50% Tariffs: ಅಮೇರಿಕಾದ ನಂತರ ಮತ್ತೊಂದು ದೇಶದಿಂದ ಭಾರತದ ಮೇಲೆ ಶೇ 50% ಸುಂಕ!
ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಒಂದೊಂದೇ ಸುಂಕವನ್ನು ಭಾರತದ ಮೇಲೆ ವಿಧಿಸುತ್ತಿರುವಾಗಲೇ ಭಾರತಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಭಾರತದಿಂದ ಆಮದು ಆಗುವ ವಸ್ತುಗಳ ಮೇಲೆ ಅಮೇರಿಕಾ ಶೇ.50 ರಷ್ಟು ಸುಂಕ ವಿಧಿಸಿದ ನಂತರ ಇದೀಗ ಮೆಕ್ಸಿಕೊದ ಸೆನೆಟ್ ಭಾರತದ ಮೇಲೆ ದುಬಾರಿ ಶೇ 50 ರಷ್ಟು ತೆರಿಗೆ ವಿಧಿಸುವುದಕ್ಕೆ ಮುಂದಾಗಿದೆ.
ಜಾಗತಿಕ ವ್ಯಾಪಾರ ಯುದ್ಧದ ನಡುವೆ ಭಾರತದ ಮೇಲೆ ಮೆಕ್ಸಿಕೋ ಭಾರೀ ಸುಂಕ ವಿಧಿಸುವುದಕ್ಕೆ ಮುಂದಾಗಿದೆ. ಚೀನಾ ಮತ್ತು ಇತರ ಹಲವಾರು ಏಷ್ಯಾದ ರಾಷ್ಟ್ರಗಳ ಆಮದುಗಳ ಮೇಲೆ ಶೇ.50 ರಷ್ಟು ಸುಂಕವನ್ನು ಅನುಮೋದಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಇದೆಲ್ಲವೂ ಟ್ರಂಪ್ ಅವರನ್ನು ಮೆಚ್ಚಿಸುವುದಕ್ಕೆ ಮಾಡಿರುವ ಸರ್ಕಸ್ ಎಂದು ವಿಶ್ಲೇಷಿಸಲಾಗಿದೆ. ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದ ಮೊದಲು ಮೆಕ್ಸಿಕೋದ ಮೇಲೆಯೂ ಗರಂ ಆಗಿದ್ದರು. ಇದೀಗ ಮೆಕ್ಸಿಕೋ ಕಾರ್ಯ ಸಾಧನೆಗೆ ಮತ್ತು ಟ್ರಂಪ್ ಮೆಚ್ಚಿಸಲು ಭಾರತ ಸೇರಿದಂತೆ ಏಷ್ಯಾ ರಾಷ್ಟ್ರಗಳ ಮೇಲೆ ದುಬಾರಿ ಸುಂಕ ವಿಧಿಸುತ್ತಿದೆ ಎಂದು ಹೇಳಲಾಗಿದೆ.
ಜನವರಿ 1, 2026 ರಿಂದ ಜಾರಿಗೆ ಬರಲಿರುವ ಸುಂಕ ಹೆಚ್ಚಳವು ಮೆಕ್ಸಿಕೊದೊಂದಿಗೆ ವ್ಯಾಪಾರ ಒಪ್ಪಂದವನ್ನು ಹೊಂದಿರದ ದೇಶಗಳ ಆಟೋಗಳು, ಆಟೋ ಭಾಗಗಳು, ಜವಳಿ, ಪ್ಲಾಸ್ಟಿಕ್ ಮತ್ತು ಉಕ್ಕಿನಂತಹ ಸರಕುಗಳ ಮೇಲೆ ಶೇ.50 ರಷ್ಟು ಸುಂಕವನ್ನು ವಿಧಿಸುತ್ತದೆ.
ಭಾರತ, ದಕ್ಷಿಣ ಕೊರಿಯಾ, ಚೀನಾ, ಥೈಲ್ಯಾಂಡ್ ಮತ್ತು ಇಂಡೋನೇಷ್ಯಾದಂತಹ ದೇಶಗಳ ಮೇಲೆ ಇದು ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ. ಮುಂದಿನ ವರ್ಷ ಹೆಚ್ಚುವರಿ ಆದಾಯದಲ್ಲಿ $3.76 ಬಿಲಿಯನ್ (ಸುಮಾರು ರೂ.33,910 ಕೋಟಿ) ಗಳಿಸುವ ಉದ್ದೇಶವನ್ನು ಈ ಕ್ರಮ ಹೊಂದಿದೆ ಎಂದು ಹೇಳಲಾಗಿದೆ.
ಮೆಕ್ಸಿಕನ್ ಅಧ್ಯಕ್ಷೆ ಕ್ಲೌಡಿಯಾ ಶೀನ್ಬಾಮ್ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಉದ್ದೇಶಿಸಿರುವುದಾಗಿ ಈಚೆಗೆ ಹೇಳಿದ್ದರು. ಇದರ ನಡುವೆ ಭಾರೀ ಸುಂಕದ ನಿರ್ಧಾರ ಬಂದಿದೆ. ಆದರೆ ಅಮೆರಿಕ-ಮೆಕ್ಸಿಕೋ-ಕೆನಡಾ ವ್ಯಾಪಾರ ಒಪ್ಪಂದವನ್ನು (ಯುಎಸ್ಎಂಸಿಎ) ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪರಿಶೀಲಿಸುವ ಮೊದಲು ಟ್ರಂಪ್ ಅವರನ್ನು ಸಮಾಧಾನಪಡಿಸುವ ಪ್ರಯತ್ನವಾಗಿ ಈ ಬೆಳವಣಿಗೆ ನಡೆದಿದೆ ಎಂದು ಹೇಳಲಾಗಿದೆ. ಅಮೇರಿಕಾ - ಮೆಕ್ಸಿಕೋ ಅತಿದೊಡ್ಡ ವ್ಯಾಪಾರ ಪಾಲುದಾರರಾಗಿದ್ದಾರೆ.
ಭಾರತದ ಮೇಲೆ ಏನು ಪರಿಣಾಮ ಬೀರಲಿದೆ ?
ಇನ್ನು ಅಮೇರಿಕಾದ ನಂತರ ಇದೀಗ ಮೆಕ್ಸಿಕೋ ಸಹ ಭಾರತದ ಮೇಲೆ ದುಬಾರಿ ಸುಂಕವನ್ನು ವಿಧಿಸುತ್ತಿರುವುದರಿಂದ ಭಾರತದ ವ್ಯಾಪಾರ - ವಹಿವಾಟಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ನಿರೀಕ್ಷೆ ಮಾಡಲಾಗಿದೆ. ಭಾರತಕ್ಕೆ ಶೇ.50 ರಷ್ಟು ಸುಂಕ ವಿಧಿಸುವ ಮೆಕ್ಸಿಕೋದ ಕ್ರಮವು ದ್ವಿಪಕ್ಷೀಯ ವ್ಯಾಪಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಮೆಕ್ಸಿಕನ್ ರಫ್ತಿಗೆ ಭಾರತ ಹೆಚ್ಚು ಆಪ್ತವಾಗಿದ್ದು ಪ್ರಮುಖ ಸ್ಥಾನದಲ್ಲಿ ಇದೆ. ಭಾರತವು ಮೆಕ್ಸಿಕೋದೊಂದಿಗೆ ಗಮನಾರ್ಹ ವ್ಯಾಪಾರ ಹೆಚ್ಚುವರಿಯನ್ನು ಹೊಂದಿದೆ. ಭಾರತದಿಂದ ಮೆಕ್ಸಿಕೋದ ಪ್ರಮುಖ ಆಮದುಗಳಲ್ಲಿ ಮೋಟಾರ್ ಕಾರುಗಳು, ಆಟೋ ಬಿಡಿಭಾಗಗಳು ಸೇರಿದಂತೆ ಹಲವು ಪ್ರಮುಖ ವಸ್ತುಗಳು ಸೇರಿವೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL












Click it and Unblock the Notifications