ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಜಿನಿಯರಿಂಗ್‌ಗೆ ತಗ್ಗಿದ ಬೇಡಿಕೆ, 33 ಕಾಲೇಜಲ್ಲಿ ಒಬ್ಬರೂ ದಾಖಲಾಗಿಲ್ಲ!

By Gururaj
|
Google Oneindia Kannada News

ಬೆಂಗಳೂರು, ಆಗಸ್ಟ್ 23 : ರಾಜ್ಯದಲ್ಲಿ ಇಂಜಿನಿಯರಿಂಗ್ ಸೀಟುಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ. ಹೌದು, ರಾಜ್ಯದ 33 ಖಾಸಗಿ ಕಾಲೇಜುಗಳಲ್ಲಿ 2018-19ನೇ ಸಾಲಿಗೆ ಒಬ್ಬ ವಿದ್ಯಾರ್ಥಿಯೂ ದಾಖಲಾಗಿಲ್ಲ!.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಕುರಿತು ಮಾಹಿತಿ ನೀಡಿದೆ. ಕರ್ನಾಟಕ ಖಾಸಗಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಇಂಜಿನಿಯರ್ ಕಾಲೇಜುಗಳ ಸಂಘ (ಕಾಮೆಡ್-ಕೆ) ಗೆ ಈ ಶೈಕ್ಷಣಿಕ ವರ್ಷದಲ್ಲಿ 16,236 ಸೀಟುಗಳು ಹಂಚಿಕೆಯಾಗಿತ್ತು.

ನಕಲಿ ಇಂಜಿನಿಯರಿಂಗ್ ಕಾಲೇಜುಗಳ ಪಟ್ಟಿ: ದೆಹಲಿ ನಂ 1, ಕರ್ನಾಟಕ ನಂ 4ನಕಲಿ ಇಂಜಿನಿಯರಿಂಗ್ ಕಾಲೇಜುಗಳ ಪಟ್ಟಿ: ದೆಹಲಿ ನಂ 1, ಕರ್ನಾಟಕ ನಂ 4

ರಾಜ್ಯದ 6 ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮಾತ್ರ ಶೇ 100ರಷ್ಟು ಸೀಟುಗಳು ಭರ್ತಿಯಾಗಿವೆ. 33 ಕಾಲೇಜುಗಳಲ್ಲಿ ಯಾವುದೇ ವಿದ್ಯಾರ್ಥಿ ಸೇರ್ಪಡೆಗೊಂಡಿಲ್ಲ. 10 ಕಾಲೇಜುಗಳು ಶೇ 80 ರಿಂದ 99 ಸೀಟುಗಳನ್ನು ಭರ್ತಿ ಮಾಡಿವೆ. 43 ಕಾಲೇಜುಗಳಲ್ಲಿ ಶೇ 25 ರಷ್ಟು ಸೀಟುಗಳು ಮಾತ್ರ ಭರ್ತಿಯಾಗಿವೆ.

 33 private engineering colleges has no admission in 2018-19

ಸರ್ಕಾರಿ ಸೀಟುಗಳಿಗೆ ಹೋಲಿಕೆ ಮಾಡಿದರೆ ಕಾಮೆಡ್‌-ಕೆ ಸೀಟುಗಳ ಶುಲ್ಕ ಮೂರುಪಟ್ಟು ಹೆಚ್ಚಿರುತ್ತದೆ. ವಿದ್ಯಾರ್ಥಿಗಳನ್ನು ಸೆಳೆಯಲು ಖಾಸಗಿ ಕಾಲೇಜುಗಳು ಶುಲ್ಕವನ್ನು ಕಡಿತ ಮಾಡುತ್ತವೆ. ಆದರೆ, ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆಯುತ್ತಿಲ್ಲ.

ವಿದ್ಯಾರ್ಥಿಗಳು ದಾಖಲಾಗದ 33 ಕಾಲೇಜುಗಳಲ್ಲಿ ಬೆಂಗಳೂರು ನಗರದ ಕೆಲವು ಕಾಲೇಜುಗಳು ಸೇರಿವೆ. ಉಳಿದ ಕಾಲೇಜುಗಳು ಜಿಲ್ಲಾ ಕೇಂದ್ರದಲ್ಲಿವೆ. ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗದ ಹಲವು ಕಾಲೇಜುಗಳು ಈ ಪಟ್ಟಿಯಲ್ಲಿವೆ.

ಎಂಜಿನಿಯರಿಂಗ್ ಕಾಲೇಜುಗಳಿಂದಲೇ ವಿದ್ಯಾರ್ಥಿಗಳ ಹುಡುಕಾಟ, ನಾನಾ ಆಫರ್! ಎಂಜಿನಿಯರಿಂಗ್ ಕಾಲೇಜುಗಳಿಂದಲೇ ವಿದ್ಯಾರ್ಥಿಗಳ ಹುಡುಕಾಟ, ನಾನಾ ಆಫರ್!

ವಿದ್ಯಾರ್ಥಿಗಳು ದಾಖಲಾಗದೇ ಇರುವುದು ಇದೇ ಮೊದಲಲ್ಲ. ಹಲವು ಶೈಕ್ಷಣಿಕ ವರ್ಷಗಳಲ್ಲಿ ಈ ರೀತಿ ನಡೆದಿದೆ ಎನ್ನುತ್ತಾರೆ ಕಾಮೆಡ್-ಕೆ ಅಧಿಕಾರಿಗಳು. ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಈ ಬಾರಿ ಶೇ 8ರಷ್ಟು ಶುಲ್ಕವನ್ನು ಹೆಚ್ಚಿಸಿವೆ. ಸರ್ಕಾರಿ ಕೋಟಾದಡಿ 53 ರಿಂದ 59 ಸಾವಿರದ ತನಕ ಶುಲ್ಕವಿದ್ದರೆ, ಕಾಮೆಡ್‌-ಕೆಯಲ್ಲಿ 1.83 ಲಕ್ಷದಷ್ಟು ಶುಲ್ಕವಿದೆ.

ಯಾವ-ಯಾವ ಕೋರ್ಸ್ : ಕಂಪ್ಯೂಟರ್‌ ಸೈನ್ಸ್, ಇನ್‌ಫರ್ಮೇಷನ್ ಸೈನ್ಸ್, ಎಲೆಕ್ಟ್ರಾನಿಕ್ಸ್, ಮೆಕಾನಿಕಲ್ ಮತ್ತು ಸಿವಿಲ್ ಕೋರ್ಸ್‌ಗಳಿಗೆ ಮಾತ್ರ ಹೆಚ್ಚಿನ ಬೇಡಿಕೆ ಇದೆ. ಉಳಿದ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ಸೇರುತ್ತಿಲ್ಲ.

ಇಂಜಿನಿಯರಿಂಗ್ ಕೋರ್ಸ್‌ ಶುಲ್ಕ ಶೇ 8ರಷ್ಟು ಹೆಚ್ಚಳಇಂಜಿನಿಯರಿಂಗ್ ಕೋರ್ಸ್‌ ಶುಲ್ಕ ಶೇ 8ರಷ್ಟು ಹೆಚ್ಚಳ

ಖಾಸಗಿ ಕೋಟಾ ಮಾತ್ರವಲ್ಲ ಸರ್ಕಾರಿ ಕೋಟಾದ 21 ಸಾವಿರ ಸೀಟುಗಳು ಭರ್ತಿಯಾಗದೇ ಉಳಿದಿವೆ. ಕಳೆದ ವರ್ಷವೂ ಸುಮಾರು 18 ಸಾವಿರ ಇಂಜಿನಿಯರಿಂಗ್ ಸೀಟುಗಳು ಭರ್ತಿಯಾಗಿರಲಿಲ್ಲ.

English summary
Not a single student has enrolled in 33 private engineering colleges in Karnataka in the 2018-19 academic year. Some of these colleges are located in Bengaluru city and majority of colleges in North Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X