• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ ಒಂದೇ ದಿನಕ್ಕೆ 31,454 ಕೋವಿಡ್‌ ಪ್ರಕರಣ ಪತ್ತೆ

|
Google Oneindia Kannada News

ನವದೆಹಲಿ, ನವೆಂಬರ್ 24: ಕೋವಿಡ್-19 ಸಾಕ್ರಾಮಿಕ ಸೋಂಕು ವಿಶ್ವದಲ್ಲಿ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿದೆ. ಚೀನಾ ದೇಶದಿಂದಲೇ ಆರಂಭವಾಗಿದ್ದ ಕೋವಿಡ್‌ ಪ್ರಕರಣಗಳು ಚೀನಾದಲ್ಲಿ ಮತ್ತೊಮ್ಮೆ ಹೆಚ್ಚಿವೆ. ಪ್ರತಿದಿನ ಕಾಣಿಸಿಕೊಳ್ಳುತ್ತಿರುವ ಹೊಸ ಕೋವಿಡ್‌ ಪ್ರಕರಣಗಳು ಚೀನಾದಲ್ಲಿ ಹಿಂದಿನ ದಾಖಲೆಗಳನ್ನು ಮುರಿದಿವೆ.

ಚೀನಾದ ರಾಷ್ಟ್ರೀಯ ಆರೋಗ್ಯ ಬ್ಯೂರೋ ಪ್ರಕಾರ, ನಿನ್ನೆ ಬುಧವಾರ ಒಂದೇ ದಿನಕ್ಕೆ 31,454 ಹೊಸ ಪ್ರಕರಣಗಳು ವರದಿಯಾಗಿವೆ. ಕೋವಿಡ್‌ ಸೋಂಕನ್ನು ನಿಯಂತ್ರಿಸಲು ಲಾಕ್‌ಡೌನ್, ಸಾಮೂಹಿಕ ಪರೀಕ್ಷೆ ಮತ್ತು ಪ್ರಯಾಣಕ್ಕೆ ನಿರ್ಬಂಧಗಳನ್ನು ವಿಧಿಸಲಾಗಿದೆ.

ಜಿ-20 ಶೃಂಗಸಭೆ: ಚೀನಾ ಅಧ್ಯಕ್ಷ ಜಿನ್‌ಪಿಂಗ್- ಕೆನಡಾ ಪಿಎಂ ಟ್ರುಡೊ ನಡುವೆ ಮಾತಿನ ಚಕಮಕಿ ಜಿ-20 ಶೃಂಗಸಭೆ: ಚೀನಾ ಅಧ್ಯಕ್ಷ ಜಿನ್‌ಪಿಂಗ್- ಕೆನಡಾ ಪಿಎಂ ಟ್ರುಡೊ ನಡುವೆ ಮಾತಿನ ಚಕಮಕಿ

ಚೀನಾ ಇಡೀ ದೇಶದಲ್ಲಿ ಝೀರೋ ಕೋವಿಡ್ ನೀತಿಯನ್ನು ಜಾರಿಗೆ ತಂದಿದೆ. ಈ ನೀತಿಯ ಅಡಿಯಲ್ಲಿ ಕೋವಿಡ್ ಪ್ರಕರಣಗಳು ಕಂಡು ಬಂದರೆ ಇಡೀ ನಗರವನ್ನು ಮುಚ್ಚಲಾಗುತ್ತದೆ ಮತ್ತು ಕೋವಿಡ್‌ ಸೋಂಕಿತ ಜನರನ್ನು ಕ್ವಾರಂಟೈನ್ ಮಾಡಲಾಗುತ್ತದೆ. ಚೀನಾ ಆಡಳಿತಗಾರರ ಈ ನೀತಿಯ ವಿರುದ್ಧ ಇಡೀ ದೇಶದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಹಲವೆಡೆ ಪ್ರತಿಭಟನೆಯ ಸುದ್ದಿಯೂ ಹೊರಬೀಳುತ್ತಿದೆ. ಮುಂದಿನ ದಿನಗಳಲ್ಲಿ ಚೀನಾ ತನ್ನ ಕೋವಿಡ್ ನಿರ್ಬಂಧಗಳನ್ನು ಸಡಿಲಿಸದಿರಬಹುದು ಎಂದು ರೋಗ ತಜ್ಞರು ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ.

ಬೀಜಿಂಗ್‌ನಲ್ಲಿ ನಿರ್ಬಂಧ

ಕೋವಿಡ್‌ ಸೋಂಕು ತಡೆಗಟ್ಟಲು ಅಧಿಕಾರಿಗಳು ನವೆಂಬರ್ 10ರಿಂದ ಬೀಜಿಂಗ್‌ನ ಕೆಲವು ಭಾಗಗಳಲ್ಲಿ ಕೋವಿಡ್‌ ನಿರ್ಬಂಧಗಳನ್ನು ಬಿಗಿಗೊಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಹಲವು ಪ್ರವಾಸಿ ಸ್ಥಳಗಳನ್ನು ಸರ್ಕಾರ ಮುಚ್ಚಿದೆ. ಅಧಿಕಾರಿಗಳು ಚಾಯಾಂಗ್ ಜಿಲ್ಲೆಯ ಹಲವಾರು ಪ್ರದೇಶಗಳನ್ನು ಹೆಚ್ಚಿನ ಅಥವಾ ಮಧ್ಯಮ-ಅಪಾಯದ ಪ್ರದೇಶಗಳಾಗಿ ಗೊತ್ತುಪಡಿಸಿದ್ದಾರೆ. ರಾಜಧಾನಿಯ ಇತರ ಭಾಗಗಳಲ್ಲಿ ಸೋಂಕು ಪತ್ತೆಯಾದ ವರದಿಯಾಗಿವೆ. ಹೆಚ್ಚಿನ ಅಪಾಯದ ಪ್ರದೇಶಗಳ ನಿವಾಸಿಗಳನ್ನು ತಮ್ಮ ಮನೆಗಳಲ್ಲಿ ಉಳಿಯಲು ಕೇಳಲಾಗಿದೆ ಮತ್ತು ಅಗತ್ಯ ಸೇವೆಗಳನ್ನು ಮಾತ್ರ ಅನುಮತಿಸಲಾಗಿದೆ.

English summary
China’s daily Covid infections climbed to a record high, exceeding the previous peak in April, as it battles an outbreak that has grown since the country adopted a more targeted approach to containing the virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X