CBSE 12ನೇ ತರಗತಿಯ ಜೀವಶಾಸ್ತ್ರ ಪ್ರಶ್ನೆಪತ್ರಿಕೆ ವಿಶ್ಲೇಷಣೆ: ತಜ್ಞರು ಮತ್ತು ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ಮಾಹಿತಿ

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ದೇಶಾದ್ಯಂತ ನಡೆಸುವ 12ನೇ ತರಗತಿಯ ಪ್ರಮುಖ ಪರೀಕ್ಷೆಯಾದ ಜೀವಶಾಸ್ತ್ರ (Biology) ಪರೀಕ್ಷೆಯು ಇಂದು (ಮಾರ್ಚ್ 27, 2026) ಮಧ್ಯಾಹ್ನ 1:30 ಕ್ಕೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಬೆಳಿಗ್ಗೆ 10:30ಕ್ಕೆ ಶುರುವಾದ ಈ ಪರೀಕ್ಷೆ ಮುಗಿದ ಬೆನ್ನಲ್ಲೇ, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಯ ವಾಸ್ತವತೆಯನ್ನು ಬಿಚ್ಚಿಟ್ಟಿದ್ದಾರೆ.

ತಜ್ಞರ ಪ್ರಕಾರ ಪ್ರಶ್ನೆಪತ್ರಿಕೆ ಹೇಗಿತ್ತು?

ಈ ಬಾರಿಯ ಜೀವಶಾಸ್ತ್ರ ಪ್ರಶ್ನೆಪತ್ರಿಕೆಯು ಕಠಿಣತೆಯ ಮಟ್ಟ ಮಧ್ಯಮವಾಗಿತ್ತು(Moderate level). ಮತ್ತು ಸಂಪೂರ್ಣವಾಗಿ ಎನ್‌ಸಿಇಆರ್‌ಟಿ (NCERT) ಪಠ್ಯವನ್ನು ಆಧರಿಸಿತ್ತು. ಗುರುಗ್ರಾಮದ ಕೆಐಐಟಿ ವರ್ಲ್ಡ್ ಸ್ಕೂಲ್‌ನ ಪಿಜಿಟಿ ಜೀವಶಾಸ್ತ್ರ ಶಿಕ್ಷಕಿ ಸುಜಾತಾ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, "ಈ ಬಾರಿಯ ಪ್ರಶ್ನೆಪತ್ರಿಕೆಯು ಅತ್ಯಂತ ಸಮತೋಲಿತ ಹಾಗೂ ವಿದ್ಯಾರ್ಥಿಸ್ನೇಹಿಯಾಗಿತ್ತು. ಕೇವಲ ಬಾಯಿಪಾಠ ಮಾಡುವುದಕ್ಕಿಂತ, ವಿಷಯವನ್ನು ಅರ್ಥಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ಇದು ಹೆಚ್ಚು ಸುಲಭವಾಗಿತ್ತು. ಅಲ್ಲದೆ, ಹಿಂದಿನ ವರ್ಷದ ಹಲವು ಪ್ರಶ್ನೆಗಳು ಪುನರಾವರ್ತನೆಯಾಗಿದ್ದವು," ಎಂದು ವಿಶ್ಲೇಷಿಸಿದ್ದಾರೆ.

CBSE

ವಿಭಾಗವಾರು ವಿಶ್ಲೇಷಣೆ

ವಿಭಾಗ ಎ (Section A): 1 ಅಂಕದ ಬಹು ಆಯ್ಕೆಯ ಪ್ರಶ್ನೆಗಳಿದ್ದ (MCQs) ಈ ವಿಭಾಗವು ಅತ್ಯಂತ ನೇರ ಹಾಗೂ ಸುಲಭವಾಗಿ ಅಂಕ ಗಳಿಸುವಂತಿತ್ತು.

ವಿಭಾಗ ಬಿ ಮತ್ತು ಸಿ (Section B & C): ಈ ವಿಭಾಗಗಳು ಪಠ್ಯಪುಸ್ತಕದ ಮೂಲ ಪ್ರಕ್ರಿಯೆಗಳ ಮೇಲೆ ಆಧಾರಿತವಾಗಿದ್ದು, ಯಾವುದೇ ಗೊಂದಲಗಳಿಲ್ಲದೆ ಉತ್ತರಿಸುವಂತಿದ್ದವು.

ವಿಭಾಗ ಡಿ ಮತ್ತು ಇ (Section D & E): ಶಿಕ್ಷಣ ತಜ್ಞರ ಪ್ರಕಾರ, ಈ ವಿಭಾಗಗಳೇ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಪರೀಕ್ಷಿಸುವಂತಿದ್ದವು. ಕೇವಲ ವ್ಯಾಖ್ಯಾನಗಳನ್ನು ಬರೆಯುವ ಬದಲು, ಜೈವಿಕ ಪ್ರಕ್ರಿಯೆಗಳ ಬಗ್ಗೆ ಆಳವಾದ ಜ್ಞಾನವಿದ್ದರೆ ಮಾತ್ರ ಉತ್ತರಿಸಬಹುದಾದ ಅಪ್ಲಿಕೇಶನ್-ಆಧಾರಿತ ಪ್ರಶ್ನೆಗಳು ಇಲ್ಲಿ ಬಂದಿದ್ದವು.

ವಿದ್ಯಾರ್ಥಿಗಳ ನೇರ ಪ್ರತಿಕ್ರಿಯೆ

ಪರೀಕ್ಷಾ ಕೇಂದ್ರದಿಂದ ಹೊರಬಂದ ವಿದ್ಯಾರ್ಥಿಗಳ ಮೊದಲ ಪ್ರತಿಕ್ರಿಯೆಗಳು ಕೂಡ ಸಕಾರಾತ್ಮಕವಾಗಿವೆ. "ಪೇಪರ್ ಸ್ವಲ್ಪ ಉದ್ದವಾಗಿತ್ತು (Lengthy). ವಿಶೇಷವಾಗಿ ಚಿತ್ರಗಳನ್ನು ಬಿಡಿಸಿ, ಭಾಗಗಳನ್ನು ಗುರುತಿಸಲು ಹೆಚ್ಚು ಸಮಯ ಬೇಕಾಯಿತು. ಆದರೆ, ಪ್ರಶ್ನೆಗಳು ಕಠಿಣವಾಗಿರಲಿಲ್ಲ," ಎಂದು ಹಲವು ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಉತ್ತೀರ್ಣರಾಗಲು ಎಷ್ಟು ಅಂಕ ಬೇಕು?

ಸಿಬಿಎಸ್‌ಇ ಮಾರ್ಗಸೂಚಿಯ ಪ್ರಕಾರ, 12ನೇ ತರಗತಿಯ ಜೀವಶಾಸ್ತ್ರ ವಿಷಯದಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗಳು ಥಿಯರಿ ಮತ್ತು ಪ್ರಾಕ್ಟಿಕಲ್ ಪರೀಕ್ಷೆಗಳಲ್ಲಿ ಪ್ರತ್ಯೇಕವಾಗಿ ಕನಿಷ್ಠ ಶೇಕಡಾ 33ರಷ್ಟು ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದೆ. ಅಂದರೆ, 70 ಅಂಕಗಳ ಥಿಯರಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಾಸ್ ಆಗಲು ಕನಿಷ್ಠ 23 ಅಂಕಗಳನ್ನು ಗಳಿಸಲೇಬೇಕು.

ಒಟ್ಟಾರೆಯಾಗಿ, ನಿಯಮಿತವಾಗಿ ಎನ್‌ಸಿಇಆರ್‌ಟಿ ಪುಸ್ತಕವನ್ನು ಓದಿದ ಮತ್ತು ಹಳೆಯ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿದ ವಿದ್ಯಾರ್ಥಿಗಳಿಗೆ ಇಂದಿನ ಜೀವಶಾಸ್ತ್ರ ಪರೀಕ್ಷೆಯು ಅತ್ಯುತ್ತಮ ಅಂಕಗಳನ್ನು ತಂದುಕೊಡುವುದು ಖಚಿತ ಎಂಬುದು ತಜ್ಞರ ವಿಶ್ಲೇಷಣೆಯಿಂದ ದೃಢಪಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+