ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಬಾಂಬ್ ಸ್ಫೋಟದ ಭಯ ಹೋಗಲಾಡಿಸಲು ಮಗುವಿಗೆ ನಗುವಿನ ಪಾಠ!

|
Google Oneindia Kannada News

ದಾಮಸ್ಕಸ್, ಫೆಬ್ರವರಿ.18: ಸಿರಿಯಾ.. ಬೆಳಗಾದರೆ ಬಾಂಬ್ ದಾಳಿ, ಸೇನೆ ಮತ್ತು ಉಗ್ರರ ನಡುವಿನ ಕಾದಾಟಕ್ಕೆ ಕೈಗನ್ನಡಿ ಎನ್ನುವಂತೆ ಇರುವ ಒಂದು ದೇಶ. ಈ ದೇಶದಲ್ಲಿ ಉಗ್ರರ ದಾಳಿಗೆ ಕಡಿವಾಣವೇ ಇಲ್ಲ. ಯಾವಾಗ ಎಲ್ಲಿ ಏನಾಗುತ್ತದೆ ಎಂಬುದೇ ತಿಳಿಯುವುದಿಲ್ಲ.

ಪ್ರತಿಕ್ಷಣವೂ ಭಯದಲ್ಲೇ ಜನರು ಜೀವನ ಸಾಗಿಸುವಂತಾ ಪರಿಸ್ಥಿತಿ ಸಿರಿಯಾದಲ್ಲಿದೆ. ಇದರ ಮಧ್ಯೆ ನಾಲ್ಕು ವರ್ಷದ ಪುಟ್ಟ ಮಗಳನ್ನು ಈ ಬಾಂಬ್ ಸ್ಫೋಟದ ಸದ್ದಿನಿಂದ ರಕ್ಷಿಸುವುದಕ್ಕೆ ತಂದೆ ಪಟ್ಟ ಹರಸಾಹಸ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಪಾಕಿಸ್ತಾನ ಮಸೀದಿ ಬಳಿ ಬಾಂಬ್ ಸ್ಫೋಟ 7 ಮಂದಿ ಸಾವು, 20 ಮಂದಿಗೆ ಗಾಯಪಾಕಿಸ್ತಾನ ಮಸೀದಿ ಬಳಿ ಬಾಂಬ್ ಸ್ಫೋಟ 7 ಮಂದಿ ಸಾವು, 20 ಮಂದಿಗೆ ಗಾಯ

ಸಿರಿಯಾದ ಸ್ಟ್ರಿಫ್ ಟೊರ್ನ್ ಪ್ರದೇಶದಲ್ಲಿರುವ ಅಬ್ದುಲ್ಲಾ-ಅಲ್-ಮೊಹಮ್ಮದ್ ಹಾಗೂ ಅವರ ನಾಲ್ಕು ವರ್ಷದ ಮಗಳು ಸೆಲ್ವಾ ನಗುನಗುತ್ತಿರುವ ವಿಡಿಯೋ ಇದೀಗ ಸಾಕಷ್ಟು ಸದ್ದು ಮಾಡಿದೆ. ಇದಕ್ಕೆ ಕಾರಣವೂ ಇದೆ.

Syria: Dad Teach The Laughing Game For His Daughter, Reason Is Very Interesting

ಮಗುವಿನ ಭಯ ಹೋಗಲಾಡಿಸಲು ನಗುವಿನ ಪಾಠ:

ಮನೆಯ ಸುತ್ತಮುತ್ತಲಿನಲ್ಲೇ ಬಾಂಬ್ ಸ್ಫೋಟ ಮತ್ತು ಗುಂಡಿನ ದಾಳಿಯ ಸದ್ದು ಮೊಳಗುತ್ತಿರುತ್ತದೆ. ಇದರಿಂದ ಮಗು ಭಯ ಪಡದಂತೆ ಅಬ್ದುಲ್ಲಾ-ಅಲ್-ಮೊಹಮ್ಮದ್ ವಿಭಿನ್ನ ರೀತಿಯ ಪಾಠ ಮಾಡಿದ್ದಾರೆ. ಬಾಂಬ್ ಸದ್ದು ಕೇಳಿದಾಕ್ಷಣ ನಗುವುದೇ ಒಂದು ಬಗೆಯ ಆಟ ಎಂದು ಮಗುವಿಗೆ ಸ್ವತಃ ತಂದೆಯೇ ಪಾಠ ಮಾಡಿದ್ದಾನೆ.

ಇದರಿಂದ ಪ್ರತಿಬಾರಿ ಗುಂಡಿನ ಮೊರತೆ, ಬಾಂಬ್ ಸ್ಫೋಟದ ಸದ್ದು ಕೇಳುತ್ತಿದ್ದಂತೆ ಮಗುವು ನಗುವುದನ್ನು ಕಲಿತುಕೊಂಡಿದೆ. ಇದರಿಂದ ಮಗುವಿನಲ್ಲಿ ಭಯವನ್ನು ಹೋಗಲಾಡಿಸಬಹುದು ಎಂದು ತಂದೆ ಅಬ್ದುಲ್ಲಾ ಈ ಪ್ಲಾನ್ ಮಾಡಿದ್ದಾರೆ. ಇದೀಗ ತಂದೆ ಮತ್ತು ಮಗು ಸ್ಫೋಟದ ಬೆನ್ನಲ್ಲೇ ನಗುತ್ತಿರುವ ವಿಡಿಯೋವನ್ನು ಪತ್ರಕರ್ತ ಮೆಲ್ಮತ್ ಅಲ್ಗನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಸಾಕಷ್ಟು ವೈರಲ್ ಆಗುತ್ತಿದೆ.

English summary
Syria: Dad Teach The 'Laughing Game' For His Daughter, Reason Is Very Interesting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X