ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL
ಬೆಂಗಳೂರು: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಮೂರನೇ ಹಂತದ (Namma Metro 3rd Phase Project) ಯೋಜನೆ ವಿಳಂಬವಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದೀಗ ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಿರ್ಮಾಣವಾಗಲಿರುವ ಈ ಮೆಟ್ರೋ ಕಾರಿಡಾರ್ ಎಲಿವೆಟೆಡ್ ಕಾರಿಡಾರ್ ಯೋಜನೆಗೆ ಜಪಾನ್ ಸಂಸ್ಥೆ ಬರೋಬ್ಬರಿ 6,775 ರೂಪಾಯಿ ಸಾಲ ಒದಗಿಸಲು ಒಪ್ಪಿದೆ. ಈ ಸಂಬಂಧ ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಜೊತೆಗೆ ಮಹತ್ವದ ಒಪ್ಪಂದ ನಡೆದಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳು ತಿಳಿಸಿರುವ ಪ್ರಕಾರ, ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ-3ಕ್ಕೆ ಸಂಬಂಧಿಸಿದ ಸಾಲದ ಒಪ್ಪಂದಕ್ಕೆ ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (JICA) ಪರವಾಗಿ, ಭಾರತದ JICA ಕಚೇರಿಯ ಮುಖ್ಯ ಪ್ರತಿನಿಧಿ ಟಿಕೆಉಚಿ ತಕುರು ಮತ್ತು ಭಾರತ ಸರ್ಕಾರದ ಆರ್ಥಿಕ ವ್ಯವಹಾರಗಳ ಇಲಾಖೆಯ ಜಂಟಿ ಕಾರ್ಯದರ್ಶಿ ಅಲೋಕ್ ತಿವಾರಿ 2026 ಮಾರ್ಚ್ 24 ರಂದು ನವದೆಹಲಿಯಲ್ಲಿ ಸಹಿ ಹಾಕಿದರು. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಡಾ. ಜೆ. ರವಿಶಂಕರ್ ಹಾಗೂ ನಿರ್ದೇಶಕರು (ಹಣಕಾಸು) ಎಸ್. ಶಿವಮಾಥನ್ ಒಪ್ಪಂದಕ್ಕೆ ಸಾಕ್ಷಿಯಾದರು.

ಎರಡು ಹಂತಗಳಲ್ಲಿ ಹಣ ನೀಡಲಿರುವ ಜೈಕಾ
ಒಟ್ಟು 15,611 ಕೋಟಿ ರೂಪಾಯಿ ಅಂದಾಜು ವೆಚ್ಚದ ಈ ಬೆಂಗಳೂರು ಮೆಟ್ರೋ ಮೂರನೇ ಹಂತದ ಯೋಜನೆಗೆ 2024ರಲ್ಲಿ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಅದಾಗಿ ವರ್ಷಗಳ ಬಳಿಕ ಯೋಜನೆ ಆರಂಭಿಸಲು ಮುಂದಾಗಿರುವ ಬಿಎಂಆರ್‌ಸಿಎಲ್‌ಗೆ ಜೈಕಾ ಸಂಸ್ಥೆ ಎರಡು ಹಂತಗಳಲ್ಲಿ ಸಾಲ ನೀಡಲಿದೆ. ಮೊದಲ ಹಂತದಲ್ಲಿ 6,775 ಕೋಟಿ ರೂಪಾಯಿ ಪೈಕಿ 6,100 ಕೋಟಿ ರೂಪಾಯಿ (102,480 ಮಿಲಿಯನ್ ಯೆನ್) ಒದಗಿಸಲಿದೆ. ನಂತರದ ಹಂತದಲ್ಲಿ ಉಳಿದ ಮೊತ್ತವನ್ನು ನೀಡಲಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಈ ಒಪ್ಪಂದದಿಂದಾಗಿ ಇದರಿಂದ ಹಂತ-3 ಯೋಜನೆಗೆ ಅಗತ್ಯವಾದ ಆರ್ಥಿಕ ನೆರವು ದೊರೆತಿದೆ. ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-3 ಒಟ್ಟು 44.65 ಕಿಮೀ ಉದ್ದವಿದೆ. ಇದರಲ್ಲಿ ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ (ಹೊರ ವರ್ತುಲ ರಸ್ತೆ ಪಶ್ಚಿಮ ಭಾಗದ ಮೂಲಕ) 32.15 ಕಿಲೋ ಮೀಟರ್ ಉದ್ದದ ಎಲೆವೆಡೆಟ್ ಕಾರಿಡಾರ್. ಇನ್ನೊಂದು ಹೊಸಹಳ್ಳಿ ಯಿಂದ ಕಡಬಗೆರೆವರೆಗೆ (ಮಾಗಡಿ ರಸ್ತೆಯ ಮೂಲಕ) 12.5 ಕೀಲೋ ಮೀಟರ್ ಉದ್ದದ ಕಾರಿಡಾರ್ ಆಗಿದೆ.
ಡಬಲ್ ಡೆಕ್ಕರ್ ಮೇಲ್ಸೇತುವೆ ಸಹಿತ ಮೆಟ್ರೋ ಲೈನ್
ಈ ಎರಡು ಎತ್ತರಿಸಿದ ಮೆಟ್ರೊ ಕಾರಿಡಾರ್ ನಿರ್ಮಾಣದೊಂದಿಗೆ ಡಬಲ್ ಡೆಕ್ಕರ್ ಮೇಲ್ಸೆತುವೆ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿತು. ಹೀಗಾಗಿ ಡಿಪಿಆರ್, ಯೋಜನೆಯಲ್ಲಿನ ವಿನ್ಯಾಸ ಅಗತ್ಯತೆ ಆಧಾರದಲ್ಲಿ ಬದಲಾಯಿಸಬೇಕಾಯಿತು. ಅಗತ್ಯ ಭೂಮಿ ಸ್ವಾಧೀನ ಸೇರಿ ಹೆಚ್ಚುವರಿ ಆರಂಭಿಕ ಚಟುವಟಿಕೆಗಳು ನಡೆದವು. ಇದು ಸಹ ಯೋಜನೆ ಆರಂಭಕ್ಕೆ ವಿಳಂಬ ಮಾಡಿತು. ನಗರದ ಸಂಚಾರ ದಟ್ಟಣೆ ನಿರ್ವಹಿಸುವ ನಿಟ್ಟಿನಲ್ಲಿ ಸರ್ಕಾರ ಎಲಿವೆಟೆಡ್ ಮೆಟ್ರೋ ಮಾರ್ಗದಲ್ಲಿ ಡಬಲ್ ಡೆಕ್ಕರ್ ನಿರ್ಮಿಸಲು ಮುಂದಾಗಿದೆ. ಇದರಿಂದ ಯೋಜನೆ ವೆಚ್ಚವು ಹೆಚ್ಚಾಗಿದೆ. ಸದರಿ ಒಪ್ಪಂದಿಂದ ಯೋಜನೆ ಆರಂಭಿಸಲು ಎಲ್ಲ ನೆರವು ಸಿಕ್ಕಂತಾಗಿದೆ.
ಜೈಕಾ ಜತೆ 30 ವರ್ಷದ ಒಪ್ಪಂದ
ಜಪಾನಿನ JICA ಸಂಸ್ಥೆಯು 5 ಸಿವಿಲ್ ಪ್ಯಾಕೇಜುಗಳು, ಪರ್ಮನೆಂಟ್ ವೇ, ರೋಲಿಂಗ್ ಸ್ಟಾಕ್, ಸಿಗ್ನಲಿಂಗ್ ಮತ್ತು ಟೆಲಿಕಮ್ಯುನಿಕೇಶನ್ (S&T), ಆಟೋಮ್ಯಾಟಿಕ್ ಫೇರ್ ಕಲೆಕ್ಷನ್ (AFC), ಟ್ರ್ಯಾಕ್ಷನ್ ಹಾಗೂ ಸಲಹಾ ಸೇವೆಗಳಿಗೆ ಹಣಕಾಸು ನೆರವು ನೀಡುತ್ತಿದೆ. ಈ ಸಾಲದ ಅವಧಿ 30 ವರ್ಷಗಳಾಗಿದ್ದು, ಹಂತ ಹಂತವಾಗಿ ಬಿಎಂಆರ್‌ಸಿಎಲ್ ತೀರಿಸಲಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
-
ದುಬೈಗೂ ಮೊದಲೇ ನಟಿ ರನ್ಯಾ ರಾವ್ಗೆ ಉಗಾಂಡಾ ಏಜೆಂಟ್ ಕೋಟ್ಯಂತರ ರೂಪಾಯಿ ವಂಚನೆ: ಚಾರ್ಜ್ಶೀಟ್ನಲ್ಲಿ ಸ್ಫೋಟಕ ಮಾಹಿತಿ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Money Saving Vastu Tips: ವಾಸ್ತು ಪ್ರಕಾರ ಹಣ ಉಳಿಯುತ್ತಿಲ್ಲವೇ? ಈ ಸರಳ ಉಪಾಯಗಳನ್ನು ಅನುಸರಿಸಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ













Click it and Unblock the Notifications