Ballari Chalo: ವಿಶೇಷ ಅಧಿವೇಶನಕ್ಕೆ ಸರ್ಕಾರ ಮಣಿದಿದೆ; ರೈತರಿಗೆ ₹5 ಲಕ್ಷ ಸಾಲ ಮನ್ನಾಗೆ ವಿಜಯೇಂದ್ರ ಒತ್ತಾಯ

ನಮ್ಮ ಪಕ್ಷದ "ಬಳ್ಳಾರಿ ಚಲೋ' ಪಾದಯಾತ್ರೆಗೆ ಎಲ್ಲೆಡೆ ಸಿಗುತ್ತಿರುವ ಜನಾಶೀರ್ವಾದ ಮತ್ತು ಅನ್ನದಾತರ ಅಭೂತಪೂರ್ವ ಬೆಂಬಲದಿಂದ ಆತಂಕಗೊಂಡಿರುವ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಸರ್ಕಾರ, ತೀವ್ರ ಬರ ಮತ್ತು ನಮ್ಮ ರೈತರು ಎದುರಿಸುತ್ತಿರುವ ತೀವ್ರ ಸಂಕಷ್ಟದ ಬಗ್ಗೆ ಚರ್ಚಿಸಲು ವಿಶೇಷ ವಿಧಾನಸಭಾ ಅಧಿವೇಶನ ಕರೆಯಬೇಕೆಂಬ ನಮ್ಮ ಬೇಡಿಕೆಗೆ ಕೊನೆಗೂ ಮಣಿದಿದೆ ಎಂದು ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಮಾಡಿರುವ ಬಿ.ವೈ ವಿಜಯೇಂದ್ರ ಅವರು, ಸರ್ಕಾರ ಒಣಭೂಮಿಯ ಭೀಕರ ವಾಸ್ತವವನ್ನು ಖುದ್ದು ಅರಿಯುವ ಬದಲು, ಹವಾನಿಯಂತ್ರಣ ಕೊಠಡಿಗಳಲ್ಲಿ ವೀಡಿಯೊ ಸಮ್ಮೇಳನಗಳ ಮೂಲಕ ಸಂಗ್ರಹಿಸಿದ ದತ್ತಾಂಶವನ್ನು ಆಧರಿಸಿ ಮೇಲ್ನೋಟದ ಚರ್ಚೆಯಲ್ಲಿ ತೊಡಗಿಸಿಕೊಳ್ಳಲು ಬಯಸಿದ್ದು ನಿಜಕ್ಕೂ ಹಾಸ್ಯಾಸ್ಪದ.

Ballari Chalo Government Agrees to Special Session Vijayendra Demands 5 Lakh Farm Loan Waiver

ನಾವು ಪ್ರತಿ ಜಿಲ್ಲೆ ಮತ್ತು ತಾಲ್ಲೂಕಿನಿಂದ ಸಂಗ್ರಹಿಸಿದ ನೈಜ ವಾಸ್ತವ ಸಂಗತಿಗಳು ಮತ್ತು ಅಂಕಿ-ಅಂಶಗಳೊಂದಿಗೆ ವಿಧಾನಸಭೆಗೆ ಬರುತ್ತಿದ್ದೇವೆ. ನಮ್ಮ ರೈತರ ನೈಜ ಸಂಕಷ್ಟಗಳನ್ನು, ವಾಸ್ತವ ಪರಿಸ್ಥಿತಿಗಳನ್ನು ನಾವು ಸರ್ಕಾರದ ಮುಂದೆ ಇಡುತ್ತೇವೆ ಮತ್ತು ತಕ್ಷಣದ ನೆರವು ಹಾಗೂ ದೀರ್ಘಕಾಲೀನ ಕ್ರಮಗಳಿಗೆ ಒತ್ತಾಯಿಸಲಿದ್ದೇವೆ.

ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ನಿರ್ವಹಿಸದೆ, ಕೇಂದ್ರ ಸರ್ಕಾರವನ್ನು ದೂಷಿಸುವ ಬದಲು, ಬರ ಪೀಡಿತ ಪ್ರದೇಶಗಳಲ್ಲಿನ ರೈತರಿಗೆ 5 ಲಕ್ಷ ರೂ.ವರೆಗಿನ ಕೃಷಿ ಸಾಲ ಮನ್ನಾವನ್ನು ತಕ್ಷಣವೇ ಘೋಷಿಸಬೇಕೆಂದು ನಾನು ಸರ್ಕಾರವನ್ನು ಒತ್ತಾಯಿಸುತ್ತೇವೆ. ಕರ್ನಾಟಕದಲ್ಲಿ ರೈತರ ಆತ್ಮಹತ್ಯೆಗಳ ಕುರಿತಾದ ದತ್ತಾಂಶವು ತೀವ್ರ ಆತಂಕಕಾರಿಯಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಳೆದ ಮೂರು ವರ್ಷಗಳಲ್ಲಿ ಸುಮಾರು 3,650 ರೈತರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಅದರಲ್ಲೂ ಕಲ್ಯಾಣ ಕರ್ನಾಟಕದಲ್ಲಿ ಪರಿಸ್ಥಿತಿ ಅತ್ಯಂತ ಭೀಕರವಾಗಿದೆ, ಕಲಬುರಗಿಯಲ್ಲಿ 284ಕ್ಕೂ ಹೆಚ್ಚು, ರಾಯಚೂರಿನಲ್ಲಿ 160, ಬೀದರ್ ನಲ್ಲಿ 220 ಮತ್ತು ಕೊಪ್ಪಳದಲ್ಲಿ 80 ಸೇರಿದಂತೆ 937 ರೈತರ ಆತ್ಮಹತ್ಯೆಗಳು ಸಂಭವಿಸಿವೆ. ಇವು ಕೇವಲ ಅಂಕಿ-ಸಂಖ್ಯೆಗಳಲ್ಲ, ಪ್ರತಿಯೊಂದು ಅಂಕಿ-ಅಂಶದ ಹಿಂದೆ ಒಬ್ಬ ಅಮಾಯಕ, ನಿಸ್ಸಹಾಯಕ ರೈತ, ಒಂದು ಬಡ ಕುಟುಂಬದ ಕಣ್ಣೀರು ಮತ್ತು ಛಿದ್ರಗೊಂಡ ಭವಿಷ್ಯದ ವ್ಯಥೆಯಿದೆ.

ನಮ್ಮ ರೈತರು ತೀವ್ರ ಬರಗಾಲವನ್ನು ಎದುರಿಸುತ್ತಿದ್ದು, ತಮ್ಮ ಮೇಲೆ ಮಾತ್ರವಲ್ಲ ಮತ್ತು ಈ ಸಂವೇದನಾರಹಿತ ರಾಜ್ಯ ಸರ್ಕಾರದ ಮೇಲೆಯೂ ಕೂಡ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ನಾವು ಒತ್ತಾಯಿಸಿರುವ ಅಗತ್ಯ ಪರಿಹಾರ ಕ್ರಮಗಳನ್ನು ತಕ್ಷಣವೇ ಘೋಷಿಸಬೇಕು ಮತ್ತು ಈ ಬಿಕ್ಕಟ್ಟಿನ ಸಮಯದಲ್ಲಿ ನಮ್ಮ ಅನ್ನದಾತ ರೈತ ಬಂಧುಗಳೊಂದಿಗೆ ನಿಲ್ಲಲೇಬೇಕು.

ನಮ್ಮ ರೈತರಿಗಾಗಿ, ರೈತರ ನೆಮ್ಮದಿಗಾಗಿ, ನಮ್ಮ ಬೇಡಿಕೆಗಳು ಈಡೇರುವವರೆಗೂ ನಿರಂತರವಾಗಿ ಹೋರಾಡುತ್ತಲೇ ಇರುತ್ತೇವೆ. ನಮ್ಮ ರೈತರ ಸಂಕಷ್ಟಗಳನ್ನು ರಾಜ್ಯ ಸರ್ಕಾರ ಪರಿಹರಿಸುವವರೆಗೆ ವಿಶ್ರಮಿಸುವುದಿಲ್ಲ. ಇದು ಕರ್ನಾಟಕದ ರೈತರ ಉಳಿವು, ಘನತೆ ಮತ್ತು ಭವಿಷ್ಯಕ್ಕಾಗಿ ನಡೆಯುತ್ತಿರುವ ಹೋರಾಟ ಎಂದೂ ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರು ಹೇಳಿದ್ದಾರೆ.

ಮಣ್ಣಿನ ಮಕ್ಕಳಿಗೆ ಕೃಷಿಯೇ ಜೀವಕಾಯಕ: ಬಿ.ವೈ ವಿಜಯೇಂದ್ರ

ಮಣ್ಣಿನ ಮಕ್ಕಳಿಗೆ ಕೃಷಿಯೇ ಜೀವಕಾಯಕ; ರೈತನ ಬೆವರ ಹನಿಗೆ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ನಿಲ್ಲದು ಎಂದೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಹೇಳಿದ್ದಾರೆ. ಪಾದಯಾತ್ರೆಯ ನಡುವೆ ಗದ್ದೆಗಿಳಿದು ಅನ್ನದಾತರೊಂದಿಗೆ, ರೈತ ಮಹಿಳೆಯರೊಂದಿಗೆ ಭತ್ತದ ಸಸಿ ನೆಟ್ಟು, ಅವರ ಕಾಯಕಕ್ಕೆ ಗೌರವ ಸಲ್ಲಿಸಿದ ಸಂದರ್ಭ; ಮಣ್ಣನ್ನೇ ನಂಬಿ ದುಡಿಯುವ ನಮ್ಮ ತಾಯಂದಿರ, ಕಷ್ಟದಲ್ಲೂ ಧೈರ್ಯಗೆಡದ ಅನ್ನದಾತನಿಗೆ ನಮಿಸಿ ಹೊರಟಿದೆ ಜನಶಕ್ತಿಯ ಆಂದೋಲನ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+