ಇಸ್ರೇಲ್‌ ಪ್ರತಿಕಾರಕ್ಕೆ 8 ಸಿರಿಯಾ ಸೈನಿಕರು ಬಲಿ- ಮಧ್ಯಪ್ರಾಚ್ಯದಲ್ಲಿ ಘೋರ ರಕ್ತಪಾತಕ್ಕೆ ಮುನ್ನುಡಿ ಬರೆಯುತ್ತಿರುವ ಯಹೂದಿ ರಾಷ್

ಡಮಾಸ್ಕಸ್, ಅಕ್ಟೋಬರ್ 25: ದಕ್ಷಿಣ ಸಿರಿಯಾದಲ್ಲಿ ಬುಧವಾರ ಮುಂಜಾನೆ ಇಸ್ರೇಲ್‌ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ ಎಂಟು ಸೈನಿಕರನ್ನು ಹತ್ಯೆಯಾಗಿದ್ದಾರೆ ಎಂದು ಸಿರಿಯನ್ ರಾಜ್ಯ ಮಾಧ್ಯಮ ವರದಿ ಮಾಡಿದೆ. ಸಿರಿಯನ್‌ ಸೈನಿಕರು ನಡೆಸಿದ ರಾಕೆಟ್‌ ದಾಳಿಗೆ ಪ್ರತಿಕಾರವಾಗಿ ಈ ದಾಳಿಯನ್ನು ನಡೆಸಿದ್ದೇವೆ ಎಂದು ಇಸ್ರೇಲ್‌ ಹೇಳಿಕೊಂಡಿವೆ.

ಲೆಬನಾನ್‌ನಲ್ಲಿರುವ ಹಿಸ್ಬುಲ್‌ ಸಂಘಟನೆಯು ಇಸ್ರೇಲ್‌ ಉತ್ತರದ ಗಡಿಯಲ್ಲಿ ಸಂಘರ್ಷಕ್ಕೆ ಇಳಿದಿದೆ. ಇದಕ್ಕೆ ಸಿರಿಯಾ ದೇಶವು ಬೆಂಬಲ ನೀಡುತ್ತಿದೆ ಎಂಬ ಆರೋಪವನ್ನು ಇಸ್ರೇಲ್‌ ಮಾಡಿದೆ.

Israel-Hamas war: Israeli air strikes kill eight Syria troops

ಲೆಬನಾನ್ ಮತ್ತು ಸಿರಿಯಾ ಜೊತೆಗೆ ಪ್ಯಾಲೆಸ್ತೀನ್‌ ಉತ್ತಮ ಬಾಂಧವ್ಯ ಹೊಂದಿರುವುದು ಇಸ್ರೇಲ್‌ನ ಚಿಂತೆಗೆ ಕಾರಣವಾಗಿದೆ. ಗಾಜಾ ಪಟ್ಟಿಯ ಮೇಲೆ ಇಸ್ರೇಲ್‌ ಯುದ್ಧ ಆರಂಭಿಸಿದಾಗಿನಿಂದ ಸಿರಿಯಾ ಹಾಗೂ ಲೆಬನಾನ್‌ನಿಂದ ರಾಕೆಟ್ ಮತ್ತು ಫಿರಂಗಿ ದಾಳಿಗಳು ನಡೆಯುತ್ತಲೇ ಇದೆ. ಇದು ಮಧ್ಯಪ್ರಾಚ್ಯದಲ್ಲಿ ತೀವ್ರ ಭಯವನ್ನು ಹುಟ್ಟುಹಾಕಿದೆ.

'ರಾತ್ರಿ ಸೂಮಾರು 1:45 ಗಂಟೆಗೆ ಇಸ್ರೇಲಿ ಶತ್ರುಗಳು ಗೋಲ್ಡನ್ ಹೈಟ್ಸ್‌ನಿಂದ ವೈಮಾನಿಕ ದಾಳಿಯನ್ನು ನಡೆಸಿದ್ದಾರೆ' ಎಂದು ಸಿರಿಯನ್ ರಾಜ್ಯ ಮಾಧ್ಯಮ ಹೇಳಿದೆ.

ದಾಳಿಯಲ್ಲಿ ಎಂಟು ಸೈನಿಕರು ಗಾಯಗೊಂಡಿದ್ದಾರೆ. ಏಳು ಸೈನಿಕರಿಗೆ ಗಾಯವಾಗಿದೆ. ಆಸ್ತಿಪಾಸ್ತಿಗೆ ಹಾನಿ ಉಂಟಾಗಿದೆ ಎಂದು ಸಿರಿಯಾ ಹೇಳಿಕೊಂಡಿದೆ.

Israel-Hamas war: Israeli air strikes kill eight Syria troops

ನಾಲ್ವರು ಅಧಿಕಾರಿಗಳು ಸೇರಿದಂತೆ 11 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.

ಭಾನುವಾರದಂದು ಇಸ್ರೇಲ ದಾಳಿಗಳನ್ನು ಆರಂಭಿಸಿದೆ. ಸಿರಿಯಾದ ಎರಡು ಪ್ರಮುಖ ವಿಮಾನ ನಿಲ್ದಾಣಗಳಾದ ಡಮಾಸ್ಕಸ್ ಮತ್ತು ಅಲೆಪ್ಪೊ ಮೇಲೆ ದಾಳಿಗಳು ನಡೆದಿವೆ. ಈ ಕಾರಣದಿಂದಾಗಿ ಎರಡೂ ವಿಮಾನ ನಿಲ್ದಾಣಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ ಎಂದು ಸಿರಿಯನ್ ಸರ್ಕಾರಿ ಮಾಧ್ಯಮ ಹೇಳಿದೆ.

ಅಕ್ಟೋಬರ್ 7 ರಂದು ಪ್ಯಾಲೇಸ್ಟಿನಿಯನ್ ಇಸ್ಲಾಮಿಸ್ಟ್ ಚಳುವಳಿ ಹಮಾಸ್‌ನ ಉಗ್ರಗಾಮಿಗಳು ಇಸ್ರೇಲ್‌ಗೆ ನುಗ್ಗಿದ ನಂತರ ಇಸ್ರೇಲ್ ಗಾಜಾ ಪಟ್ಟಿಯನ್ನು ಮುತ್ತಿಗೆ ಹಾಕಿದೆ. ಹಮಾಸ್‌ ದಾಳಿಯಲ್ಲಿ 1,400 ಇಸ್ರೇಲಿಗಳು ಬಲಿಯಾಗಿದ್ದಾರೆಂದು ಅಲ್ಲಿ ಸರ್ಕಾರ ಮಾಹಿತಿ ನೀಡಿದೆ.

Israel-Hamas war: Israeli air strikes kill eight Syria troops

ಇದು ಇಸ್ರೇಲ್‌ನ ಇತಿಹಾಸದಲ್ಲೇ ಅತ್ಯಂತ ಭೀಕರ ದಾಳಿ ಎಂದು ಸರ್ಕಾರ ಹೇಳಿಕೊಂಡಿದೆ. 220 ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಹಮಾಸ್‌ ಇರಿಸಿಕೊಂಡಿದೆ ಎಂದು ಇಸ್ರೇಲ್‌ ತಿಳಿಸಿದೆ.

ಹಮಾಸ್‌ ದಾಳಿಗೆ ಪ್ರತಿಕ್ರಿಯಿಸಿರುವ ಇಸ್ರೇಲ್‌ ಯುದ್ಧವನ್ನು ಘೋಷಿಸಿದೆ. ಭೂಮಿ, ಸಮುದ್ರ ಮತ್ತು ವಾಯು ಮೂಲಕ ದಾಳಿಯನ್ನು ನಡೆಸುತ್ತಿದೆ. ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಈ ವರೆಗೆ 5,791 ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್‌ ಹೇಳಿದೆ.

ಸಿರಿಯಾದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ನಡೆದ ಅಂತರ್ಯುದ್ಧದ ಸಮಯದಲ್ಲಿ ಇಸ್ರೇಲ್ ನೂರಾರು ವೈಮಾನಿಕ ದಾಳಿಗಳನ್ನು ನಡೆಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+