War Update: ಯುದ್ಧದ ಇಂದಿನ 10 ಪ್ರಮುಖಾಂಶಗಳು: ಅಲಿ ಖಮೇನಿ ಸಾವಿನ ಸೇಡಿಗಾಗಿ ಇರಾನ್ ಭೀಕರ ಪ್ರತಿದಾಳಿ
Iran War Highlights Today: ಇರಾನ್ ಮೇಲಿನ ಇಸ್ರೇಲ್ ಮತ್ತು ಅಮೆರಿಕ ದೇಶಗಳು ಜಂಟಿ ವೈಮಾನಿಕ ದಾಳಿಯು ಮುಂದುವರಿದಿದೆ. ಇಂದೂ ಸಹ ಇರಾನ್ ಪ್ರತಿದಾಳಿ ಮುಂದುವರಿಸಿದೆ. ಇರಾನ್‌ನ ಸರ್ವೋಚ್ಚ ನಾಯಕರನ್ನು ಹತ್ಯೆಗೈದಿರುವುದಾಗಿ ಭಾನುವಾರ ಬೆಳಗ್ಗೆ ಯುಎಸ್ ಡೊನಾಲ್ಡ್ ಟ್ರಂಪ್ ಬಹಿರಂಗಪಡಿಸಿದರು. ಅಲ್ಲದೇ ಇರಾನ್ ರಕ್ಷಣಾ ಸಚಿವ, ಕಮಾಂಡರ್ ಸಹ ದಾಳಿಯಲ್ಲಿ ಶನಿವಾರವೇ ಸಾವನ್ನಪ್ಪಿದ್ದಾರೆ. ಇದಕ್ಕೆಲ್ಲ ಪ್ರತಿಯಾಗಿ ಭಾನುವಾರ ಸಂಜೆ ಯುಎಸ್ಎಸ್ ಅಬ್ರಹಾಂ ಲಿಂಕನ್ ಮೇಲೆ ಇರಾನ್ ನೇರ ದಾಳಿ ನಡೆಸಿದೆ. 4 ಕ್ಷಿಪಣಿಗಳನ್ನು ಹಾರಿಸುವ ಮೂಲಕ ಇರಾನ್ ದಾಳಿ ಬಗ್ಗೆ IRGC ಮಾಹಿತಿ ನೀಡಿದೆ.
ಇಸ್ರೇಲ್ ದಾಳಿ ಬೆನ್ನಲ್ಲೆ ಅದರ ಬೆನ್ನಿಗೆ ನಿಂತ ಯುಎಸ್ ಸಹ ಇರಾನ್ ಮೇಲೆ ದಾಳಿ ಮಾಡಿದೆ. ಜಾಗತಿಕವಾಗಿ ಮೂರು ದೇಶಗಳು ಮಾತ್ರವಲ್ಲದೇ ಇತರ ದೇಶಗಳು ಕಷ್ಟ ಅನುಭವಿಸುವಂತಾಗಿದೆ. ಭಾನುವಾರವು ನಾಗರಿಕ ವಿಮಾನಗಳ ಹಾರಾಟ ನಿಷೇಧ ಮುಂದುವರಿದ ಹಿನ್ನೆಲೆ ಭಾರತ ಸೇರಿದಂತೆ ಬೇರೆ ಬೇರೆ ದೇಶಗಳ ಪ್ರಯಾಣಿಕರು ದುಬೈ ಹಾಗೂ ಮಧ್ಯಪ್ರಾಚ್ಯದ ಏರ್‌ಪೋರ್ಟ್‌ಗಳಲ್ಲಿ ಸಿಲುಕಿಕೊಂಡಿದ್ದಾರೆ. ಇಂದಿನ ಒಟ್ಟು ಬೆಳವಣಿಗೆಗಳ ಕುರಿತು ಒಟ್ಟು 10 ಪ್ರಮುಖಾಂಶಗಳು ಇಲ್ಲಿವೆ.

ಇರಾನ್ ಯುದ್ಧದ ಇಂದಿನ ಪ್ರಮುಖಾಂಶಗಳು ಹೀಗಿವೆ
1. ಇರಾನ್ ಮೇಲಿನ ಇಸ್ರೇಲ್ ಮತ್ತು ಯುಎಸ್ ಜಂಟಿ ವೈಮಾನಿಕ ದಾಳಿಯಿಂದಾಗಿ ಸರ್ವೋಚ್ಚ ನಾಯಕ ಆಯತೂಲ್ಲಾ ಅಲಿ ಖಮೇನಿ ಅನ್ನು ಹತ್ಯೆ ಮಾಡಿದ್ದಾಗಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಬೆಳಗ್ಗೆ ಪ್ರಕಟಿಸಿದರು.
2. ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿಯಿಂದಾಗಿ ಇರಾನ್‌ನ ಅತ್ಯಂತ ಪ್ರಬಲ ಮತ್ತು ಪ್ರಮುಖ ತೈಲ ಮಾರ್ಗವಾದ 'ಹರ್ಮೂಜ್ ಜಲಸಂಧಿ'ಯನ್ನು ಅಧಿಕೃವಾಗಿ ನಿಷೇಧಿಸಲಾಗಿದೆ. ಇದು ಜಾಗತಿಕ ತೈಲ ಮಾರುಕಟ್ಟೆ ಮೇಲೆ ಪರಿಣಾಮ ಉಂಟು ಮಾಡುವ ಭೀತಿ ಎದುರಾಗಿದೆ.
3. ಇರಾನ್ ಮೇಲಿನ ದಾಳಿಯಲ್ಲಿ ನಾಯಕ ಖಮೇನಿ ಮಾತ್ರವಲ್ಲದೇ ಅವರ ಕುಟುಂಬಸ್ಥರಾದ ಪುತ್ರಿ, ಮೊಮ್ಮಗು, ಅಳಿಯ ಹಾಗೂ ಸೊಸೆ ಸಹ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ನಾಯಕನ ಸಾವಿಗೆ ಶೋಕಾಚರಣೆ ಸಹ ವ್ಯಕ್ತವಾಯಿತು.
4. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆ ಸುದ್ದಿ ತಿಳಿದು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಅಲೀಪುರ ಸ್ವಯಂ ಪ್ರೇರಿತ ಬಂದ್ ಆಯಿತು. ಶೀಯಾ ಮುಸ್ಲಿಮರು ಅಂಗಡಿ ಮುಂಗಟ್ಟು ಬಂದ್ ಮಾಡಿದರು. ಖಮೇನಿ ಭಾವಚಿತ್ರ ಹಿಡಿದು ಕಂಬನಿ ಮಿಡಿದ ದೃಶ್ಯ ಕಂಡು ಬಂತು. ವರ್ಷಗಳ ಹಿಂದೆ ಖಮೇನಿ ಅಲಿಪುರಕ್ಕೆ ಭೇಟಿ ನೀಡಿದ್ದರು.
5. ಇರಾನ್ ಮತ್ತು ಇಸ್ರೇಲ್-ಯುಎಸ್ ಮಧ್ಯದಲ್ಲಿ ನಡೆದ ಯುದ್ಧ ಸದ್ಯಕ್ಕೆ ಅಂತ್ಯಗೊಳ್ಳುವ ಹಾಗೆ ಕಾಣುತ್ತಿಲ್ಲ. ಅಣು ಉತ್ಪಾದನೆ ವಿಚಾರವಾಗಿ ಆರಂಭವಾದ ಯುದ್ಧವು ನಿಲ್ಲದೇ ಹೋದರೆ, ಒಂದು ವೇಳೆ ಇರಾನ್ ಪರಮಾಣು ಬಳಕೆಗೆ ಮುಂದಾದರೆ ಇನ್ನಷ್ಟು ಸಾವು ನೋವು, ಸಂಘರ್ಷ ಉಂಟಾಗಲಿದೆ. ಈ ಬಗ್ಗೆ ಜಾಗತಿಕವಾಗಿ ಇತರ ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿವೆ.
6. ಯುದ್ಧದಿಂದಾಗಿ ಇಸ್ರೇಲ್, ಯುಎಇ, ಇರಾನ್, ದುಬೈ ಸೇರಿದಂತೆ ವಿವಿಧ ದೇಶಗಳಲ್ಲಿ ಕನ್ನಡಿಗರು ಸೇರಿದಂತೆ ಭಾರತದ ಅನೇಕರು ಸಿಲುಕಿಕೊಂಡಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆ ತರಲು ಕರ್ನಾಟಕ ಸರ್ಕಾರ ಸೇರಿದಂತೆ ಭಾರತ ಸರ್ಕಾರ ಪ್ರಯತ್ನ ನಡೆಸಿದೆ.
7. ಬಳ್ಳಾರಿ 32 ಮಂದಿ ಸೇರಿ ಅನೇಕ ಕನ್ನಡಿಗರು ದುಬೈನಲ್ಲಿ ಸಿಲುಕಿದ್ದಾರೆ. ಅವರು ತಾಯ್ನಾಡಿಗೆ ಬರಲು ನಾಗರಿಕ ವಿಮಾನ ಸಹ ಇಲ್ಲದಾಗಿದೆ. ಹೀಗಾಗಿ ವಿದೇಶಾಂಗ ಸಚಿವಾಲಯದೊಂದಿಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ನಿರಂತರ ಸಂಪರ್ಕದಲ್ಲಿರುವುದಾಗಿ, ಶೀಘ್ರವೇ ಸಹಾಯವಾಣಿ ಆರಂಭಿಸುವುದಾಗಿ ಅವರು ತಿಳಿಸಿದ್ದಾರೆ. ಕುಟುಂಬಸ್ಥರಿಗೆ ಧೈರ್ಯ ಹೇಳಿದ್ದಾರೆ.
8. ಯುದ್ಧ ಭೀತಿಯಿಂದಾಗಿ ದುಬೈ ಏರ್‌ಪೋರ್ಟ್‌ನಲ್ಲಿ ದೇಶದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು, ಕನ್ನಡದ ಬಿಗ್ ಬಾಸ್ ಖ್ಯಾತಿ ಡ್ರೋನ್ ಪ್ರತಾಪ್, ಬಳ್ಳಾರಿ ಶಾಸಕ ಭರತ್ ರೆಡ್ಡಿ ಅವರು ಸಿಲುಕಿಕೊಂಡಿದ್ದಾರೆ. ಒಟ್ಟು ಸುಮಾರು 150 ಕನ್ನಡಿಗರು ದುಬೈನಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ವರದಿ ಆಗಿದೆ.
9. ಇರಾನ್ ಪ್ರತಿದಾಳಿಗೆ ಇಸ್ರೇಲ್‌ನಲ್ಲಿ ಭಾನುವಾರ 10 ಮಂದಿ ಸಾವನ್ನಪ್ಪಿದ್ದಾರೆ. 23 ಮಂದಿ ಗಾಯಗೊಂಡಿದ್ದಾರೆ. ಇರಾನ್ ಕ್ಷಿಪಣಿಗಳು ಮಧ್ಯ ಇಸ್ರೇಲ್‌ನ ಹಲವು ಪ್ರದೇಶಗಳಲ್ಲಿ ಭಾರೀ ಹಾನಿ ಮಾಡಿವೆ. ಜನರನ್ನು ಬಲಿ ಪಡೆಯುವ ಮೂಲಕ ಖಮೇನಿ ಸಾವಿನ ಸೇಡು ತೀರಿಸಿಕೊಳ್ಳಲು ಮುಂದಾಗಿದೆ.
10. ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆ ಬೆನ್ನಲ್ಲೇ ಇರಾನ್ ಮಧ್ಯಂತರ ಸುಪ್ರೀಂ ಲೀಡರ್ ಆಗಿ ಅಲಿರೆಜಾ ಅರಾಫಿ ಅವರನ್ನು ಆಯ್ಕೆ ಮಾಡಲಾಗಿದೆ. ಅವರೇ ಇರಾನ್ ಆಡಳಿತ ನಿರ್ವವಣೆ, ಪ್ರಮುಖ ನಿರ್ಧಾರ ಕೈಗೊಳ್ಳಲಿದ್ದಾರೆ.












Click it and Unblock the Notifications