ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಜೋಡಿಯಿಂದ ಕರ್ನಾಟಕ ಸೇರಿ ದೇಶದ ಪ್ರಮುಖ ದೇವಸ್ಥಾನಗಳಲ್ಲಿ ಅನ್ನದಾನ ಸೇವೆ
Rashmika Mandanna-Vijay Devarakonda: ದಕ್ಷಿಣ ಭಾರತದ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರು ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈಗ ದೇಶದ ವಿವಿಧ ರಾಜ್ಯಗಳ ಪ್ರಮುಖ ದೇವಾಲಯಗಳಲ್ಲಿ ಅನ್ನದಾನ ಸೇವೆ ನಡೆಸುವ ಮೂಲಕ ಈ ಜೋಡಿ ಸದ್ದಿಲ್ಲದೆ ಪುಣ್ಯದ ಕೆಲಸಕ್ಕೆ ಕೈಹಾಕಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ದೇವಾಲಯಗಳ ಪಟ್ಟಿ ಈಗ ವೈರಲ್ ಆಗುತ್ತಿದ್ದು, ಅವರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಸ್ಟಾರ್ ಜೋಡಿಯ ಅನ್ನದಾನ ಸೇವೆಯು ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳ ಒಟ್ಟು 16 ಪ್ರಮುಖ ದೇವಾಲಯಗಳಲ್ಲಿ ಈ ಸೇವೆ ನಡೆಯುತ್ತಿದೆ. ಜೊತೆಗೆ ಸಿಹಿ ಹಂಚುವ ಬಗ್ಗೆಯೂ ಮಾಹಿತಿಯನ್ನು ಇಬ್ಬರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕರ್ನಾಟಕದ ಪ್ರಮುಖ ದೇವಾಲಯಗಳಲ್ಲಿ ಅನ್ನದಾನ ಸೇವೆ
* ಬೆಂಗಳೂರಿನ ಶಿವೋಹಂ ದೇವಾಲಯ.
* ಕೊಡಗಿನ ಪಾಡಿ ಇಗ್ಗುತಪ್ಪ ದೇವಾಲಯ.
* ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಾಲಯ.
* ಬೆಂಗಳೂರಿನ ಹರೇ ಕೃಷ್ಣ ಹಿಲ್ಸ್‌ನಲ್ಲಿರುವ ರಾಧಾ ಕೃಷ್ಣ ದೇವಾಲಯ.
ಕರ್ನಾಟಕದ ಹೊರತಾಗಿ ಇತರ ರಾಜ್ಯಗಳಲ್ಲೂ ಅನ್ನದಾನ
* ಉತ್ತರ ಪ್ರದೇಶ: ಶ್ರೀ ಶ್ರೀ ಕೃಷ್ಣ ಬಲರಾಮ್ ಮಂದಿರ (ವೃಂದಾವನ).
* ಅಸ್ಸಾಂ: ಶ್ರೀ ರುಕ್ಮಿಣಿ ದೇವಾಲಯ (ಗುವಾಹಟಿ).
* ಗುಜರಾತ್: ಇಸ್ಕಾನ್ ಶ್ರೀ ಶ್ರೀ ಗೋವಿಂದ ಧಾಮ ದೇವಾಲಯ (ಅಹಮದಾಬಾದ್).
* ಛತ್ತೀಸ್‌ಗಢ: ಶ್ರೀ ಶ್ರೀ ರಾಧಾ ರಾಸ್ ಬಿಹಾರಿ ಜಿ ದೇವಾಲಯ (ರಾಯಪುರ).
* ರಾಜಸ್ಥಾನ: ಗೋವಿಂದ ದೇವ್ ಜಿ ದೇವಾಲಯ (ಜೈಪುರ).
* ತಮಿಳುನಾಡು: ಅರುಲ್ಮಿಗು ಕೊನ್ನಿಯಮ್ಮನ್ ತಿರುಕೋಯಿಲ್ (ಕೊಯಮತ್ತೂರು).
* ತೆಲಂಗಾಣ: ಚಿಂತಪಲ್ಲಿ ಸಾಯಿ ಬಾಬಾ ದೇವಾಲಯ
* ತೆಲಂಗಾಣ: ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಾಲಯ (ಮಹಬೂಬ್‌ನಗರ)
* ತೆಲಂಗಾಣ: ಹರೇ ಕೃಷ್ಣ ದೇವಾಲಯ (ಹೈದರಾಬಾದ್)
* ಆಂಧ್ರಪ್ರದೇಶ: ವಿಶಾಖಪಟ್ಟಣದ ಶ್ರೀ ಕನಕ ಮಹಾಲಕ್ಷ್ಮಿ ದೇವಾಲಯ
* ಆಂಧ್ರಪ್ರದೇಶ: ದ್ವಾರಕಾ ತಿರುಮಲ ದೇವಾಲಯ
* ಆಂಧ್ರಪ್ರದೇಶ: ವಿಜಯವಾಡದ ಕನಕದುರ್ಗ ಕನಕದುರ್ಗ ದೇವಾಲಯ (ವಿಜಯವಾಡ)
ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಐಷಾರಾಮಿ ಜೀವನದ ಮೂಲಕ ಸುದ್ದಿಯಾಗುತ್ತಾರೆ. ಆದರೆ, ಈ ರೀತಿ ಅನ್ನದಾಸೋಹ ಕಾರ್ಯದ ಮೂಲಕ ರಶ್ಮಿಕಾ ಮತ್ತು ವಿಜಯ್ ಮಾದರಿಯಾಗಿದ್ದಾರೆ. "ನಿಮ್ಮ ಆಶೀರ್ವಾದ ಸದಾ ಇರಲಿ" ಎಂಬ ಸಂದೇಶದೊಂದಿಗೆ ಈ ಪಟ್ಟಿಯನ್ನು ಹಂಚಿಕೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಟೋ ಸಖತ್ ವೈರಲ್ ಆಗುತ್ತಿದೆ. ಒಟ್ಟಿನಲ್ಲಿ ಸಿನಿಮಾ ಕೆಲಸಗಳ ನಡುವೆಯೂ ಆಧ್ಯಾತ್ಮಿಕ ಮತ್ತು ಸಾಮಾಜಿಕ ಕಳಕಳಿ ತೋರುತ್ತಿರುವ ಈ ಜೋಡಿಯ ನಡೆ ಅನೇಕರಿಗೆ ಸ್ಪೂರ್ತಿಯಾಗಿದೆ.
ಜೊತೆಗೆ ತಮ್ಮ ಮದುವೆಯ ಸಂಭ್ರಮವನ್ನು ದೇಶದಾದ್ಯಂತ ಹಂಚಿಕೊಳ್ಳಲು ನಿರ್ಧರಿಸಿರುವ ಈ ಜೋಡಿ, ಮಾರ್ಚ್ 1ರಂದು ಹಸಿದವರಿಗೆ ಅನ್ನದಾನ ಮಾಡುವ ಮೂಲಕ ಎಲ್ಲರ ಹಾರೈಕೆಯನ್ನು ಕೋರಿದ್ದಾರೆ. "ಭಾರತದಲ್ಲಿ ಯಾವುದೇ ವಿಶೇಷ ಸಂದರ್ಭವನ್ನು ಸಿಹಿ ಮತ್ತು ಆಹಾರದೊಂದಿಗೆ ಆಚರಿಸುವುದು ವಾಡಿಕೆ" ಎಂದು ತಿಳಿಸಿರುವ ಈ ಜೋಡಿ, ಇಂದು ದೇಶಾದ ಹಲವು ಭಾಗಗಳಲ್ಲಿ ಸಿಹಿ ಮತ್ತು ಆಹಾರದ ಟ್ರಕ್‌ಗಳನ್ನು ಕಳುಹಿಸುತ್ತಿರುವುದಾಗಿ ಹೇಳಿದ್ದಾರೆ.
ಎಲ್ಲೆಲ್ಲಿ ಸಹಿ ಹಂಚಿ ಸಂಭ್ರಮ
* ತೆಲಂಗಾಣ: ಹೈದರಾಬಾದ್, ಮೆಹಬೂಬ್‌ನಗರ, ಕಾರಿಂನಗರ
* ದೆಹಲಿ
* ಛತ್ತಿಸ್‌ಘಢ: ನೋಯ್ಡಾ, ಘಾಜಿಯಾಬಾದ್
* ಗುಜರಾತ್: ಅಹಮದಾಬಾದ್
* ಮಧ್ಯಪ್ರದೇಶ: ಭೋಪಾಲ್
* ರಾಜಸ್ಥಾನ್: ಜೈಪುರ್
* ಆಂಧ್ರಪ್ರದೇಶ: ವೈಜಾಗ್, ವಿಜಯವಾಡ, ಪುಟ್ಟಪರ್ತಿ
* ಕೇರಳ: ಕೊಚ್ಚಿ
* ಕರ್ನಾಟಕ: ಮೈಸೂರು, ಕೂರ್ಗ್, ಬೆಂಗಳೂರು
* ತಮಿಳುನಾಡು: ಕೋಯಂಬತ್ತೂರು, ಚೆನ್ನೈ, ಪಾಂಡಿಚೆರಿ
* ಬಿಹಾರ್
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ "ನಮ್ಮ ಈ ಪ್ರಯಾಣ ಮತ್ತು ಪ್ರೀತಿಯಲ್ಲಿ ನೀವು ಯಾವಾಗಲೂ ಭಾಗವಾಗಿದ್ದೀರಿ. ಈಗ ನಮ್ಮ ಮದುವೆಯನ್ನು ನಿಮ್ಮೆಲ್ಲರೊಂದಿಗೆ ಆಚರಿಸುತ್ತಿರುವುದು ನಮಗೆ ನಿಜಕ್ಕೂ ಸಂತೋಷ ತಂದಿದೆ" ಎಂದು ವಿಜಯ್ ಮತ್ತು ರಶ್ಮಿಕಾ ಜೋಡಿ ಎಲ್ಲರ ಆಶೀರ್ವಾದವನ್ನು ಕೋರಿದ್ದಾರೆ.
-
ಆದಿಚುಂಚನಗಿರಿ ಮಠಕ್ಕೆ ಇಂದು ಪ್ರಧಾನಿ ಮೋದಿ ಭೇಟಿ: ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆಗೆ ಸಕಲ ಸಿದ್ಧತೆ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು












Click it and Unblock the Notifications