ಕರ್ನಾಟಕ ರಾಜಕೀಯದಲ್ಲಿ ಫೋನ್ ಟ್ಯಾಪಿಂಗ್ ಚರ್ಚೆ ಜೋರು: ಗೃಹ ಸಚಿವರು ಹೇಳಿದ್ದೇನು?
ಬೆಂಗಳೂರು: ಕರ್ನಾಟಕ ರಾಜಕೀಯಲ್ಲಿ ನಾಯಕತ್ವ ಬದಲಾವಣೆ ಮತ್ತೊಂದು ಹಂತ ತಲುಪಿದಂತೆ ಕಾಣುತ್ತಿದೆ. ಸರ್ಕಾರ ಫೋನ್ ಕದ್ದಾಲಿಕೆ ಆರೋಪ ಎದುರಿಸುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು, ಸರ್ಕಾರ ನಡೆಸುವ ನಮಗೆ ಹೆಚ್ಚಿನ ಮಾಹಿತಿ ಇರುತ್ತದೆ. ವಿಪಕ್ಷದವರು ಗೂಢಚಾರಿಕೆ, ಫೋನ್ ಟ್ಯಾಪಿಂಗ್ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಅಂಥಹ ಬೆಳವಣಿಗೆ ರಾಜ್ಯದಲ್ಲಿ ನಡೆಯುತ್ತಿಲ್ಲ ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ಫೋನ್ ಕದ್ದಾಲಿಕೆ ಮೊದಲಿನಿಂದಲೂ ಇತ್ತು. ಆದರೀಗ ಸಿಎಂ ಸ್ಥಾನಕ್ಕೇರಬೇಕೆಂದು ಸ್ವಪಕ್ಷದ ಶಾಸಕರ ಫೋನ್‌ಗಳನ್ನು ಟ್ಯಾಪ್ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಬಣದ ಶಾಸಕ ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಆಪಾದಿಸಿದ್ದಾರೆ. ಇದರ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿರುವ ಹೊತ್ತಿನಲ್ಲಿ ಮಂಗಳವಾರ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಸುದ್ದಿಗಾರರ ಕೆಲವು ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿದರು.

ಇಂಟಲಿಜೆನ್ಸ್‌ನಿಂದ ನಿತ್ಯ ಸಿಎಂಗೆ ಮಾಹಿತಿ
ಸರ್ಕಾರ ನಡೆಸುವ ನಮಗೆ ಹೆಚ್ಚಿನ ಮಾಹಿತಿ ಇರುತ್ತದೆ. ನಾವು ಗಮನಿಸಿದಂತೆ ಗೂಢಾಚಾರಿಕೆ, ಫೋನ್ ಟ್ಯಾಪಿಂಗ್ ನಡೆಯುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ಅಂತಹ ವಿಚಾರ ಯಾವುದೂ ಗಮನದಲ್ಲಿಲ್ಲ. ಪೊಲಿಟಿಕಲ್ ಇಂಟಲಿಜೆನ್ಸ್ ಪ್ರತ್ಯೇಕ ವಿಭಾಗವೇ ಇದೆ. ಅದರ ಮೂಲಕ ಸಿಎಂಗೆ ಮಾಹಿತಿ ನಿತ್ಯವು ಹೋಗುತ್ತಿರುತ್ತದೆ. ಫೋನ್ ಟ್ಯಾಪಿಂಗ್ ಮಾಡಿ ಯಾರು ಯಾರು ಎಲ್ಲೆಲ್ಲಿ ಹೋದ್ರು, ಏನು ಮಾಡಿದ್ರು ಎನ್ನುವುದೆಲ್ಲ ನಡೆಯುತ್ತಿಲ್ಲ.
ಪೊಲಿಟಿಕಲ್ ಇಂಟಲಿಜೆನ್ಸ್ ಮೂಲಕ ಹಿಂದಿನಿಂದಲೂ ಎಲ್ಲ ಸಿಎಂಗಳಿಗೂ ಮಾಹಿತಿ ಹೋಗುತ್ತದೆ. ನಿರ್ದಿಷ್ಟವಾಗಿ ಯಾವ ಮಾಹಿತಿ ಬೇಕು ಎನ್ನುವುದು ಮುಖ್ಯಮಂತ್ರಿಳ ವಿವೇಚನೆಗೆ ಬಿಟ್ಟಿದ್ದು ಎಂದರು.
ಕೊಲ್ಲಿ ದೇಶಗಳಲ್ಲಿ ಕನ್ನಡಿಗರು ಸಿಲುಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಮುಖ್ಯ ಕಾರ್ಯದರ್ಶಿಗಳು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಆ ರಾಷ್ಟ್ರಗಳಲ್ಲಿ ಸಿಲುಕಿದ ಕನ್ನಡಿಗರನ್ನು ಕರೆತನ್ನಿ ಎಂದು ಒತ್ತಾಯಿಸಿದ್ದಾರೆ. ಸುಮಾರು ಜನ ಅಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಅವರೆ ಸದ್ಯ ಯಾವ ಸ್ಥಿತಿಯಲ್ಲಿದ್ದಾರೆ ಎಂಬ ಮಾಹಿತಿ ಇಲ್ಲ. ನಾನು ಭೋಜೇಗೌಡ ಅವರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದೇನೆ.
ದುಬೈನಲ್ಲಿ ಸಿಲುಕಿದ ಎಂಎಲ್‌ಸಿ ಕುಟುಂಬ
ದುಬೈನಲ್ಲಿರುವ ಕೆಲವರು ಸಹಾಯ ಮಾಡುತ್ತಿದ್ದಾರೆ. ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಅವರ ಕುಟುಂಬ ಅಲ್ಲಿ ಸಿಕ್ಕಿಕೊಂಡಿದೆ. ಬಂಕರ್ ನಲ್ಲಿಟ್ಟಿದ್ರು ಎಂದು ಮಾಹಿತಿ ನೀಡಿದ್ದಾರೆ. ಅನೇಕ ಜನರು ಹಾಗೂ ನಮ್ಮ ಕೆಲವು ಶಾಸಕರು ಸಹ ಇದ್ದಾರೆ ಎಂದು ಅವರು ಮಾಹಿತಿ ಹಂಚಿಕೊಂಡರು.
ಖಮೇನಿ ಸಾವು ಹಿನ್ನೆಲೆಯಲ್ಲಿ ನಿಗಾ ಇಡಲು ಕೇಂದ್ರ ಗೃಹ ಇಲಾಖೆಯಿದ ರಾಜ್ಯಗಳಿಗೆ ಪತ್ರವು ಬಂದಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ನಮ್ಮ ಡಿಜಿ ಅವರು ನನಗೆ ನನ್ನ ಏನೂ ಹೇಳಿಲ್ಲ. ರಾಜ್ಯಗಳಿಗೆ ಪತ್ರ ಬಂದಿದೆ ಎಂದು ನಾನು ಮಾಧ್ಯಮಗಳಲ್ಲೇ ನೋಡಿದ್ದು. ಸಂಭಾವ್ಯ ಅಹಿತಕರ ಘಟನೆಗಳು ಆಗುವುದಿಲ್ಲ. ಸರ್ಕಾರ ಎಚ್ಚರಿಕೆ ವಹಿಸಲಿದೆ.
ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಪರ ಪ್ರತಿಭಟನೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರ,
ಅವರು ಅಲ್ಲಿ ಪ್ರತಿಭಟನೆ ಮಾಡಿದ್ದು ನಿಯಮಬಾಹಿರವಾಗಿದೆ. ಕೋರ್ಟ್ ಹೇಳಿರುವ ಪ್ರಕಾರ, ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಅವಕಾಶ ಇದೆ. ಇನ್ನೂ ಮೊನ್ನೆ ಪ್ರತಿಭಟನೆ ಮಾಡಿದವರ ವಿರುದ್ಧ ಕ್ರಮದ ಬಗ್ಗೆ ಚರ್ಚೆ ಮಾಡಲಿದ್ದೇವೆ. ಹ್ಯಾರೀಸ್ ಇರಲಿ ಯಾರೇ ಇರಲಿ ನಿಯಮಾನುಸಾರ ಪ್ರತಿಭಟನೆ ಮಾಡಬೇಕು. ತಪ್ಪಾಗಿದ್ದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.












Click it and Unblock the Notifications