ಹೊಸ ಟರ್ಬೊ ಎಂಜಿನ್‌, ADAS ಫೀಚರ್‌ಗಳೊಂದಿಗೆ ಬರ್ತಿದೆ ಮಾರುತಿ ಬ್ರೆಝಾ ಫೇಸ್‌ಲಿಫ್ಟ್: ಬೆಲೆ ಎಷ್ಟು?

ಮಾರುತಿ ಸುಜುಕಿ ಬ್ರೆಝಾ ಫೇಸ್‌ಲಿಫ್ಟ್ ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ಕೊಡಲಿದ್ದು, ಈ ಬಾರಿ ಹಲವು ಹೊಸ ಬದಲಾವಣೆಗಳೊಂದಿಗೆ ಗ್ರಾಹಕರನ್ನು ಸೆಳೆಯಲು ಸಜ್ಜಾಗಿದೆ. ಬಿಡುಗಡೆಯಾದ ನಂತರ ಇದೇ ಮೊದಲ ಬಾರಿಗೆ ಪ್ರಮುಖ ಅಪ್‌ಡೇಟ್ ಪಡೆಯುತ್ತಿರುವ ಬ್ರೆಝಾದಲ್ಲಿ ಹೊಸ ಟರ್ಬೊ-ಪೆಟ್ರೋಲ್ ಎಂಜಿನ್‌, ಹೆಚ್ಚು ಫೀಚರ್‌ಗಳು ಮತ್ತು ಆಧುನಿಕ ಸುರಕ್ಷತಾ ತಂತ್ರಜ್ಞಾನ ಸೇರಲಿದೆ ಎನ್ನಲಾಗಿದೆ. ಈ ಎಸ್‌ಯುವಿ 2026ರ ಜುಲೈ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ಹೊಸ ಟರ್ಬೊ ಎಂಜಿನ್‌ನೊಂದಿಗೆ ಬರಲಿದೆಯೇ ಬ್ರೆಝಾ?

ಹೊಸ ಬ್ರೆಝಾ (Brezza) ಕಾರಿನ ಪ್ರಮುಖ ಆಕರ್ಷಣೆಯಾಗಿ ಶಕ್ತಿಯುತ 'ಟರ್ಬೊ ಎಂಜಿನ್' ಸೇರ್ಪಡೆಯಾಗುವ ಸಾಧ್ಯತೆಯಿದೆ. ಈ ಹೊಸ ಇಂಜಿನ್‌ನ ತಾಂತ್ರಿಕ ವಿವರಗಳು ಹೀಗಿವೆ:

Maruti Brezza Facelift 2026

ಎಂಜಿನ್ ಸಾಮರ್ಥ್ಯ: 1.0 ಲೀಟರ್, 3-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್.

ಪವರ್ ಹಾಗೂ ಟಾರ್ಕ್: ಇದು ಸುಮಾರು 98.6 ಹಾರ್ಸ್‌ಪವರ್ (HP) ಮತ್ತು 147.6 ಎನ್‌ಎಂ (Nm) ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಗೇರ್‌ಬಾಕ್ಸ್ ಸೌಲಭ್ಯ: ಉತ್ತಮ ಚಾಲನಾ ಅನುಭವಕ್ಕಾಗಿ ಇದಕ್ಕೆ 6-ಸ್ಪೀಡ್ ಮ್ಯಾನುಯಲ್ ಗೇರ್‌ಬಾಕ್ಸ್ ಅನ್ನು ಜೋಡಿಸುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.

ಈ ಹೊಸ ಎಂಜಿನ್ ಸಬ್-1.2 ಲೀಟರ್ ಟರ್ಬೊ ವಾಹನಗಳಿಗೆ ಅನ್ವಯವಾಗುವ ಕಡಿಮೆ ಜಿಎಸ್‌ಟಿ ಪ್ರಯೋಜನ ಪಡೆಯುವ ಸಾಧ್ಯತೆಯಿದ್ದು, ಬೆಲೆ ಏರಿಕೆಯನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು.

ಹೊಸ ಕಾರಿನಲ್ಲಿದೆ ಪವರ್‌ಫುಲ್ ಎಂಜಿನ್ ಮತ್ತು ಬೂಟ್ ಸ್ಪೇಸ್ ಸಿಎನ್‌ಜಿ!

ಪವರ್‌ಫುಲ್ ಎಂಜಿನ್: ಮುಂಬರುವ ಹೊಸ ಆವೃತ್ತಿಯಲ್ಲಿ 103 ಹಾರ್ಸ್‌ಪವರ್ ಹಾಗೂ 137 ಎನ್‌ಎಂ ಟಾರ್ಕ್ ನೀಡುವ 1.5 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಲಭ್ಯವಿರಲಿದೆ.

ಅಂಡರ್‌ಬಾಡಿ ಸಿಎನ್‌ಜಿ: ಗ್ರಾಹಕರಿಗೆ ಮೈಲೇಜ್ ಜೊತೆಗೆ ಹೆಚ್ಚಿನ ಲಗೇಜ್ ಜಾಗ ಸಿಗಲೆಂಬ ಉದ್ದೇಶದಿಂದ, ಕಾರ್ಖಾನೆಯಲ್ಲೇ ಫಿಟ್ ಮಾಡಿದ ಅಂಡರ್‌ಬಾಡಿ ಸಿಎನ್‌ಜಿ ಕಿಟ್ ನೀಡಲಾಗುತ್ತಿದೆ. ಇದರಿಂದ ಡಿಕ್ಕಿಯ ಸ್ಪೇಸ್ ಯಾವುದೇ ರೀತಿ ಕಟ್ ಆಗುವುದಿಲ್ಲ.

ಹೊಸ ಕಾರಿನ ಇಂಟೀರಿಯರ್‌ನಲ್ಲಿ ಏನೆಲ್ಲಾ ಇರಲಿದೆ?

10.1 ಇಂಚಿನ ಸ್ಕ್ರೀನ್: ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಒಳಗೊಂಡ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್.

ಹೊಸ ಡ್ಯಾಶ್‌ಬೋರ್ಡ್: ಕ್ಯಾಬಿನ್‌ಗೆ ಹೊಸ ಲುಕ್ ನೀಡುವ ಡ್ಯಾಶ್‌ಬೋರ್ಡ್ ವಿನ್ಯಾಸ ಮತ್ತು ಪ್ರೀಮಿಯಂ ಸೀಟ್ ಅಪ್‌ಹೋಲ್ಸ್ಟ್ರಿ ಫಿನಿಶ್ ನೀಡುವ ಸಾಧ್ಯತೆಯಿದೆ.

ಲೆವೆಲ್-2 ADAS ಹೈಲೈಟ್: ಚಾಲನೆಯನ್ನು ಸುರಕ್ಷಿತವಾಗಿಸಲು ಮೊದಲ ಬಾರಿಗೆ ಸುಧಾರಿತ ADAS ತಂತ್ರಜ್ಞಾನದ ಎಂಟ್ರಿ.

ಬ್ರೆಝಾ ಫೇಸ್‌ಲಿಫ್ಟ್ ಅಪ್‌ಡೇಟ್: ಜುಲೈ 2026ಕ್ಕೆ ಲಾಂಚ್?

ಮಾರುತಿ ಸುಜುಕಿ ಬ್ರೆಝಾ ಪ್ರೇಮಿಗಳಿಗೆ ಗುಡ್ ನ್ಯೂಸ್. ಸುಧಾರಿತ ಎಂಜಿನ್ ಮತ್ತು ಹೆದ್ದೂರಿ ಸುರಕ್ಷತಾ ಫೀಚರ್‌ಗಳೊಂದಿಗೆ ಹೊಸ ಬ್ರೆಝಾ ಫೇಸ್‌ಲಿಫ್ಟ್ 2026ರ ಜುಲೈನಲ್ಲಿ ಭಾರತೀಯ ರಸ್ತೆಗಿಳಿಯುವ ಸಾಧ್ಯತೆಯಿದೆ. ಸದ್ಯ ₹8.26 ಲಕ್ಷದಿಂದ ₹14.04 ಲಕ್ಷದವರೆಗಿನ ಬಜೆಟ್‌ನಲ್ಲಿ ಸಿಗುವ ಬ್ರೆಝಾ, ಹೊಸ ಅಪ್‌ಡೇಟ್‌ಗಳ ಬಳಿಕ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಾಣಲಿದೆ. ಮುಖ್ಯವಾಗಿ ಇದರ ಟರ್ಬೊ-ಪೆಟ್ರೋಲ್ ಆವೃತ್ತಿ ಹೆಚ್ಚಿನ ದರ ಹೊಂದಿರಲಿದ್ದು, ಹೊಸ ಎಸ್‌ಯುವಿ ಕೊಳ್ಳುವವರಿಗೆ ಇದು ಪಕ್ಕಾ ಸೂಕ್ತ ಆಯ್ಕೆಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+