ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಬೂಲ್ ದಾಳಿ: ಭಾರತೀಯ ರಾಯಭಾರಿ ಟಾರ್ಗೆಟ್?

By Mahesh
|
Google Oneindia Kannada News

ಕಾಬೂಲ್. ಮೇ.14: ಇಲ್ಲಿನ ಪಾರ್ಕ್ ಪ್ಯಾಲೇಸ್ ಗೆಸ್ಟ್ ಹೌಸ್ ನಲ್ಲಿ ಭಾರತೀಯ ರಾಯಭಾರಿ ಅಮರ್ ಸಿನ್ಹಾ ಇದ್ದಾರೆ ಎಂದು ಕೊಂಡು ಉಗ್ರರು ದಾಳಿ ನಡೆಸಿರುವ ಸಾಧ್ಯತೆ ಹೆಚ್ಚಿದೆ ಎಂದು ಅಫ್ಘಾನಿಸ್ತಾನದ ಅಧಿಕಾರಿಗಳು ಹೇಳಿದ್ದಾರೆ.

ಕಾಬೂಲ್ ನ ಕೊಲೊಲಾ ಪುಷ್ತಾ ಬಳಿ ಇರುವ ಗೆಸ್ಟ್ ಹೌಸ್ ಮೇಲೆ ಶಸ್ತ್ರಧಾರಿ ದುಷ್ಕರ್ಮಿಗಳು ಬುಧವಾರ ತಡರಾತ್ರಿ ನಡೆಸಿದ ದಾಳಿಯಲ್ಲಿ ಇಬ್ಬರು ಭಾರತೀಯರು, ಓರ್ವ ಅಮೆರಿಕನ್ ಸೇರಿ 5 ಮಂದಿ ಬಲಿಯಾಗಿದ್ದಾರೆ. ಯಾವುದೇ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತಿಲ್ಲ. [ಹೆರಾತ್ : ಪಾದ್ರಿ ಅಪಹರಣ ಪ್ರಕರಣ,ಒಬ್ಬ ಬಂಧನ]

ಘಟನೆ ಬಗ್ಗೆ ಇನ್ನೂ ಹೆಚ್ಚಿನ ವಿವರ ಲಭ್ಯವಾಗಬೇಕಿದೆ. ಭಾರತೀಯ ರಾಯಭಾರಿ ಅಮರ್ ಸಿನ್ಹಾ ಅವರನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಿರುವ ಸಾಧ್ಯತೆಯಿದೆ. ಇನ್ನೂ ಭಾರತೀಯರು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಅಧ್ಯಕ್ಷ ಅಶ್ರಫ್ ಘನಿ ಅವರ ಭದ್ರತಾ ಪಡೆಯ ಅಧಿಕಾರಿ ಅಹ್ಮದ್ ಜಿಯಾ ಮಸೌದ್ ಹೇಳಿದ್ದಾರೆ.[ಕಂದಹಾರ್ ಶೈಲಿ ಹೈಜಾಕ್ ಬೆದರಿಕೆ, ವಿ.ನಿಲ್ದಾಣಗಳಲ್ಲಿ ಕಟ್ಟೆಚ್ಚರ]

Was Indian envoy Amar Sinha target of Kabul attack?

ಘಟನೆ ನಡೆದಾಗ ಪಾರ್ಕ್ ಪ್ಯಾಲೇಸ್ ಗೆಸ್ಟ್ ಹೌಸ್ ನಲ್ಲಿ ಸುಮಾರು 40ಕ್ಕೂ ಅಧಿಕ ಮಂದಿ ಇದ್ದರು. ಸಂಗೀತ ಕಾರ್ಯಕ್ರಮಕ್ಕಾಗಿ ಟರ್ಕಿ ಹಾಗೂ ಭಾರತೀಯ ಮೂಲದ ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಕೆಲ ಅಫ್ಘನ್ನರು ಇದ್ದರು. ಸುಮಾರು ಏಳು ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆದ ಬಗ್ಗೆ ವರದಿಯಾಗಿದೆ. [ಅಫ್ಘಾನ್ ನಿರಾಶ್ರಿತರ ದೈನ್ಯತೆ, ಭಾರತದ ನೆರವು]

ಘಟನೆ ಬಗ್ಗೆ ವಿವರ ನೀಡಿದ ಕಾಬೂಲ್ ಪೊಲೀಸ್ ಮುಖ್ಯಸ್ಥ ಅಬ್ದುಲ್ ರಹ್ಮಾನ್ ಅವರು ಮಾತನಾಡಿ, ಈ ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ, 6 ಜನ ಗಾಯಗೊಂಡಿದ್ದಾರೆ ಹಾಗೂ 54 ಮಂದಿ ಒತ್ತೆಯಾಳುಗಳನ್ನು ರಕ್ಷಿಸಲಾಗಿದೆ ಎಂದಿದ್ದಾರೆ.

ಮೂರು ದಿನಗಳ ಚೀನಾ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕಾಬೂಲ್ ದಾಳಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ರಾಯಭಾರ ಕಚೇರಿಯಿಂದ ಕೂಡಾ ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ಟ್ವೀಟ್ ಸಂದೇಶ ಬಂದಿದೆ. (ಒನ್ ಇಂಡಿಯಾ ಸುದ್ದಿ)

English summary
A top Afghan official has been quoted by an Afghan news agency as saying that militants attacked an upscale guesthouse in Kabul on Wednesday(May.13) night thinking that Indian Ambassador Amar Sinha was inside.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X