ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ಯ ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟ ಅಬಕಾರಿ ಇಲಾಖೆ

|
Google Oneindia Kannada News

ಬೆಂಗಳೂರು, ಜೂನ್ 03 : ಕರ್ನಾಟಕದ ಅಬಕಾರಿ ಇಲಾಖೆ ಮದ್ಯ ಪ್ರಿಯರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಹೊಸದಾಗಿ ಬೀಯರ್ ತಯಾರು ಮಾಡಲು ಅನುಮತಿ ನೀಡಿದ್ದು, ಅದನ್ನು ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ.

Recommended Video

Good news to all you beer fans of Karnataka | Brewery | Oneindia kannada

ಮೈಕ್ರೋ ಬ್ರೂವರೀಸ್ ಹೊಸದಾಗಿ ಬೀಯರ್ ಉತ್ಪಾದನೆ ಮಾಡಬಹುದು. ಕಂಟೈನರ್, ಗ್ಲಾಸ್‌ಗಳ ಮೂಲಕ ಅವರನ್ನು ಪಾರ್ಸೆಲ್ ತೆಗೆದುಕೊಂಡು ಹೋಗಬಹುದು ಎಂದು ಅಬಕಾರಿ ಇಲಾಖೆ ಹೊಸ ಸುತ್ತೋಲೆಯಲ್ಲಿ ತಿಳಿಸಿದೆ.

ಅನ್ ಲಾಕ್ 1.0 ತನಕ ಮದ್ಯ ಮಾರಾಟದಿಂದ ಗಳಿಸಿದ್ದೆಷ್ಟು? ಅನ್ ಲಾಕ್ 1.0 ತನಕ ಮದ್ಯ ಮಾರಾಟದಿಂದ ಗಳಿಸಿದ್ದೆಷ್ಟು?

ಒಬ್ಬ ವ್ಯಕ್ತಿ 2 ಲೀಟರ್ ತನಕ ಬೀಯರ್ ಪಾರ್ಸೆಲ್ ತೆಗೆದುಕೊಂಡು ಹೋಗಬಹುದು. ಮೈಕ್ರೋ ಬ್ರೂವರೀಸ್ ಬೆಳಗ್ಗೆ 9 ರಿಂದ ರಾತ್ರಿ 9ರ ತನಕ ಕಾರ್ಯ ನಿರ್ವಹಣೆ ಮಾಡಬಹುದು ಎಂದು ಅಬಕಾರಿ ಇಲಾಖೆ ಹೇಳಿದೆ. ಈ ಆದೇಶ ಜೂನ್ 30ರ ತನಕ ಜಾರಿಯಲ್ಲಿರುತ್ತದೆ.

ಮದ್ಯ ಮಾರಾಟಕ್ಕೆ BevQ ಆಪ್ ಸಿದ್ದಪಡಿಸಿದ ಕೇರಳ: ಇದು ಹೇಗೆ ಕಾರ್ಯನಿರ್ವಹಿಸುತ್ತೆ?ಮದ್ಯ ಮಾರಾಟಕ್ಕೆ BevQ ಆಪ್ ಸಿದ್ದಪಡಿಸಿದ ಕೇರಳ: ಇದು ಹೇಗೆ ಕಾರ್ಯನಿರ್ವಹಿಸುತ್ತೆ?

Beer

ಈ ಆದೇಶವನ್ನು ಹೊರತುಪಡಿಸಿದರೆ ಮದ್ಯ ಖರೀದಿ ವಿಚಾರದಲ್ಲಿ ಮೇ 12ರಂದು ಹೊರಡಿಸಿದ ಎಲ್ಲಾ ಸೂಚನೆಗಳನ್ನು ಪಾಲನೆ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ. ಜೂನ್ 30ರ ತನಕ ಇರುವ ಸ್ಟಾಕ್‌ಗಳನ್ನು ಖಾಲಿ ಮಾಡಲು ಈಗಾಗಲೇ ಅನುಮತಿ ಕೊಡಲಾಗಿದೆ.

ಬೆಂಗಳೂರಿಗರೇ ಚಿಯರ್ಸ್ ವಿತ್ ಬಿಯರ್: ಕಂಡೀಷನ್ಸ್‌ ಅಪ್ಲೈ ಬೆಂಗಳೂರಿಗರೇ ಚಿಯರ್ಸ್ ವಿತ್ ಬಿಯರ್: ಕಂಡೀಷನ್ಸ್‌ ಅಪ್ಲೈ

ಮದ್ಯ ಖರೀದಿ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ ಬಳಕೆ ಕಡ್ಡಾಯ, ಸ್ವಚ್ಚತೆ ಕಾಪಾಡಬೇಕು, ಸ್ಯಾನಿಟೈಸರ್ ಬಳಕೆ ಮಾಡಬೇಕು. ಕಂಟೈನ್ಮೆಂಟ್ ಝೋನ್‌ಗಳಲ್ಲಿರುವ ಮೈಕ್ರೋ ಬ್ರೂವರೀಸ್ ಬಂದ್ ಮಾಡಬೇಕು ಎಂದು ತಿಳಿಸಲಾಗಿದೆ.

ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಎಲ್ಲಾ ಮದ್ಯದ ಅಂಗಡಿಗಳನ್ನು ಮುಚ್ಚಲಾಗಿತ್ತು. ಮೇ 4ರಂದು ಮದ್ಯದ ಅಂಗಡಿ ತೆರೆಯಲು ಸರ್ಕಾರ ಅವಕಾಶ ನೀಡಿತ್ತು. ಪಾರ್ಸೆಲ್ ಮಾತ್ರ ತೆಗೆದುಕೊಂಡು ಹೋಗಲು ಅನುಮತಿ ಕೊಡಲಾಗಿತ್ತು.

ಮೇ ತಿಂಗಳಿನಲ್ಲಿ ಕರ್ನಾಟಕದ ಅಬಕಾರಿ ಇಲಾಖೆ 1387.20 ಕೋಟಿ ಆದಾಯಗಳಿಸಿದೆ. ಆದರೆ, ಕಳೆದ ವರ್ಷದ ಮೇ ತಿಂಗಳಿಗೆ ಹೋಲಿಕೆ ಮಾಡಿದರೆ ಆದಾಯ ಕಡಿಮೆಯಾಗಿದೆ.

English summary
Karnataka excise department allowed for fresh brewing or production of beer and takeaways from microbreweries. Microbreweries can work from 9 am to 9 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X