ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಪ್ಪಲಿ ಕದ್ದ ಹಾವು: ಚಪ್ಪಲಿ ಬಾಯಲ್ಲಿಡಿದು ಸರಸರನೇ ಹೋದ ಹಾವು

|
Google Oneindia Kannada News

ಸಾಮಾನ್ಯವಾಗಿ ಹಾವುಗಳನ್ನು ಕಂಡರೆ ಎಲ್ಲರಿಗೂ ಭಯವೇ. ಅದು ಇದ್ದ ಜಾಗಕ್ಕೆ ಹೋಗುವುದಿರಲಿ ಜನ ವಾಸಿಸುವ ಜಾಗಕ್ಕೆ ಅದು ಬಂದರೆ ಪ್ರಾಣ ಪಕ್ಷಿಯೇ ಹಾರಿ ಹೋದಂತಾಗುತ್ತದೆ. ಹೀಗೆ ಹಾವೊಂದು ಮನೆ ಬಾಗಿಲಿಗೆ ಸರಸರನೇ ಬಂದು ಚಪ್ಪಲಿಯನ್ನು ಬಾಯಲ್ಲಿಡಿದುಕೊಂಡು ಹೋಗಿದೆ.

ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ, ಶುಭ ಸಮಾರಂಭಗಳಲ್ಲಿ ಚಪ್ಪಲಿಗಳು ಕಳ್ಳತನವಾಗುವುದನ್ನು ನಾವು ನೋಡಿದ್ದೇವೆ. ಕೆಲವೊಮ್ಮೆ ಮನೆ ಬಾಗಿಲಿಗಿದ್ದ ಚಪ್ಪಲಿಗಳನ್ನು ಕದ್ದೊಯ್ಯುವುದು ಇದೆ. ಆದರೆ ಈ ಕಳ್ಳ ಹಾವು ಮನೆ ಮಾಲೀಕರ ಮುಂದೆ ಚಪ್ಪಲಿಯನ್ನು ಬಾಯಲ್ಲಿಡಿದುಕೊಂಡು ಸರಸರನೇ ಹೋಗಿದೆ. ಅಷ್ಟಕ್ಕೂ ಚಪ್ಪಲಿ ಕದ್ದಿದ್ದು ವ್ಯಕ್ತಿಯಲ್ಲ ಬದಲಿಗೆ ಹಾವು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ರೈತನ ತೋಟದಲ್ಲಿ ಮಣ್ಣುಮುಕ್ಕ ಹಾವು; ಬೆಲೆ ತಿಳಿದರೆ ಬೆಚ್ಚಿ ಬೀಳುತ್ತೀರಿ..ರೈತನ ತೋಟದಲ್ಲಿ ಮಣ್ಣುಮುಕ್ಕ ಹಾವು; ಬೆಲೆ ತಿಳಿದರೆ ಬೆಚ್ಚಿ ಬೀಳುತ್ತೀರಿ..

ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ "ಈ ಹಾವು ಆ ಚಪ್ಪಲ್‌ ತೆಗೆದುಕೊಂಡು ಏನು ಮಾಡುತ್ತದೆ ಎಂದು ನನಗೆ ಆಶ್ಚರ್ಯವಾಗಿದೆ'' ಎಂದು ಶೀರ್ಷಿಕೆ ಬರೆದಿದ್ದಾರೆ.

ವಿಡಿಯೋದಲ್ಲಿ ಸೆರೆಯಾದ ದೃಶ್ಯವನ್ನು ನೊಡುವುದಾದರೆ- ಹಾವು ಮನೆಯೊಂದರ ಕಡೆಗೆ ಬರುತ್ತದೆ. ಆಗ ಅಲ್ಲಿದ್ದ ಕೆಲ ಮಹಿಳೆಯರು ಭಯದಿಂದ ಕಿರುಚುತ್ತಾರೆ. ಜೊತೆಗೆ ಹಾವು ತಮ್ಮತ್ತ ಬಾರದಂತೆ ಚಪ್ಪಲಿಯನ್ನು ಎಸೆಯುತ್ತಾರೆ. ಅಷ್ಟೇ ಹಾವು ಅದೇನೋ ಆಹಾರ ಸಿಕ್ಕಿತು ಅನ್ನೋ ಹಾಗೆ ಬಾಯಲ್ಲಿ ಚಪ್ಪಲಿಯನ್ನು ಹಿಡಿದು ವೇಗವಾಗಿ ಹೋಗಿದೆ. ಈ ವಿಡಿಯೋ ಹಲವಾರು ನೋಡುಗರನ್ನು ಸೆಳೆದಿದೆ.

Slipper Thief Snake: snake stealing slippers video has gone viral

ವಿಡಿಯೊ 150 ಸಾವಿರ ವೀಕ್ಷಣೆಗಳನ್ನು ಮತ್ತು 4,900 ಲೈಕ್‌ಗಳನ್ನು ಪಡೆದುಕೊಂಡಿದೆ. ನೆಟಿಜನ್‌ಗಳು ಈ ಅಸಾಮಾನ್ಯ ದೃಶ್ಯವನ್ನು ಉಲ್ಲಾಸದಾಯಕವೆಂದು ಕೊಂಡಾಡಿದ್ದಾರೆ. ಜೊತೆಗೆ ಹಾಸ್ಯಗಳೊಂದಿಗೆ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ವಿಡಿಯೋ ಎಲ್ಲಿಯದ್ದು ಎನ್ನುವ ಬಗ್ಗೆ ಮಾಹಿತಿ ಇಲ್ಲ. ಆದರೆ "ವಿಡಿಯೋದಲ್ಲಿ ಕೇಳಿಸುವ ಆಡುಭಾಷೆ ಭೋಜ್‌ಪುರಿ ಅಥವಾ ಬಿಹಾರವಾಗಿರಬೇಕು" ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಕ್ರೈಮ್ ಮಾಸ್ಟರ್ ಗೋಗೋ," ಎಂದು ಬರೆದಿದ್ದಾರೆ.

English summary
A video of a snake stealing slippers has gone viral. Learn more about this video.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X