Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್
ಬೆಂಗಳೂರು: ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಅಬ್ಬರ ಮತ್ತೆ ಶುರುವಾಗುವ ಮುನ್ಸೂಚನೆ ನೀಡಿದೆ. ಯುಗಾದಿಗೂ ಮುನ್ನ ಸುರಿದಿದ್ದ ಮಳೆ ನಂತರದ ದಿನಗಳಲ್ಲಿ ದುರ್ಬಲವಾಗಿತ್ತು. ಇದೀಗ ಬದಲಾದ ಹವಾಮಾನ ವೈಪರೀತ್ಯಗಳ ಪ್ರಭಾವದಿಂದ ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಸುರಿಯಲಿದೆ. 07 ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಮತ್ತು 15ಕ್ಕೂ ಅಧಿಕ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ.
ರಾಜ್ಯದ ವಿವಿಧ ಕಡೆಗಳಲ್ಲಿ ಇಂದು ಸೋಮವಾರ (ಮಾರ್ಚ್ 25) ರಿಂದಲೇ ಧಾರಾಕಾರ ಮಳೆ ದಾಖಲಾಗಿದೆ. ಹುಬ್ಬಳ್ಳಿ, ಶಿವಮೊಗ್ಗದಲ್ಲಿ ಇಂದು ಉತ್ತಮ ಮಳೆ ಆಗಿದೆ. ಮುಂದಿನ 05 ದಿನಗಳ ಪೈಕಿ ಮೊದಲ ದಿನ ಮಾರ್ಚ್ 26 ರಂದು ಗುರುವಾರ ಉತ್ತರ ಕರ್ನಾಟಕದಲ್ಲಿ ಗುಡುಗು ಮಿಂಚು ಸಹಿತ, ಆಲಿಕಲ್ಲು ಮಳೆ ಎಚ್ಚರಿಕೆ ನೀಡಲಾಗಿದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ, ವಿಜಯನಗರ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳ ಕೆಲವು ಪ್ರತ್ಯೇಕ ಸ್ಥಳಗಳಲ್ಲಿ ಸಾಧಾರಣದಿಂದ ಜೋರು ಮಳೆ ಆಗಲಿದೆ. ಹೀಗಾಗಿ ಇವುಗಳಿಗೆ 'ಆರೆಂಜ್' ಅಲರ್ಟ್ ನೀಡಲಾಗಿದೆ. ಭಾರೀ ಮಳೆ ಪ್ರತ್ಯೇಕ ಸ್ಥಳಗಳನ್ನು ಜಿಲ್ಲೆಯ ಉಳಿದೆಡೆ ಹಗುರ ಮಳೆ ಆಗಬಹುದು ಎಂದು ಐಎಂಡಿ ವಿಜ್ಞಾನಿ ಡಾ.ಸಿ.ಎಸ್. ಪಾಟೀಲ್ ಅವರು ತಿಳಿಸಿದ್ದಾರೆ.

ಯೆಲ್ಲೋ ಅಲರ್ಟ್ ಜಿಲ್ಲೆಗಳು
ಇನ್ನೂ ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ, ಮೈಸೂರು, ಕೊಡಗು, ಹಾಸನ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ ಜಿಲ್ಲೆಗಳ ಒಂದೆಡೆರು ಕಡೆಗಳಲ್ಲಿ ಗುಡುಗು ಮಿಂಚು ಸಹಿತ ಆಲಿಕಲ್ಲು ಮಳೆ ಆಗಲಿದೆ. ಈ ಕಾರಣಕ್ಕೆ 'ಯೆಲ್ಲೋ ಅಲಟ್' ನೀಡಲಾಗಿದೆ. ಇದೇ ಜಿಲ್ಲೆಗಳ ಜೋರು ಮಳೆ ಸ್ಥಳಗಳನ್ನು ಬಿಟ್ಟರೆ ಉಳಿದೆಡೆ ಮೋಡ ಕವಿದ ವಾತಾವರಣ, ಆಗಾಗ ಹಗುರ ಮಳೆ ಸಾಧ್ಯತೆ ಇದೆ.
ಉಳಿದಂತೆ ರಾಜ್ಯದ ಬೀದರ್, ಕಲಬುರಗಿ, ಯಾದಗಿರಿ, ತುಮಕೂರು, ಮಂಡ್ಯ, ರಾಮನಗರ ಹಾಗೂ ಚಾಮರಾಜನಗರ ಜಿಲ್ಲೆಗಳ ಕೆಲವೆಡೆ ಮಬ್ಬು ವಾತಾವರಣ ನಿರ್ಮಾಣವಾಗಲಿದೆ ಆಗಾಗ ಸೋನೆ ಮಳೆ ಆಗುವ ನಿರೀಕ್ಷೆ ಇದೆ ಎಂಬ ಮುನ್ಸೂಚನೆ ನೀಡಲಾಗಿದೆ.
ಮಾರ್ಚ್ 27ರಿಂದ ನಂತರದ ನಾಲ್ಕು ದಿನ ಕರಾವಳಿ, ಉತ್ತರ ಕರ್ನಾಟಕ ಸೇರಿದಂತೆ ಕೆಲವು ಒಳನಾಡು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗಲಿದೆ. ಮಾರ್ಚ್ 28ರಂದು ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆ ಹೆಚ್ಚು ಸಕ್ರಿಯವಾಗಿರಲಿದೆ. ಮಾರನೇ ದಿನ ಮಾರ್ಚ್ 29ರಂದು ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ವಿವಿಧ ಭಾಗಗಳಲ್ಲಿ ಮಳೆ ಚುರುಕಾಗಿರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗಮನಿಸಬೇಕಾದ ಅಂಶವೆಂದರೆ ಪೂರ್ವ ಮುಂಗಾರು ಮಳೆ ಜಿಲ್ಲೆಯಾದ್ಯಂತ ಭಾರದ ಪ್ರತ್ಯೇಕ ಕೆಲವು ಕಡೆಗಳಲ್ಲಿ ಸುರಿಯಲಿದೆ. ಉಳಿದ ಕಡೆಗಳಲ್ಲಿ ಒಣಹವೆ ವಾತಾವರಣವೇ ಮೇಲುಗೈ ಸಾಧಿಸಲಿದೆ. ಇಂದು ಬುಧವಾರ (ಮಾ.25) ರಂದು ರಾಜ್ಯದ ಹಲವೆಡೆ ಮಳೆ ಆಗಿದೆ. ಅದರ ವಿವರ ಇಲ್ಲಿದೆ
ಇಂದಿನ ಮಳೆ ವಿವರ
ತ್ಯಾಗರ್ತಿ - 50 ಮಿ.ಮೀ.
ಭದ್ರಾವತಿ - 44.6ಮಿ.ಮೀ
ಹುಬ್ಬಳ್ಳಿ- 44.2ಮಿ.ಮೀ
ಭಾಲ್ಕಿ - 19.2ಮಿ.ಮೀ
ಹುಂಚದಕಟ್ಟೆ - 18ಮಿ.ಮೀ
ಆಗುಂಬೆ - 17.5ಮಿ.ಮೀ
ಶಿಗ್ಗಾಂವ್ - 15.6ಮಿ.ಮೀ
ಮುಂಡಗೋಡ - 13.6ಮಿ.ಮೀ
ಖಾನಾಪುರ - 13.4ಮಿ.ಮೀ
ಕಲಘಟಗಿ - 13ಮಿ.ಮೀ
ಕೊಪ್ಪ - 13ಮಿ.ಮೀ
ಹುಕ್ಕೇರಿ - 9.5ಮಿ.ಮೀ
ಕಲಬುರಗಿ - 8ಮಿ.ಮೀ
ಮಂಠಾಳ - 6.2ಮಿ.ಮೀ
ಹುಣಸಗಿ- 5.8ಮಿ.ಮೀ
ಇಳಕಲ್ - 5.6ಮಿ.ಮೀ
ರದ್ದೇವಾಡಗಿ - 5.5ಮಿ.ಮೀ
ಕಮ್ಮರಡಿ - 5.2ಮಿ.ಮೀ. ಮಳೆ ದಾಖಲಾಗಿದೆ.
ರಾಜ್ಯದ ಗರಿಷ್ಠ ತಾಪಮಾನ 37 ಡಿ.ಸೆ.
ರಾಯಚೂರು ಮತ್ತು ಕಲಬುರಗಿಯಲ್ಲಿ ಬರೋಬ್ಬರಿ ತಲಾ 37 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಕೊಪ್ಪಳ, ಬಾಗಲಕೋಟೆ, ಬಳ್ಳಾರಿಯಲ್ಲಿ ತಲಾ 36 ಡಿಗ್ರಿ ಸೆಲ್ಸಿಯಸ್, ವಿಜಯಪುರ, ಹಾವೇರಿ, ಗದಗ, ತುಮಕೂರು ಸೇರಿ ಕೆಲವೆಡೆ 35 ಡಿಗ್ರಿ ಸೆಲ್ಸಿಯಸ್, ಚಿತ್ರದುರ್ಗ, ಮೈಸೂರು, ಗಂಗಾವತಿ, ಬೆಳಗಾವಿ ವಿಮಾನ ನಿಲ್ದಾಣ, ಬೀದರ್ ವ್ಯಾಪ್ತಿಯಲ್ಲಿ 34 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬಂದಿದೆ. ಹೊನ್ನಾವರ, ಮಂಗಳೂರು, ಬೆಂಗಳೂರು ನಗರ, ರಾಮನಗರ, ಹಾಸನ, ಬೆಂಗಳೂರು ಕೆಐಎಎಲ್ ವಿಮಾನ ನಿಲ್ದಾಣಗಳ ವ್ಯಾಪ್ತಿಯಲ್ಲಿ 33 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಹಿತಿ ನೀಡಿದೆ.












Click it and Unblock the Notifications