ಹರಿದ ಕುರ್ತಾದಿಂದ 70,000 ರೂ. ಜಾಕೆಟ್ ವರೆಗೆ ರಾಹುಲ್ ಸ್ಥಿತ್ಯಂತರ!

ಶಿಲ್ಲಾಂಗ್, ಜನವರಿ 31: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಏನ್ ಮಾಡಿದ್ರೂ ಸುದ್ದಿ! ಅಪನಗದೀಕರಣದ ಸಮಯದಲ್ಲಿ ತಮ್ಮ ಹರಿದ ಕುರ್ತಾ ತೋರಿಸಿ ಸುದ್ದಿಯಾಗಿದ್ದ ರಾಹುಲ್ ಗಾಂಧಿ, ಇದೀಗ 17,000ರೂ ಜಾಕೆಟ್ ಧರಿಸಿ ಸುದ್ದಿಯಾಗಿದ್ದಾರೆ! ಬರೀ ಸುದ್ದಿಯಲ್ಲ, ಲೇವಡಿಯಾಗಿದ್ದಾರೆ!

2015 ರಲ್ಲಿ ಅಮೆರಿಕದ ಅಂದಿನ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಭೇಟಿಯಾಗುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಧರಿಸಿದ್ದ ದುಬಾರಿ ಸೂಟಿನ ಕುರಿತು ಸ್ವತಃ ರಾಹುಲ್ ಗಾಂಧಿ ಗೇಲಿ ಮಾಡಿದ್ದರು. ಇದು ಸೂಟ್ ಬೂಟ್ ಸರ್ಕಾರ, ಜನಸಾಮಾನ್ಯರಿಗಲ್ಲ ಎಂದಿದ್ದರು.

ಆದರೆ ಮೇಘಾಲಯದಲ್ಲಿ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ ತೊಟ್ಟಿದ್ದ ಜಾಕೆಟ್ ಸರಿ ಸುಮಾರು 70,000 ರೂ. ಬೆಲೆ ಬಾಳುವ ದುಬಾರಿ ಬ್ರಿಟಿಶ್ ಬ್ರ್ಯಾಂಡ್ ನದ್ದು! ಈ ಕುರಿತು ಟ್ವಿಟ್ಟರ್ ನಲ್ಲೂ ಸಾಕಷ್ಟು ಜನ ರಾಹುಲ್ ಕಾಲೆಳೆದಿದ್ದಾರೆ.

ಇದು ಅಚ್ಚೇ ದಿನ ಅಲ್ಲವೇ?

ಅಚ್ಚೇ ದಿನ್? ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಭಾರತದ ಅರ್ಥವ್ಯವಸ್ಥೆ ಸುಧಾರಿಸುತ್ತಿದೆ ಎಂಬುದರ ಲಕ್ಷಣವಲ್ಲವೆ ಇದು? ಹರಿದ ಖುರ್ತಾ ದಿಂದ ದುಬಾರಿ ಡಿಸೈನರ್ ಜಾಕೆಟ್ ಧರಿಸುವ ಮಟ್ಟಿಗೆ ನೀವು ಬದಲಾಗಿದ್ದೀರಿ. ಅಥವಾ ಆ ಹರಿದ ಖುರ್ತಾ ಕೇವಲ ನಾಟಕವಾಗಿತ್ತೆ..?! ಎಂದು ಪ್ರಶ್ನಿಸಿದ್ದಾರೆ ಕಾಂಗ್ರೆಸ್ ಬಂಡಾಯ ಮುಖಂಡ ಷೆಹ್ಜಾದ್ ಪೂನಾವಾಲ.

Array

ನಾವು ಯಾವ ಜಗತ್ತಿನಲ್ಲಿದ್ದೇವೆ?

ಮೋದಿಜೀ ಮತ್ತವರ ಪಕ್ಷಕ್ಕೆ ರಾಹುಲ್ ಗಾಂಧಿಯವರ ಜಾಕೇಟ್ ಮೇಲೇ ಕಣ್ಣು. ಇಡೀ ಮಾಧ್ಯಮ ಜಗತ್ತೂ ಈ ಉಪಯೋಗವಿಲ್ಲದ ವಿಷಯದ ಬಗ್ಗೆ ಮಾತನಾಡುತ್ತಿದೆ. ನಾವೆಂಥ ಜಗತ್ತಿನಲ್ಲಿ ಬದುಕುತ್ತಿದ್ದೇವೆ ಎಂದು ವಿಷಾದದಿಂದ ಪ್ರಶ್ನಿಸಿದ್ದಾರೆ ಬಬಿತಾ!

ರಾಹುಲ್ ಬಾಬಾ ಮ್ಯಾಜಿಕ್ ಮಾಡ್ತಾರೆ!

ನಿಮಗೆ ಗೊತ್ತಾ ರಾಹುಲ್ ಬಾಬಾ 70,000 ರೂ ಜಾಕೆಟ್ ತೊಡೋಕೆ ಶಕ್ತರು. ಅವರು ಆಲೂಗಡ್ಡೆಯನ್ನು ಚಿನ್ನವನ್ನಾಗಿ ಬದಲಿಸಬಲ್ಲರು ಎಂದು ಲೇವಡಿ ಮಾಡಿದ್ದಾರೆ ನೀತು ಗಾರ್ಗ್!

ಜನರನ್ನು ಮೂರ್ಖರನ್ನಾಗಿಸೋದು ಅಂದ್ರೆ ಹೀಗೇನಾ?

ಜನರನ್ನು ಮೂರ್ಖರನ್ನಾಗಿಸೋದು ಹೇಗೆ ಎಂಬುದನ್ನು ರಾಹುಲ್ ಗಾಂಧಿಯವರನ್ನು ಕೇಳಿ ತಿಳಿಯಬೇಕು. ಬಹುಶಃ ಅದನ್ನೂ ಅವರು ತಮ್ಮ ಪೂರ್ವಜರಿಂದ ಪಡೆದಿರಬೇಕು! ಕೆಲವೊಮ್ಮೆ ಅವರು ಹರಿದ ಜುಬ್ಬಾ ಧರಿಸುತ್ತಾರೆ, ಆಗ ಮೋದಿಯವರ ಮೇಲೆ ಮಾತಿನ ದಾಳಿ ನಡೆಸುತ್ತಾರೆ. ಆಮೇಲೆ ದುಬಾರಿ ಬರ್ಬೆರಿ ಜಾಕೆಟ್ ಧರಿಸುತ್ತಾರೆ ಎಂದಿದ್ದಾರೆ ಬಸವರಾಜ.

ದುಬಾರಿ ಜಾಕೆಟ್ ಧರಿಸಿದರೆ ತಪ್ಪೇನು?

ಒಬ್ಬ ಕೋಟ್ಯಾಧಿಪತಿ, ಕೆಲವು ಸಾವಿರ ರೂ. ಬೆಲೆ ಬಾಳುವ ಜಾಕೆಟ್ ಧರಿಸಿದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ ರಾಜೀವ್ ಶಾಸ್ತ್ರಿ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+