಕೋಟಿ ರೂ.ವರೆಗೆ ಆದಾಯ ಬರುವಂತೆ ವ್ಯವಹಾರ ನಡೆಸುತ್ತಿದ್ದರು ಎಂಬುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ಮೈಸೂರಿನ ಜೆಪಿ ನಗರದ ಗುರುಕುಲ ಬಡಾವಣೆ ನಿವಾಸಿಯೂ ಆದ ಡಾ.ಎಂ.ಎಸ್.ಮಹದೇವಸ್ವಾಮಿ ಅವರ ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆದಿರುವುದು.

1.4 crore was found in the professors house during the Lokayukta raid

ಮಹದೇವಸ್ವಾಮಿ ಮಾಲೀಕತ್ವದ ಗುರು ಕುಲ ವಿದ್ಯಾ ಸಂಸ್ಥೆ, ರಿಯಲ್ ಎಸ್ಟೇಟ್ ವ್ಯವ ಹಾರದ ಎಂ.ಎಸ್.ಗ್ರೂಪ್ ಆ್ಯಂಡ್ ಪ್ರಾಪ ರ್ಟೀಸ್, ಗೃಹ ನಿರ್ಮಾಣ ಸಹಕಾರ ಸಂಘದ ಕಚೇರಿ, ಸ್ಟೀಲ್ ಮತ್ತು ಕಬ್ಬಿಣದ ಅಂಗಡಿ ಸೇರಿದಂತೆ 12 ಕಡೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೈಸೂರು ನಗರದೊಂದಿಗೆ ನಂಜನಗೂಡು ಮತ್ತು ಕೆ.ಆರ್.ನಗರದಲ್ಲಿರುವ ಸ್ಟೀಲ್ ಅಂಗಡಿ, ಶ್ರೀರಂಗಪಟ್ಟಣದ ಅರಕೆರೆ ಗ್ರಾಮದ ಲ್ಲಿನ ಮನೆಯ ಮೇಲೂ ದಾಳಿ ಮಾಡಿ, ಶೋಧ ನಡೆಸಿದರು.

''ಕಾಲೇಜಿಗೆ ತೆರಳಿ ಪಾಠ ಮಾಡಿದ್ದಕ್ಕಿಂತ ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದೇ ಹೆಚ್ಚು. ಗೃಹ ನಿರ್ಮಾಣ ಸಹಕಾರ ಸಂಘ ಸ್ಥಾಪಿಸಿ ಸಾಕಷ್ಟು ಮಂದಿಗೆ ನಿವೇಶನ ನೀಡದೇ ವಂಚಿಸಿದ್ದರು'' ಎಂಬ ಆರೋಪಗಳಿವೆ.

ಲೋಕಾಯುಕ್ತ ಎಡಿಜಿಪಿ ಪ್ರಶಾಂತ್ ಕುಮಾರ್, ಐಜಿಪಿ ಡಾ.ಸುಬ್ರಮಣ್ಯೇಶ್ವರ ರಾವ್, ಎಸ್ಪಿ ಸುರೇಶ್ ಬಾಬು ಮಾರ್ಗದರ್ಶ ನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಕೃಷ್ಣಯ್ಯ ಅವರೊಂದಿಗೆ ಐದು ಮಂದಿ ಡಿವೈಎಸ್ಪಿಗಳು ಮತ್ತು 10 ಇನ್ಸ್‌ಪೆಕ್ಟರ್‌ಗಳು ಮತ್ತು ಸಿಬ್ಬಂದಿ ಇದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+