ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಹಕಾರಿ ಸಚಿವ ಮಹದೇವ ಪ್ರಸಾದ್ ಹೃದಯಾಘಾತದಿಂದ ನಿಧನ

ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಕಲಿ ಕೀಲಿಕೈಯಿಂದ ಬಾಗಿಲು ತೆರದು ನೋಡಿದಾಗ ಸಚಿವರು ಹಾಸಿಗೆ ಮೇಲೆ ಮಲಗಿದ್ದರು. ಅದರೆ ಅವರ ದೇಹ ತಣ್ಣಗಾಗಿತ್ತು. ಬಳಿಕ ಸ್ಥಳೀಯ ವೈದ್ಯರು ಬಂದು ತಪಾಸಣೆ ನಡೆಸಿ ಹೃದಯಾಘಾತದಿಂದ ಮೃತಪಟ್ಟಿರುವುದನ್ನು ದೃಢಪಡಿಸಿದರು.

By Ananthanag
|
Google Oneindia Kannada News

ಕೊಪ್ಪ, ಜನವರಿ ೦3: ಚಾಮರಾಜನಗರ ಗುಂಡ್ಲುಪೇಟೆ ಶಾಸಕ ಮತ್ತು ಸಹಕಾರಿ, ಸಕ್ಕರೆ ಸಚಿವ ಎಚ್.ಎಸ್. ಮಹದೇವ ಪ್ರಸಾದ್(58) ಮಂಗಳವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ

ಮಂಗಳವಾರ ಖಾಸಗೀ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೋಮವಾರ ಸಂಜೆ ಚಿಕ್ಕಮಗಳೂರಿನ ಸಮೀಪ ಸೆರಾಯ್ ರೆಸಾರ್ಟ್ ನಲ್ಲಿ ತಂಗಿದ್ದರು. ಅದರೆ ಮಂಗಳವಾರ ಬೆಳಗ್ಗೆ ಅವರು ಬಾಗಿಲು ತೆರಯಲಿಲ್ಲ. ಆಪ್ತರು ಬಾಗಿಲನ್ನು ತೆರಯಲು ಮುಂದಾಗಿದ್ದು ಆದರೆ ತೆರೆಯಲಾಗಲಿಲ್ಲ. ನಂತರ ನಕಲಿ ಬೀಗದ ಕೀಯಿಂದ ಬಾಗಿಲನ್ನು ತೆರೆದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್ ಒಳ ಹೊದರು ಅದರೆ ಸಚಿವ ಮಹದೇವ ಪ್ರಸಾದ್ ವಿಧಿವಶರಾಗಿದ್ದರು.[ವ್ಯಕ್ತಿಚಿತ್ರ : ಸಜ್ಜನ ರಾಜಕಾರಣಿ ಎಚ್ ಎಸ್ ಮಹದೇವ ಪ್ರಸಾದ್]

H S Mahadeva prasad

ಬೆಳಗ್ಗೆಯೇ ಅವರು ವ್ಯಾಯಾಮ ಮತ್ತು ವಾಕಿಂಗ್ ಮಾಡಲು ಹೊಗುತ್ತಿದ್ದರು ಆದರೆ ಅವರು ಮಂಗಳವಾರ ಬೆಳಗ್ಗೆ ಹೋಗಿರಲಿಲ್ಲ ಎಂದು ಸಹಚರರೊಬ್ಬರು ಹೇಳಿದರು. ನಂತರ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಗಡಿಗರೊಂದಿಗೆ ಬಾಗಿಲು ಬಡಿದಾಗ ಪ್ರತ್ಯುತ್ತರ ನೀಡಲಿಲ್ಲ. ಕಿಟಕಿ ಬಾಗಿಲುಗಳು ತೆರೆದಿರಲಿಲ್ಲ. ಹೀಗಾಗಿ ನಕಲಿ ಕೀಲಿಕೈಯಿಂದ ಬಾಗಿಲು ತೆರದು ನೋಡಿದಾಗ ಸಚಿವರು ಹಾಸಿಗೆ ಮೇಲೆ ಮಲಗಿದ್ದರು. ಅದರೆ ಅವರ ದೇಹ ತಣ್ಣಗಾಗಿತ್ತು. ಬಳಿಕ ಸ್ಥಳೀಯ ವೈದ್ಯರು ಬಂದು ತಪಾಸಣೆ ನಡೆಸಿ ಹೃದಯಾಘಾತದಿಂದ ಮೃತಪಟ್ಟಿರುವುದನ್ನು ದೃಢಪಡಿಸಿದರು.

ಸಚಿವರು ಚಿಕ್ಕಮಗಳೂರಿನ ಕೊಪ್ಪದಲ್ಲಿ ಸಹಕಾರಿ ಸಾರಿಗೆ ಸುವರ್ಣಮಹೋತ್ಸವ ಕಾರ್ಯಕ್ರಮಕ್ಕೆ ತೆರಳಲು ಸೋಮವಾರವೇ ಅಗಮಿಸಿದ್ದರು. ನಂತರ ರಾತ್ರಿ ತಮ್ಮ ಸ್ನೇಹಿತರ ಮನೆಗೆ ಭೋಜನಕ್ಕೆ ತೆರಳಿ ರಾತ್ರಿ ಬಂದು ಸೆರಾಯ್ ರೆಸಾರ್ಟ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ನಿಧಾನವಾಗಿ ಬಂದ ಜಿಲ್ಲಾ ಕಾಂಗ್ರಸ್ ಅಧ್ಯಕ್ಷ ವಿಜಯ್ ಕುಮಾರ್ ಅವರೊಂದಿಗೆ ರಾತ್ರಿ ಕಾರ್ಯಕ್ರಮದ ಬಗ್ಗೆ ಚರ್ಚೆ ಮಾಡಿದ್ದಾಗಿ ಸ್ವತಃ ವಿಜಯ್ ಕುಮಾರ್ ತಿಳಿಸಿದ್ದಾರೆ.

ಸಹಕಾರಿ ಸಚಿವರು ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಆಪ್ತರೊಂದಿಗೆ ಬಂದಿದ್ದರು. ಅವರೊಂದಿಗೆ ಮನೆಯ ಯಾವ ಸದಸ್ಯರು ಬಂದಿರಲಿಲ್ಲ, ಸಚಿವರು ಹಿಂದೊಮ್ಮೆ ಹೃದಯ ಸಂಬಂಧ ಬೈಪಾಸ್ ಸರ್ಜರಿ ಮಾಡಿಸಿಕೊಂಡಿದ್ದರು, ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಆಪ್ತ ವಲಯ ತಿಳಿಸಿದೆ.

English summary
Cooperative, Minister HS. Mahadevaprasad passes away in heart attack in serai resort, chikkamagaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X