ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಣಿವೆ ರಾಜ್ಯದಲ್ಲಿ ಕಲಂ-35 ಎ ಸಿಂಧುತ್ವ ಹೋರಾಟ, ಏನಿದು ವಿವಾದ?

By ವಿಕಾಸ್ ನಂಜಪ್ಪ
|
Google Oneindia Kannada News

Recommended Video

Article 35 A: ಕಣಿವೆ ರಾಜ್ಯದಲ್ಲಿ ಕಲಂ-35 ಎ ಸಿಂಧುತ್ವ ಹೋರಾಟ, ಏನಿದು ವಿವಾದ?

ಬೆಂಗಳೂರು, ಆಗಸ್ಟ್ 06 : ಜಮ್ಮು ಮತ್ತು ಕಾಶ್ಮೀರದ ನಾಗರಿಕರಿಗೆ ನೀಡಲಾಗಿರುವ ವಿಶೇಷಾಧಿಕಾರ ಕಲಂ 35-ಎ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದೂಡಿದೆ. ಆಗಸ್ಟ್ 27ರಂದು ಅರ್ಜಿಯ ವಿಚಾರಣೆ ನಡೆಯಲಿದೆ.

ಕಲಂ-35 ಎ ಸಿಂಧುತ್ವ ಪ್ರಶ್ನಿಸಿ 3 ಸಾರ್ವಜಿನಿಕ ಹಿತಾಸಕ್ತಿ ಅರ್ಜಿಗಳು ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿವೆ. ಇಂದು ಅರ್ಜಿಯ ವಿಚಾರಣೆ ತ್ರಿ ಸದಸ್ಯ ಪೀಠದಲ್ಲಿ ನಡೆಯಬೇಕಿತ್ತು. ಆದರೆ, ಒಬ್ಬರು ನ್ಯಾಯಮೂರ್ತಿಗಳ ಗೈರು ಹಾಜರಿ ಕಾರಣಕ್ಕಾಗಿ ವಿಚಾರಣೆ ಮುಂದೂಡಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಸರ್ಕಾರ ಸಹ ಸುಪ್ರೀಂಕೋರ್ಟ್‌ ರಿಜಿಸ್ಟಾರ್‌ಗೆ ಅರ್ಜಿಯೊಂದನ್ನು ಸಲ್ಲಿಸಿದ್ದು ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಮೂಂದೂಡಿ ಎಂದು ಮನವಿ ಮಾಡಿತ್ತು. ರಾಜ್ಯದಲ್ಲಿ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನಲೆಯಲ್ಲಿ ಅರ್ಜಿ ಮುಂದೂಡುವಂತೆ ಮನವಿ ಮಾಡಲಾಗಿತ್ತು.

What is Article 35A? and why is there is an objection to it

ಏನಿದು ಕಲಂ 35 -ಎ? : ಕಲಂ 35-ಎ ಸಂವಿಧಾನದಲ್ಲಿ ರಾಷ್ಟ್ರಪತಿಗಳ ಆಳ್ವಿಕೆಯ ನಿಯಮದಂತೆ ಸೇರಿ ಹೋಗಿದೆ. ಈ ಕಲಂ ಅನ್ವಯ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಅಲ್ಲಿನ ಖಾಯಂ ನಿವಾಸಿಗಳಿಗೆ ಕೆಲವು ಹಕ್ಕು, ವಿಶೇಷ ಸವಲತ್ತುಗಳನ್ನು ನೀಡಿದೆ.

ಜಮ್ಮು ಮತ್ತು ಕಾಶ್ಮೀರ ಮಹಾರಾಜರ ಆಳ್ವಿಕೆಗೆ ಒಳಪಟ್ಟಿತ್ತು. 1927ರಲ್ಲಿ ಪಂಡಿತ ಸಮುದಾಯ 'ಕಾಶ್ಮೀರ ಫಾರ್ ಕಾಶ್ಮೀರ' ಎಂಬ ಅಭಿಯಾನ ಆರಂಭಿಸಿತು. ಸಮುದಾಯದ ಒತ್ತಡಕ್ಕೆ ಮಣಿದು ಮಹಾರಾಜರು ಆದೇಶವೊಂದನ್ನು ಹೊರಡಿಸಿದರು.

ಇದರ ಅನ್ವಯ ಕಣಿವೆ ರಾಜ್ಯದಲ್ಲಿ ಸರ್ಕಾರಿ ನೇಮಕಾತಿ, ಸ್ಥಿರಾಸ್ತಿ ಖರೀದಿ, ಸರ್ಕಾರಿ ಯೋಜನೆಗಳ ಸೌಲಭ್ಯ, ಸಾರ್ವಜನಿಕ ಕಲ್ಯಾಣಭಿವೃದ್ಧಿ ಯೋಜನೆಗೆ ಲಾಭ ಖಾಯಂ ಆಗಿ ನೆಲೆಸಿರುವವರಿಗೆ ಸಿಕ್ಕಿತು. ಹೊರ ರಾಜ್ಯದಿಂದ ಬಂದು ನೆಲೆಸಿದವರಿಗೆ ಈ ಲಾಭ ಸಿಗುತ್ತಿರಲಿಲ್ಲ.

1947 ಅಕ್ಟೋಬರ್ 26ರಂದು ಜಮ್ಮ ಮತ್ತು ಕಾಶ್ಮೀರ ಭಾರತದ ವ್ಯಾಪ್ತಿಗೆ ಸೇರಿತು. ಆಗ ಮಹಾರಾಜ ರಕ್ಷಣೆ, ವಿದೇಶಾಂಗ ವ್ಯವಹಾರ ಮತ್ತು ಸಂಪರ್ಕ ಮುಂತಾದ ವಿಷಯಗಳನ್ನು ಕೇಂದ್ರ ಸರ್ಕಾರದ ವ್ಯಾಪ್ತಿಗೆ ನೀಡಿದರು. 370ನೇ ಕಾಯ್ದೆ ಅನ್ವಯ ಇದನ್ನು ಅಧಿಕೃತಗೊಳಿಸಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಾಂಧವ್ಯ ಮುಂದುವರೆಯಿತು.

ಕಲಂ 35-ಎ ಹೇಳುವುದೇನು? : ಕಲಂ 35-ಎ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಖಾಯಂ ನೆಲೆಸಿದವರು, ವಲಸೆ ಬಂದವರಿಗೆ ಸೌಲಭ್ಯಗಳ ವಿವತರಣೆಯಲ್ಲಿ ತಾರತಮ್ಯವಿದೆ ಇದಕ್ಕಾಗಿಯೇ ನ್ಯಾಯಾಲಯದ ಮೊರೆ ಹೋಗಲಾಗಿದೆ.

* ಕಲಂ 35-ಎ ಅನ್ವಯ ಮೂಲ ನಿವಾಸಿ ಮತ್ತು ವಲಸೆ ಬಂದವರು ಎಂದು ವಿಂಗಡನೆ ಮಾಡಲಾಗುತ್ತದೆ
* ರಾಜ್ಯದಲ್ಲಿ ಖಾಯಂ ಆಗಿ ನೆಲೆಸಿದ ಮೂಲ ನಿವಾಸಿಗಳಿಗೆ ಹಲವು ಸೌಲಭ್ಯಗಳನ್ನು ನೀಡಲಾಗಿದೆ
* ಸರ್ಕಾರಿ ನೇಮಕಾತಿಯಲ್ಲಿ ಆದ್ಯತೆ ಇದೆ
* ರಾಜ್ಯದಲ್ಲಿ ಸ್ಥಿರಾಸ್ತಿ ಖರೀದಿಗೆ ಅವಕಾಶವಿದೆ
* ಸರ್ಕಾರದ ಪ್ರೋತ್ಸಾಹ ಧನ ಸೇರಿದಂತೆ ವಿವಿಧ ಸವಲತ್ತುಗಳನ್ನು ಪಡೆಯಲು ಅವಕಾಶವಿದೆ.

ಕಲಂ 35-ಎ ವಿರೋಧವೇಕೆ? : ವಿವಾಹ, ಆಸ್ತಿ ಖರೀದಿ, ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ವಿಚಾರದಲ್ಲಿ ತಾರತಮ್ಯವಿದೆ. ಆದ್ದರಿಂದ, ಕಲಂ 35-ಎ ಸಿಂಧುತ್ವ ಪ್ರಶ್ನಿಸಿದ ಸುಪ್ರೀಂಕೋರ್ಟ್‌ಗೆ ಸಾರ್ವಜಿನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ಕಣಿವೆ ರಾಜ್ಯದಲ್ಲಿನ ಮಹಿಳೆ ಶಾಶ್ವತ ನಿವಾಸಿ ಪ್ರಮಾಣ ಪತ್ರ ಹೊಂದಿಲ್ಲದ ಪುರುಷನನ್ನು ವಿವಾಹವಾದರೆ ದಂಪತಿಯ ಮಕ್ಕಳಿಗೆ ಶಾಶ್ವತ ನಿವಾಸಿ ಪ್ರಮಾಣ ಪತ್ರ ಸಿಗುವುದಿಲ್ಲ. ಮಹಿಳೆಯ ಹೆಸರಿನಲ್ಲಿ ಆಸ್ತಿ ಇದ್ದರೆ ಅದನ್ನು ಮಕ್ಕಳಿಗೆ ನೀಡಲು ಬರುವುದಿಲ್ಲ.

ಕಣಿವೆ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೂರಾರು ಜನರು ತಲೆಮಾರುಗಳಿಂದ ವಾಸವಾಗಿದ್ದಾರೆ. ಕಲಂ 35-ಎ ನಿಂದಾಗಿ ಅವರ ಹಕ್ಕುಗಳನ್ನು ಕಸಿದುಕೊಂಡಂತಾಗುತ್ತಿದೆ ಎಂಬುದು ಆರೋಪವಾಗಿದೆ.

ರಾಜ್ಯದಲ್ಲಿ ವಾಲ್ಮೀಕಿ ಸಮುದಾಯದ ಹಲವು ಜನರಿದ್ದಾರೆ. 1957ರಲ್ಲಿ ಅವರಿಗೆ ಶಾಶ್ವತ ನಿವಾಸಿ ಪ್ರಮಾಣ ಪತ್ರ ನೀಡಲಾಗಿದೆ. ಆದರೆ, ಅವರು ಮತ್ತು ಅವರ ಮಕ್ಕಳು ಡಿ ದರ್ಜೆ ಕೆಲಸಗಳನ್ನು ಮಾತ್ರ ಮಾಡಬೇಕು ಎಂದು ಷರತ್ತು ವಿಧಿಸಲಾಗಿದೆ. ಇದರಿಂದಾಗಿ 6 ದಶಕಗಳು ಕಳೆದರೂ ಅವರು ಡಿ ದರ್ಜೆ ಕೆಲಸಗಳನ್ನು ಮಾತ್ರ ಪಡೆಯಲು ಸಾಧ್ಯವಾಗಿದೆ.

ಖಾಸಗಿ ಉದ್ಯಮಗಳು ಈ ನೀತಿಯಿಂದಾಗಿ ಮಾಲೀಕತ್ವದ ಸಮಸ್ಯೆಯನ್ನು ಎದುರಿಸುತ್ತಿವೆ. ಉತ್ತಮ ವೈದ್ಯರು ಇದೇ ಕಾರಣಕ್ಕೆ ರಾಜ್ಯಕ್ಕೆ ಸೇವೆ ಸಲ್ಲಿಸಲು ಆಗಮಿಸುತ್ತಿಲ್ಲ. ಮೂಲ ನಿವಾಸಿಗಳಲ್ಲದ ಮಕ್ಕಳು ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗುತ್ತಿಲ್ಲ.

ಭಾರತದ ಸಂವಿಧಾನದ ಪ್ರಕಾರ ಪ್ರತಿಯೊಬ್ಬ ಪ್ರಜೆಗೂ ಎಲ್ಲಾ ಹಕ್ಕುಗಳನ್ನು ಸಮರ್ಪಕವಾಗಿ ಹಂಚಿಕೆ ಆಗಬೇಕು. ಆದರೆ, ಕಲಂ 35-ಎ ಅನ್ವಯ ಕಣಿವೆ ರಾಜ್ಯದಲ್ಲಿನ ಕೆಲವು ಜನರಿಗೆ ಆ ಹಕ್ಕುಗಳು ಸಿಗುತ್ತಿಲ್ಲ ಎಂಬುದು ಹೋರಾಟಕ್ಕೆ ಕಾರಣವಾಗಿದೆ.

English summary
Jammu and Kashmir tense it the issue of Article 35A. What is Article 35A?, What Article 35A states? here is a detail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X