ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್.ಎಸ್.ಎಸ್ ಮಹಿಳಾ ವಿರೋಧಿ: ರಾಹುಲ್ ಗಾಂಧಿ

By Sachhidananda Acharya
|
Google Oneindia Kannada News

ಶಿಲ್ಲಾಂಗ್, ಜನವರಿ 31: ಮೇಘಾಲಯದಲ್ಲಿ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರ್.ಎಸ್.ಎಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎರಡೂ ಸಂಘಟನೆಗಳು ರಾಷ್ಟ್ರದಾದ್ಯಂತ ತಮ್ಮ ಸಿದ್ಧಾಂತವನ್ನು ಹರಡುತ್ತಿವೆ ಎಂದು ಹರಿಹಾಯ್ದಿದ್ದಾರೆ.

ಸೈಂಟ್ ಎಡ್ಮುಂಡ್ ಕಾಲೇಜ್ ನಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, "ನಾವು ಆರ್.ಎಸ್.ಎಸ್ ಸಿದ್ಧಾಂತದ ವಿರುದ್ಧ ದೇಶದಾದ್ಯಂತ ಹೋರಾಡುತ್ತಿದ್ದೇವೆ. ದೇಶದ ಮೇಲೆ ಒಂದೇ ರೀತಿಯ ಆಲೋಚನೆಯನ್ನು ಇವುಗಳು ಹೇರುತ್ತಿದೆ. ದೇಶದಾದ್ಯಂತ ಅದರಲ್ಲೂ ಮುಖ್ಯವಾಗಿ ಈಶಾನ್ಯ ರಾಜ್ಯಗಳಲ್ಲಿ ಆರ್.ಎಸ್.ಎಸ್ ಮತ್ತು ಬಿಜೆಪಿ ನಿಮ್ಮ ಸಂಸ್ಕೃತಿ, ನಿಮ್ಮ ಭಾಷೆ ಮತ್ತು ಜೀವನ ಕ್ರಮವನ್ನು ಹಾಳು ಮಾಡುತ್ತಿವೆ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹರಿದ ಕುರ್ತಾದಿಂದ 70,000 ರೂ. ಜಾಕೆಟ್ ವರೆಗೆ ರಾಹುಲ್ ಸ್ಥಿತ್ಯಂತರ!ಹರಿದ ಕುರ್ತಾದಿಂದ 70,000 ರೂ. ಜಾಕೆಟ್ ವರೆಗೆ ರಾಹುಲ್ ಸ್ಥಿತ್ಯಂತರ!

ಇದೇ ವೇಳೆ ಮೇಘಾಲಯದಲ್ಲಿ ಬಿಜೆಪಿ ಸರಕಾರ ರಚನೆಯಾದರೆ ರಾಜ್ಯದ ಸಂಸ್ಕೃತಿ, ಧರ್ಮ ಮತ್ತು ಜೀವನ ಕ್ರಮಕ್ಕೇ ಆತಂಕ ತಂದೊಡ್ಡಲಿದೆ ಎಂದು ಅವರು ಹೇಳಿದ್ದಾರೆ. ಮಹಿಳೆಯರನ್ನು ಅಶಕ್ತಗೊಳಿಸುವುದು ಮತ್ತು ಪುರುಷರಿಗೆ ಹೆಚ್ಚು ಶಕ್ತಿ ನೀಡುವುದೇ ಆರ್.ಎಸ್.ಎಸ್ ಉದ್ದೇಶವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

RSS is anti women, says Rahul Gandhi

"ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ಪ್ರಮುಖ ಸ್ಥಾನವಿದೆ. ನೀತಿ ನಿರ್ಧಾರಗಳಲ್ಲಿ ಅವರು ಪ್ರಮುಖ ಜವಾಬ್ದಾರಿ ವಹಿಸುತ್ತಾರೆ. ಆದರೆ ಆರ್.ಎಸ್.ಎಸ್ ಗೆ ಮಹಿಳೆಯರ ಶಕ್ತಿಯ ಬಗ್ಗೆ ನಂಬಿಕೆ ಇಲ್ಲ. ಆರ್.ಎಸ್.ಎಸ್ ಸಮಾಜದಲ್ಲಿ ಭಯವಿಲ್ಲದೇ ಪ್ರಾಬಲ್ಯ ಸಾಧಿಸಲು ಪುರುಷರಿಗೆ ಹೆಚ್ಚು ಶಕ್ತಿ ನೀಡುತ್ತಿದೆ," ಎಂದು ವಾಗ್ದಾಳಿ ನಡೆಸಿದ್ದಾರೆ.

"ಮಹಿಳೆಯರನ್ನು ಅಶಕ್ತಗೊಳಿಸುವುದೇ ಆರ್.ಎಸ್.ಎಸ್ ಉದ್ದೇಶ. ಆರ್.ಎಸ್.ಎಸ್ ನಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನಗಳನ್ನು ನೀಡಿದ್ದು ಯಾರಿಗಾದರೂ ಗೊತ್ತಿದೆಯಾ? ಒಂದೊಮ್ಮೆ ನೀವು ಮಹಾತ್ಮಾ ಗಾಂಧಿಯವರ ಚಿತ್ರ ನೋಡಿದರೆ ಬಲಭಾಗ ಮತ್ತು ಎಡಭಾಗದಲ್ಲಿ ಮಹಿಳೆಯರು ಕಾಣಿಸುತ್ತಾರೆ. ಆದರೆ ಮೋಹನ್ ಭಾಗವತ್ ಚಿತ್ರ ನೋಡಿದರೆ ಅವರು ಒಬ್ಬರೇ ಇರುತ್ತಾರೆ ಅಥವಾ ಸುತ್ತಮುತ್ತ ಪುರುಷರೇ ಇರುತ್ತಾರೆ," ಎಂದು ರಾಹುಲ್ ಟೀಕಿಸಿದ್ದಾರೆ.

ಫೆಬ್ರವರಿ 27ರಂದು ನಾಗಲ್ಯಾಂಡ್ ಜತೆಗೆ 60 ಸದಸ್ಯ ಬಲದ ಮೇಘಾಲಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಮಾರ್ಚ್ 3ರಂದು ಫಲಿತಾಂಶ ಹೊರ ಬೀಳಲಿದೆ.

English summary
Ahead of the upcoming Assembly elections in Meghalaya, the Congress President claimed that the RSS was only interested in disempowering women and giving more power to men.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X