ಅತ್ಯಾಚಾರವನ್ನು ರಾಜಕೀಯಕ್ಕೆ ಬಳಸುವುದು ನಾಚಿಕೆಗೇಡು: ಮೋದಿ

ಲಂಡನ್, ಏಪ್ರಿಲ್ 19: "ಅತ್ಯಾಚಾರ ಅಂದ್ರೆ ಅತ್ಯಾಚಾರ. ಅದನ್ನು ರಾಜಕೀಯ ಉದ್ದೇಶಕ್ಕೆ ಬಳಸುವುದು ಅತ್ಯಂತ ನಾಚಿಕೆಗೇಡಿನ ಕೆಲಸ" ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಲಂಡನ್ನಿನ ವೆಸ್ಟ್ ಮಿನಿಸ್ಟರ್ ಸೆಂಟ್ರಲ್ ಹಾಲ್ ನಲ್ಲಿ ಭಾರತ್ ಕೀ ಬಾತ್ ಸಬ್ ಕೆ ಸಾಥ್ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಜಮ್ಮು ಕಾಶ್ಮೀರದ ಕತುವಾ ಮತ್ತು ಉತ್ತರ ಪ್ರದೇಶದ ಉನ್ನಾವೋನಲ್ಲಿ ನಡೆದ ಅತ್ಯಾಚಾರ ಪ್ರಕರಣಗಳ ಕುರಿತು ಮಾತನಾಡುವ ಸಮಯದಲ್ಲಿ ಅವರು ಈ ರೀತಿ ಮಾತನಾಡಿದರು.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

Rape is rape, shameful to politicise such issues: PM Modi

'ನಮ್ಮ ಹೆಣ್ಣು ಮಕ್ಕಳ ಮೇಲೆ ನಡೆವ ಈ ದೌರ್ಜನ್ಯವನ್ನು ನಾವು ಹೇಗೆ ತಾನೇ ಸಹಿಸಿಕೊಳ್ಳುವುದಕ್ಕೆ ಸಾಧ್ಯ? ಒಬ್ಬ ಮಗುವಿನ ಮೇಲೆ ಅತ್ಯಾಚಾರವಾದರೆ ಅದನ್ನು ಈಗಿನ ಸರ್ಕಾರ, ಹಳೇ ಸರ್ಕಾರ ಎಂದು ಹೋಲಿಕೆ ಮಾಡುವುದು ಸರಿಯೇ? ಅದು ನಿಜಕ್ಕೂ ನಾಚಿಕೆಗೇಡು. ನಿಮ್ಮ ಸರ್ಕಾರದಲ್ಲಿ ಹೆಚ್ಚು ಅತ್ಯಾಚಾರವಾದವು, ನಮ್ಮ ಸರ್ಕಾರದಲ್ಲಿ ಇಷ್ಟಾದವು ಎಂದು ನಾವು ಚರ್ಚಿಸುವುದಕ್ಕಾಗುವುದಿಲ್ಲ. ಈ ಗಂಭೀರ ವಿಷಯವನ್ನು ನಿರ್ವಹಿಸುವ ದಾರಿ ಸುಲಭವಿಲ್ಲ' ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+