Ananya Birla: ಆರ್‌ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ

Ananya Birla: ಆರ್‌ಸಿಬಿ ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್ ಮತ್ತು ಮಿತ್ರ ಸಂಸ್ಥೆಗಳ ಒಕ್ಕೂಟ ಖರೀದಿಸಿದ ಬೆನ್ನಲ್ಲೇ, ಉದ್ಯಮಿ ಮತ್ತು ಗಾಯಕಿ ಅನನ್ಯಾ ಬಿರ್ಲಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಈಗ ವೈರಲ್ ಆಗಿದೆ. "ಈ ಸಲ ಕಪ್ ನಮ್ದು" ಎಂಬ ಘೋಷಣೆಯೊಂದಿಗೆ ಅವರು ಆರ್‌ಸಿಬಿ ಕುಟುಂಬಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ತಮ್ಮ ಪೋಸ್ಟ್‌ನಲ್ಲಿ ಆರ್‌ಸಿಬಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿರುವ ಅನನ್ಯಾ, "ಎಲ್ಲಾ ಆರ್‌ಸಿಬಿ ಅಭಿಮಾನಿಗಳ ಪ್ರೀತಿಗೆ ಧನ್ಯವಾದಗಳು. ಈ ಸಲ ಕಪ್ ನಮ್ದು" ಎಂದು ಬರೆದುಕೊಳ್ಳುವ ಮೂಲಕ ಕನ್ನಡಿಗರು ಹಾಗೂ ಅಭಿಮಾನಿಗಳ ಮನ ಗೆದ್ದಿದ್ದಾರೆ.

Ananya Birla Goes Viral With Ee Sala Cup Namdu Post After Royal Challengers Bengaluru Takeover

ಸಹೋದರನಿಗೆ ಬೆಂಬಲದ ಭರವಸೆ

ತಮ್ಮ ಸಹೋದರ ಆರ್ಯಮನ್ ವಿಕ್ರಮ್ ಬಿರ್ಲಾ ಅವರು ಫ್ರಾಂಚೈಸಿಯ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅವರು, "ಅಧ್ಯಕ್ಷರಾಗುತ್ತಿರುವ ಆರ್ಯಮನ್‌ಗೆ ಅಭಿನಂದನೆಗಳು. ನೀನು ಈ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿಭಾಯಿಸುತ್ತೀಯ ಎಂಬ ನಂಬಿಕೆಯಿದೆ. ನಾನು ಯಾವಾಗಲೂ ನಿನ್ನ ಜೊತೆಗಿರುತ್ತೇನೆ" ಎಂದು ಹಾರೈಸಿದ್ದಾರೆ. ಅಲ್ಲದೆ ತಮ್ಮ ಮತ್ತೊಬ್ಬ ಸಹೋದರಿ ಅದ್ವೈತೇಶ ಬಿರ್ಲಾ ಅವರ ಬಗ್ಗೆಯೂ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಈ ಬೃಹತ್ ಡೀಲ್‌ ಪ್ರಕ್ರಿಯೆಯಲ್ಲಿ ಸಾಥ್ ನೀಡಿದ ಬ್ಲ್ಯಾಕ್‌ಸ್ಟೋನ್, ಸತ್ಯನ್ ಮತ್ತು ಬೋಲ್ಟ್ ವೆಂಚರ್ಸ್ ಪಾಲುದಾರರಿಗೆ ಅನನ್ಯಾ ಧನ್ಯವಾದ ತಿಳಿಸಿದ್ದಾರೆ. ತಮ್ಮ ಈ ಯಶಸ್ಸಿನ ಹಿಂದೆ ನಿಂತಿರುವ ತಮ್ಮ ತಂಡ ಮತ್ತು ಆತ್ಮೀಯರನ್ನು 'ಆಯ್ದ ಕುಟುಂಬ' ಎಂದು ಕರೆದು ಗೌರವಿಸಿದ್ದಾರೆ.

ಅನನ್ಯಾ ಬಿರ್ಲಾ ಅವರು 'ಈ ಸಲ ಕಪ್ ನಮ್ದು" ಎಂದು ಬರೆದುಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಈ ಮೂಲಕ ಬಿರ್ಲಾ ಕುಟುಂಬದ ಯುವ ಪೀಳಿಗೆ ಈಗ ಕ್ರೀಡಾ ಜಗತ್ತಿನಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ಒಟ್ಟಿನಲ್ಲಿ ಹೂಡಿಕೆದಾರರ ಬಲಿಷ್ಠ ಬೆಂಬಲದೊಂದಿಗೆ ಆರ್‌ಸಿಬಿ ತಂಡವು ಆರ್ಥಿಕವಾಗಿ ಮತ್ತು ಆಟದ ದೃಷ್ಟಿಯಿಂದ ಮತ್ತಷ್ಟು ಪ್ರಬಲವಾಗುವ ಮುನ್ಸೂಚನೆ ಸಿಕ್ಕಾಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+