ಸಿರಿಯಾದಲ್ಲಿ ರಾಸಾಯನಿಕ ಶಸ್ತ್ರಾಸ್ತ್ರ ಬಳಕೆ: ಸಮಾಲೋಚಿಸಿ ಸಮಸ್ಯೆ ಬಗೆಹರಿಸಿ
ವಾಷಿಂಗ್ಟನ್, ಜನವರಿ 06: ಸಿರಿಯಾದಲ್ಲಿ ರಾಸಾಯನಿಕ ಶಸ್ತ್ರಾಸ್ತ್ರ ಬಳಕೆ ವಿಚಾರದ ಕುರಿತಂತೆ ಸಮಾಲೋಚನೆ ನಡೆಸಿ ಸಮಸ್ಯೆ ಬಗೆಹರಿಸಿ ಎಂದು ಭಾರತ ವಿಶ್ವಸಂಸ್ಥೆಗೆ ಒತ್ತಾಯಿಸಿದೆ.
ಸಿರಿಯಾದಲ್ಲಿ ದಶಕಗಳ ಕಾಲ ನಡೆದ ಸಂಘರ್ಷದ ಲಾಭವನ್ನು ಭಯೋತ್ಪಾದಕ ಗುಂಪುಗಳು ಪಡೆದುಕೊಂಡಿವೆ. ಇವು , ಇಡೀ ಪ್ರದೇಶಕ್ಕೆ ಅಪಾಯ ಉಂಟುಮಾಡುತ್ತಿವೆ ಎಂದು ಹೇಳಿರು.
ಈ ವಿಷಯವನ್ನು ರಾಜಕೀಯಗೊಳಿಸುವುದರಿಂದ ಪ್ರಯೋಜನವಿಲ್ಲ, ಹಾಗಾಗಿ, ಸಂಬಂಧಿಸಿದವರು ಸಮಾಲೋಚನೆ ನಡೆಸುವ ಮೂಲಕ ಸಮಸ್ಯೆ ಇತ್ಯರ್ಥಗೊಳಿಸಲು ಪ್ರಯತ್ನಿಸಬೇಕೆಂದು ತಿರುಮೂರ್ತಿ ಹೇಳಿದರು.

ಈ ವಿಷಯದಲ್ಲಿ ರಾಜಕೀಯ ಮಾಡಬಾರದು, ಹಾಗೆ ಮಾಡುವುದರಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂದರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವರ್ಚ್ಯುವಲ್ ಸಭೆಯಲ್ಲಿ, ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ ಅವರು ಮಾತನಾಡಿ, ಸಿರಿಯಾದಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳ ಬಳಕೆಯ ಆರೋಪ ಕುರಿತು ತನಿಖೆ ನಡೆಯುತ್ತಿದೆ. ಈ ತನಿಖೆ ನಿಷ್ಪಕ್ಷವಾಗಿ ನಡೆಯಬೇಕೆಂದು ಹೇಳಿದರು.












Click it and Unblock the Notifications