ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ ಭಾರತೀಯ ನಕಲಿ ಕೋವಿಡ್ ಔಷಧಿ ಹಾವಳಿ: ಆರೋಗ್ಯ ತಜ್ಞರು

|
Google Oneindia Kannada News

ಬೀಜಿಂಗ್, ಜನವರಿ 08: ಚೀನಾದಲ್ಲಿ ದಾಖಲೆಯ ಮಟ್ಟದಲ್ಲಿ ಕೊರೊನಾ ಸೋಂಕು ವ್ಯಾಪಿಸಿದೆ. ಇದರ ಮಧ್ಯೆ ಚೀನಾದ ಕಪ್ಪು ಮಾರುಕಟ್ಟೆಯಲ್ಲಿ ಭಾರತೀಯ ಜೆನೆರಿಕ್ ಔಷಧಿಗಳ ನಕಲಿ ಆವೃತ್ತಿಗಳು ಹೆಚ್ಚಾಗಿದೆ. ಅದರಲ್ಲೂ ಆಂಟಿವೈರಲ್ ಮತ್ತು ಪ್ಯಾಕ್ಸ್‌ಲೋವಿಡ್ ಔಷಧಿಗಳಿಗೆ ಬೇಡಿಕೆ ಹೆಚ್ಚಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಪ್ಯಾಕ್ಸ್‌ಲೋವಿಡ್ ಔಷಧಿಯು ಸರ್ಕಾರದಿಂದ ನಿಯಂತ್ರಿಸಲ್ಪಟ್ಟಿದೆ. ಡಿಸೆಂಬರ್ 7 ರಂದು ಚೀನಾದಲ್ಲಿ 'ಶೂನ್ಯ ಕೋವಿಡ್ ನೀತಿ' ಅಂತ್ಯಗೊಂಡ ಬೆನ್ನಲ್ಲೆ ಚೀನೀ ಇ-ಕಾಮರ್ಸ್ ವೇದಿಕೆಗಳಲ್ಲಿ ಭಾರತದಲ್ಲಿ ತಯಾರಿಸಿರುವ ಜೆನೆರಿಕ್ ಔಷಧಿಗಳ ಮಾರಾಟ ಹೆಚ್ಚಾಯಿತು.

ನೀತಿ ಅಂತ್ಯದ ಬಳಿಕ ಡಿಸೆಂಬರ್ 8ರಿಂದ ಈವರೆಗೆ ಚೀನಾದಲ್ಲಿ 250 ಮಿಲಿಯನ್ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗವು ಅಂದಾಜಿಸಿದೆ. ಈ ಪ್ರಕರಣಗಳಲ್ಲಿ ಬಹುತೇಕ ಸೋಂಕಿತರಲ್ಲಿ ಸೌಮ್ಯ ಸ್ವಭಾವದ ಲಕ್ಷಣಗಳು ಕಂಡು ಬಂದಿವೆ. ಲಸಿಕೆ ಪಡೆದ ಹಿರಿಯ ನಾಗರಿಕರು ಸಾವಿಗೀಡಾಗಿದ್ದಾರೆ.

Fake Indian Covid Medicine sell increase in China black market Health specialist

ಈ ಕಾರಣದಿಂದ ಕೋವಿಡ್ ಔಷಧಿಗಳ ಜೊತೆಗೆ ಭಾರತೀಯ ಜೆನೆರಿಕ್‌ ಔಷಧಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಜೆನರಿಕ್ ಔಷಧಿಗಳ ನಕಲಿ ಆವೃತ್ತಿಗಳು ಸಹ ಮಾರುಕಟ್ಟೆ ಪ್ರವೇಶಿಸಿವೆ ಎಂದು ತಜ್ಞರು ತಿಳಿಸಿದ್ದಾರೆ.

ಕೋವಿಡ್-19 ಸೋಂಕುಗಳ ಬೃಹತ್ ಅಲೆಯ ನಡುವೆ ಚೀನಾದ ಪ್ರಯೋಗಾಲಯಗಳು ಸಾರ್ವಜನಿಕ ಆರೋಗ್ಯಕ್ಕೆ ಹೊಸ ಸಂಭಾವ್ಯ ಅಪಾಯದ ಬಗ್ಗೆ ಎಚ್ಚರಿಕೆ ನೀಡುತ್ತಿವೆ. ನಕಲಿ ಆಂಟಿವೈರಲ್ ಔಷಧಿಗಳ ವ್ಯಾಪಾರ ಬೆಳೆಯುತ್ತಿದೆ ಎಂದು ಚೀನಾದ ಔಟ್ಲೆಟ್ ಸಿಕ್ಸ್ತ್ ಟೋನ್ ವರದಿ ಮಾಡಿದೆ.

ಕಳೆದ 2 ವಾರದಲ್ಲಿ ನಕಲಿ ಔಷಧಿ ಮಾರಾಟ ಏರಿಕೆ

ಪ್ಯಾಕ್ಸ್‌ಲೋವಿಡ್ ಔಷಧಿ ಬಾಕ್ಸ್‌ಗಳು ಈಗ ಕಪ್ಪು ಮಾರುಕಟ್ಟೆಯಲ್ಲಿ 50,000 ಯುವಾನ್ ($7,200) ಕ್ಕೆ ಮಾರಾಟವಾಗುತ್ತಿವೆ. ಚೀನಾದಲ್ಲಿ ಅನೇಕರು ಅಗ್ಗದ ಔಷಧಿ ಹುಡುಕುವಂತ ಪರಿಸ್ಥಿತಿ ಇದೆ. ಅದು ಭಾರತೀಯ ತಯಾರಕರು ಉತ್ಪಾದಿಸುವ ಔಷಧದ ಜೆನೆರಿಕ್ ಆವೃತ್ತಿಗಳಿಗೆ ಬೇಡಿಕೆಯನ್ನು ಹೆಚ್ಚಿಸುತ್ತಿದೆ. ಆದಾಗ್ಯೂ, ಪ್ರಯೋಗಾಲಯದ ವಿಶ್ಲೇಷಣೆಯು ಚೀನಾದಲ್ಲಿ ಚಲಾವಣೆಯಲ್ಲಿರುವ ಭಾರತೀಯ ಔಷಧಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಕಲಿ ಎಂದು ಸೂಚಿಸುತ್ತದೆ ಎಂದು ವರದಿ ಹೇಳಿದೆ.

Fake Indian Covid Medicine sell increase in China black market Health specialist

ನಕಲಿ ಔಷಧಿಗಳ ಆವೃತ್ತಿಗಳು ಹಾನಿ ಉಂಟುಮಾಡುವುದಿಲ್ಲ ಅಂದರೂ ಸಹ ಚೀನಾ ಆರೋಗ್ಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಪ್ಯಾಕ್ಸ್‌ಲೋವಿಡ್ ಅನ್ನು ಸರ್ಕಾರಿ ಚಿಕಿತ್ಸಾಲಯಗಳ ಮೂಲಕ ಸಿಗುವಂತೆ ಮಾಡಲಾಗಿದೆ. ಔಷಧಿಯ ರೋಗಿಗಳ ಅಗತ್ಯವನ್ನು ವೈದ್ಯರು ಮೌಲ್ಯಮಾಪನ ಮಾಡುವುದರೊಂದಿಗೆ ಮಾರಾಟವನ್ನು ಹೆಚ್ಚು ನಿಯಂತ್ರಿಸಲಾಗುತ್ತದೆ. ಚೀನೀ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಭಾರತದಲ್ಲಿ ಉತ್ಪಾದಿಸಲಾದ ಕನಿಷ್ಠ ನಾಲ್ಕು ಜೆನೆರಿಕ್ ಕೋವಿಡ್ ಔಷಧಗಳಾದ ಪ್ರಿಮೊವಿರ್, ಪ್ಯಾಕ್ಸಿಸ್ಟಾ, ಮೊಲ್ನುನಾಟ್ ಮತ್ತು ಮೊಲ್ನಾಟ್ರಿಸ್ ಇತ್ತೀಚಿನ ವಾರಗಳಲ್ಲಿ ಹೆಚ್ಚು ಮಾರಾಟವಾಗುತ್ತಿವೆ.

ಚೀನಾ ದೇಶದ ಜೀನೋಮಿಕ್ಸ್ ಕಂಪನಿಯಾದ ಬಿಜಿಐ ಮುಖ್ಯಸ್ಥ ಯಿನ್ ಯೆ ಅವರು, 143 ಮಾದರಿಗಳನ್ನು ಕೋವಿಡ್ ಔಷಧ ಪ್ರಿಮೊವಿರ್ ಪರೀಕ್ಷಿಸಲಾಗಿದೆ. ಚೀನಾವು 2019 ರಲ್ಲಿ ಔಷಧಿಗಳ ಆಮದಿನ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದ ನಂತರ, ಸಾಂಕ್ರಾಮಿಕ ಸಮಯದಲ್ಲಿ ಸೀಮಿತ ಸಾರಿಗೆ ಮಾರ್ಗಗಳ ಕಾರಣದಿಂದಾಗಿ ವ್ಯಾಪಾರವನ್ನು ಮೊಟಕುಗೊಳಿಸಿತು. ಹೀಗಿದ್ದರು ಚೀನಾ ಮಾರುಕಟ್ಟೆಯನ್ನು ಭಾರತದ ಕ್ಯಾನ್ಸರ್ ಔಷಧಿಗಳು ಸೇರಿದಂತೆ ಅನುಮೋದಿತವಲ್ಲದ ನಕಲಿ ಔಷಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚೀನಾಗೆ ಲಗ್ಗೆ ಇಟ್ಟಿವೆ ಎನ್ನಲಾಗಿದೆ.

English summary
Fake Indian Covid 19 medicine sell increase in China black market Said China Health specialist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X