ವಂದೇ ಭಾರತ್‌ನಲ್ಲಿ ಸಾಕು ನಾಯಿ, ಬೆಕ್ಕಿನೊಂದಿಗೆ ಪ್ರಯಾಣಿಸಬೇಕೇ? ಈ ಹೊಸ ಪೆಟ್ ಬಾಕ್ಸ್ ನಿಯಮ ತಿಳಿಯಿರಿ

ಸಾಕು ನಾಯಿ ಅಥವಾ ಬೆಕ್ಕಿನೊಂದಿಗೆ ದೂರದ ಪ್ರಯಾಣ ಮಾಡಲು ಬಯಸುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಹೊಸ ಸೌಲಭ್ಯವನ್ನು ಒದಗಿಸಿದೆ. ವಂದೇ ಭಾರತ್ ಸ್ಲೀಪರ್ ರೈಲುಗಳಲ್ಲಿ ಇದೀಗ 'ಪೆಟ್ ಬಾಕ್ಸ್' ಸೇವೆ ಲಭ್ಯವಿದ್ದು, ಇದರ ಮೂಲಕ ಸಾಕುಪ್ರಾಣಿಗಳನ್ನು ಸುರಕ್ಷಿತವಾಗಿ ರೈಲಿನಲ್ಲಿ ಕರೆದೊಯ್ಯಬಹುದು.

ರೈಲಿನಲ್ಲಿ ಪ್ರಯಾಣಿಸುವಾಗ ಸಾಕುಪ್ರಾಣಿಗಳನ್ನು ಸುರಕ್ಷಿತವಾಗಿ ಇರಿಸಲು ಎಂಜಿನ್ ಬಳಿ ವಿಶೇಷ ಲೋಹದ ಪೆಟ್ಟಿಗೆಗಳ (Pet Box) ವ್ಯವಸ್ಥೆ ಇರುತ್ತದೆ. ಆದರೆ, ಈ ವಿಶಿಷ್ಟ ಸೌಲಭ್ಯವನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಲು ಅವಕಾಶವಿಲ್ಲದ ಕಾರಣ, ಪ್ರಯಾಣಿಕರು ನೇರವಾಗಿಯೇ ಇದರ ಪ್ರಯೋಜನ ಪಡೆದುಕೊಳ್ಳಬೇಕಾಗುತ್ತದೆ.

Vande Bharat Sleeper Pet Box Booking

ಹೇಗೆ ಬುಕ್ ಮಾಡಬೇಕು?

ರೈಲಿನಲ್ಲಿ ನಿಮ್ಮ ಮುದ್ದಿನ ಪ್ರಾಣಿಗಳಿಗೆ ಪೆಟ್ ಬಾಕ್ಸ್ ಕಾಯ್ದಿರಿಸಲು, ನೀವು ಪ್ರಯಾಣ ಆರಂಭಿಸುವ ನಿಲ್ದಾಣದ ಪಾರ್ಸೆಲ್ ಅಥವಾ ಲಗೇಜ್ ವಿಭಾಗವನ್ನು ಸಂಪರ್ಕಿಸಬೇಕು. ರೈಲ್ವೆ ಅಧಿಕಾರಿಗಳು ಪರಿಶೀಲನೆ ನಡೆಸಿ ನಾಯಿ ಅಥವಾ ಬೆಕ್ಕಿಗೆ ಸೂಕ್ತವಾದ ಪೆಟ್ ಬಾಕ್ಸ್ ಬುಕ್ಕಿಂಗ್ ಮಾಡಿಕೊಡುತ್ತಾರೆ. ಆದರೆ, ನೆನಪಿನಲ್ಲಿಡಬೇಕಾದ ಪ್ರಮುಖ ಅಂಶವೆಂದರೆ, ರೈಲು ಹೊರಡುವುದಕ್ಕೆ ಕನಿಷ್ಠ 3 ಗಂಟೆಗಳ ಮೊದಲೇ ಈ ಪ್ರಕ್ರಿಯೆಯನ್ನು ಮುಗಿಸಿರಬೇಕು. ತಡವಾಗಿ ಹೋದರೆ ಕೊನೆಯ ಕ್ಷಣದಲ್ಲಿ ಹೋದರೆ ಬುಕ್ಕಿಂಗ್ ಸಿಗದೇ ಇರುವ ಸಾಧ್ಯತೆಯೂ ಇದೆ.

ಈ ರೈಲು ಬರುವುದು ತಡವಾದರೆ ಸಿಗುತ್ತೆ ಫ್ರೀ ಫುಡ್! ಐಆರ್‌ಸಿಟಿಸಿ ನಿಯಮ ಏನು?
ಈ ರೈಲು ಬರುವುದು ತಡವಾದರೆ ಸಿಗುತ್ತೆ ಫ್ರೀ ಫುಡ್! ಐಆರ್‌ಸಿಟಿಸಿ ನಿಯಮ ಏನು?

ಪೆಟ್ ಬುಕ್ಕಿಂಗ್ ಮಾಡಬೇಕೇ? ಈ ನಿಯಮಗಳನ್ನು ನೆನಪಿಡಿ:

ಕನ್ಫರ್ಮ್ ಟಿಕೆಟ್: RAC ಅಥವಾ ವೇಟಿಂಗ್ ಲಿಸ್ಟ್ ಟಿಕೆಟ್‌ಗಳಿಗೆ ಪೆಟ್ ಬಾಕ್ಸ್ ಬುಕ್ಕಿಂಗ್ ಸೌಲಭ್ಯ ದೊರೆಯುವುದಿಲ್ಲ; ಕನ್ಫರ್ಮ್ ಟಿಕೆಟ್ ಕಡ್ಡಾಯ.

ವೆಟರ್ನರಿ ಸರ್ಟಿಫಿಕೇಟ್: ಪ್ರಯಾಣದ 24 ರಿಂದ 48 ಗಂಟೆಗಳ ಒಳಗೆ ಪಶುವೈದ್ಯರು ನೀಡಿರುವ ಪ್ರಾಣಿಯ ಆರೋಗ್ಯ ಮತ್ತು ಫಿಟ್ನೆಸ್ ಪ್ರಮಾಣಪತ್ರ.

ಲಸಿಕೆ ಕಾರ್ಡ್: ಸಾಕುಪ್ರಾಣಿಗೆ ಹಾಕಿಸಲಾದ ಲಸಿಕೆಗಳ ಸಂಪೂರ್ಣ ವಿವರಗಳಿರುವ ದಾಖಲೆ.

ಎಷ್ಟು ಶುಲ್ಕ?

ಪೆಟ್ ಬಾಕ್ಸ್ ಶುಲ್ಕವನ್ನು ಸಾಕುಪ್ರಾಣಿಯ ತೂಕದ ಆಧಾರದ ಮೇಲೆ ನಿಗದಿಪಡಿಸಲಾಗುತ್ತದೆ. ಸಾಮಾನ್ಯವಾಗಿ ಪ್ರತಿ ಕೆಜಿಗೆ ಸುಮಾರು 30 ರೂ ದರ ವಿಧಿಸಲಾಗುತ್ತದೆ. ಶುಲ್ಕ ಪಾವತಿಸಿದ ಬಳಿಕ ಪ್ರಯಾಣಿಕರಿಗೆ ಲಗೇಜ್ ಟಿಕೆಟ್ ನೀಡಲಾಗುತ್ತದೆ. ಇದೇ ಬುಕ್ಕಿಂಗ್ ದೃಢೀಕರಣವಾಗಿರುತ್ತದೆ.

ರೈಲಿನಲ್ಲಿ ಎಲ್ಲಿ ಇಡಲಾಗುತ್ತದೆ?

ಸಾಕುಪ್ರಾಣಿಗಳನ್ನು ಪ್ರಯಾಣಿಕರ ಕೋಚ್ ಅಥವಾ ಕ್ಯಾಬಿನ್ ಒಳಗೆ ಕರೆದೊಯ್ಯಲು ಅವಕಾಶ ಇರುವುದಿಲ್ಲ. ಅವುಗಳನ್ನು ರೈಲಿನ ಎರಡೂ ತುದಿಗಳಲ್ಲಿರುವ ವಿಶೇಷ ಲೋಹದ ಪೆಟ್ ಬಾಕ್ಸ್ ಒಳಗೆ ಸುರಕ್ಷಿತವಾಗಿ ಇರಿಸಲಾಗುತ್ತದೆ.

ನೀವು ಕೂಡ ಈ ತಪ್ಪು ಮಾಡುತ್ತಿದ್ದೀರಾ? ರೈಲು ಪ್ರಯಾಣಿಕರು ತಿಳಿಯಲೇಬೇಕಾದ 7 ಪ್ರಮುಖ ನಿಯಮಗಳು
ನೀವು ಕೂಡ ಈ ತಪ್ಪು ಮಾಡುತ್ತಿದ್ದೀರಾ? ರೈಲು ಪ್ರಯಾಣಿಕರು ತಿಳಿಯಲೇಬೇಕಾದ 7 ಪ್ರಮುಖ ನಿಯಮಗಳು

ಗಮನಿಸಬೇಕಾದ ಪ್ರಮುಖ ನಿಯಮಗಳು

ಒಂದು PNRಗೆ ಒಂದು ಸಾಕುಪ್ರಾಣಿಗೆ ಮಾತ್ರ ಅನುಮತಿ.
ಪೆಟ್ ಬಾಕ್ಸ್ ಶುಲ್ಕ ಮರುಪಾವತಿಯಾಗುವುದಿಲ್ಲ (Non-refundable).
ಎಲ್ಲ ವಂದೇ ಭಾರತ್ ಸ್ಲೀಪರ್ ಮಾರ್ಗಗಳಲ್ಲಿ ಈ ಸೌಲಭ್ಯ ಲಭ್ಯವಿರದೇ ಇರಬಹುದು.
ಪ್ರಯಾಣಕ್ಕೂ ಮುನ್ನ ಸಂಬಂಧಿತ ರೈಲು ಹಾಗೂ ಮಾರ್ಗದಲ್ಲಿ ಈ ಸೇವೆ ಲಭ್ಯವಿದೆಯೇ ಎಂಬುದನ್ನು ರೈಲ್ವೆ ಅಧಿಕಾರಿಗಳಿಂದ ಖಚಿತಪಡಿಸಿಕೊಳ್ಳುವುದು ಉತ್ತಮ.

ಸಾಕುಪ್ರಾಣಿಗಳೊಂದಿಗೆ ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣ ಬಯಸುವವರಿಗೆ ಭಾರತೀಯ ರೈಲ್ವೆಯ ಈ ಪೆಟ್ ಬಾಕ್ಸ್ ಸೇವೆ ಉಪಯುಕ್ತವಾಗಿದ್ದು, ಮುಂಗಡ ಬುಕ್ಕಿಂಗ್ ಮಾಡಿದರೆ ಯಾವುದೇ ತೊಂದರೆಯಿಲ್ಲದೆ ಪ್ರಯಾಣಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+