ಇಸ್ರೇಲ್ ಕ್ಷಿಪಣಿ ದಾಳಿಯಲ್ಲಿ 3 ಸಿರಿಯಾ ಯೋಧರ ಸಾವು
ಡಮಸ್ಕಸ್, ಆಗಸ್ಟ್ 15: ಇಸ್ರೇಲ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಸಿರಿಯಾದ ಮೂವರು ಸೈನಿಕರು ಹುತಾತ್ಮರಾಗಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ರಾಜಧಾನಿ ಡಮಸ್ಕಸ್ ಮತ್ತು ಟಾರ್ಟಸ್ ಕರಾವಳಿ ಪ್ರಾಂತ್ಯದ ಸಮೀಪವಿರುವ ಗ್ರಾಮಾಂತರ ಪ್ರದೇಶವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ರಾತ್ರಿ 8:50 ಗಂಟೆಗೆ (17:50 GMT) ಕ್ಷಿಪಣಿ ದಾಳಿಗಳು ನಡೆದಿವೆ ಎಂದು ಸನಾ ಸುದ್ದಿ ಸಂಸ್ಥೆಗಳು ತಿಳಿಸಿದೆ.
ಸಿರಿಯನ್ ವಾಯು ರಕ್ಷಣಾ ಪಡೆಗಳು ಈ "ದಾಳಿಗಳನ್ನು" ಎದುರಿಸಿತು. ಕೆಲವು ಕ್ಷಿಪಣಿಗಳನ್ನು ಹೊಡೆದುರುಳಿಸಿತು ಎಂದು ಹೆಸರಿಸದ ಮಿಲಿಟರಿ ಮೂಲವನ್ನು ಉಲ್ಲೇಖಿಸಿ SANA ಹೇಳಿದೆ. ಇನ್ನು ಈ ದಾಳಿಯಲ್ಲಿ ಮೂವರು ಸೈನಿಕರು ಹುತಾತ್ಮರಾಗಿದ್ದು, ಇತರೆ ಮೂವರು ಯೋಧರು ಗಾಯಗೊಂಡಿದ್ದಾರೆ," ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇಸ್ರೇಲ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ:
ಲೆಬನಾನಿನ ರಾಜಧಾನಿ ಬೈರುತ್‌ನ ಆಗ್ನೇಯ ದಿಕ್ಕಿನಿಂದ ಡಮಸ್ಕಸ್ ಮೇಲೆ ದಾಳಿಗಳನ್ನು ನಡೆಸಲಾಯಿತು. ಆದರೆ ಟಾರ್ಟಸ್ ಮೇಲಿನ ದಾಳಿಗಳು ಮೆಡಿಟರೇನಿಯನ್ ಸಮುದ್ರದಿಂದ ಬಂದಿವೆ. ಈ ದಾಳಿಯಿಂದ ಜೀವಹಾನಿ ಜೊತೆಗೆ ವಸ್ತುಗಳಿಗೂ ಹಾನಿಯಾಗಿದೆ ಎಂದು ಮಿಲಿಟರಿ ಮೂಲಗಳು ಉಲ್ಲೇಖಿಸಿವೆ. ಆದರೆ ಈ ಕುರಿತು ಪ್ರತಿಕ್ರಿಯೆ ನೀಡುವುದಕ್ಕೆ ಇಸ್ರೇಲ್ ಸೇನಾಪಡೆಯು ನಿರಾಕರಿಸಿದೆ.
ಇಸ್ರೇಲ್ ಸಮರ್ಥನೆ ಏನು?:
2011ರಲ್ಲಿ ಸಿರಿಯಾದಲ್ಲಿ ಅಂತರ್ಯುದ್ಧ ಪ್ರಾರಂಭವಾದಾಗಿನಿಂದ ಇಸ್ರೇಲ್, ಈ ದೇಶದೊಳಗೆ ನೂರಾರು ವೈಮಾನಿಕ ದಾಳಿಗಳನ್ನು ನಡೆಸಿದೆ. ಸರ್ಕಾರಿ ಸ್ಥಾನಗಳನ್ನು ಮತ್ತು ಮಿತ್ರ ಇರಾನ್ ಬೆಂಬಲಿತ ಪಡೆಗಳು ಮತ್ತು ಹೆಜ್ಬುಲ್ಲಾ ಹೋರಾಟಗಾರರನ್ನು ಗುರಿಯಾಗಿಸಿಕೊಂಡಿದೆ. ಸಿರಿಯಾದಲ್ಲಿನ ವೈಯಕ್ತಿಕ ದಾಳಿಗಳ ಬಗ್ಗೆ ಇಸ್ರೇಲ್ ಅಪರೂಪಕ್ಕೆ ಆರೋಪ ಮಾಡುತ್ತಿದೆ. ಆದರೆ ಇರಾನ್ ತನ್ನವರೆಗೆ ಬಾರದಿರುವುದಕ್ಕೆ ಈ ಕ್ರಮ ತೆಗೆದುಕೊಂಡಿರುವುದಾಗಿ ಇಸ್ರೇಲ್ ಸಮರ್ಥಿಸಿಕೊಳ್ಳುತ್ತಿದೆ.
ಇರಾನ್ ಬೆಂಬಲಿತ ಗುಂಪುಗಳ ಮೇಲೆ ದಾಳಿ:
ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯವು ಭಾನುವಾರದ ದಾಳಿಯ ಬಗ್ಗೆ ವರದಿ ಮಾಡಿದೆ. ಈ ದಾಳಿಗಳು ಇರಾನ್ ಬೆಂಬಲಿತ ಗುಂಪುಗಳು ಸಕ್ರಿಯವಾಗಿರುವ ಟಾರ್ಟಸ್ ಪ್ರಾಂತ್ಯದ ವಾಯು ರಕ್ಷಣಾ ನೆಲೆಯನ್ನು ಗುರಿಯಾಗಿಸಿಕೊಂಡಿವೆ ಎಂದು ಹೇಳಿದರು. ಟಾರ್ಟಸ್‌ನಲ್ಲಿರುವ ರಷ್ಯಾದ ನೆಲೆಯಿಂದ 8 ಕಿಮೀ (5 ಮೈಲುಗಳು) ದೂರದಲ್ಲಿ ಈ ಪ್ರದೇಶವಿದೆ ಎಂದು ಹೇಳಲಾಗುತ್ತಿದ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications