Karnataka Weather: ಹಗಲಿನಲ್ಲಿ ಸುಡು ಬಿಸಿಲು, ರಾತ್ರಿ ಮೈಕೊರೆವ ಚಳಿ; ನಿಮ್ಮೂರಿನ ಇಂದಿನ ಹವಾಮಾನ ಇಲ್ಲಿದೆ

ಬೆಂಗಳೂರು: ರಾಜ್ಯಾದ್ಯಂತ ಇದೀಗ ನವೆಂಬರ್ ತಿಂಗಳ ಚಳಿ ತನ್ನ ಪ್ರಭಾವವನ್ನ ತೀವ್ರಗೊಳಿಸುತ್ತಿದೆ. ಬುಧವಾರ, ನವೆಂಬರ್ 18, 2026ರ ಇಂದಿನ ಕರ್ನಾಟಕ ಹವಾಮಾನ ವರದಿ ಗಮನಿಸುವುದಾದರೆ, ರಾಜ್ಯದಾದ್ಯಂತ ಚಳಿಯ ವಾತಾವರಣ ಮುಂದುವರಿದಿದೆ.

ಹಗಲಿನಲ್ಲಿ ಬಹುತೇಕ ಒಣ ಹವೆ ಇರಲಿದ್ದು, ರಾತ್ರಿಯಾಗುತ್ತಿದ್ದಂತೆ ತಾಪಮಾನವು ಭಾರಿ ಪ್ರಮಾಣದಲ್ಲಿ ಕುಸಿಯುತ್ತಿದೆ. ಪ್ರಮುಖವಾಗಿ ಕೆಲವು ಸ್ಥಳಗಳಲ್ಲಿ ರಾತ್ರಿಯ ಉಷ್ಣಾಂಶವು ಸಾಮಾನ್ಯಕ್ಕಿಂತ -4 ಡಿಗ್ರಿಯಿಂದ -6 ಡಿಗ್ರಿ ಸೆಲ್ಸಿಯಸ್‌ವರೆಗೆ ದಿಢೀರ್ ಕುಸಿತ ಕಂಡಿದೆ. ಇದು ರಾಜ್ಯದ ಜನತೆಗೆ ಚಳಿಯ ಅನುಭವವನ್ನು ನೀಡುತ್ತಿದೆ ಹಾಗೂ ಮುಂಜಾನೆಯ ಮಂಜು ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ.

Karnataka Weather Report Nov 18 2026 Winter Chills Grip State Temp Drops Below Normal Bengaluru Cool

ಉತ್ತರ ಕರ್ನಾಟಕ ಹಾಗೂ ಮಲೆನಾಡು ಹವಾಮಾನದಲ್ಲಿ ಬದಲಾವಣೆ

ರಾಜ್ಯದಲ್ಲಿ ಪ್ರಸ್ತುತ ಒಣಹವೆ ಹಾಗೂ ಚಳಿ ಮುಂದುವರಿಯಲಿವೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ವಿಶೇಷವಾಗಿ ಉತ್ತರ ಕರ್ನಾಟಕ ಮತ್ತು ಮಲೆನಾಡು ಭಾಗಗಳಲ್ಲಿ ರಾತ್ರಿಯ ಕನಿಷ್ಠ ತಾಪಮಾನವು ಸಾಮಾನ್ಯ ಮಟ್ಟಕ್ಕಿಂತ -2 ಡಿಗ್ರಿಯಿಂದ -5 ಡಿಗ್ರಿ ಸೆಲ್ಸಿಯಸ್‌ವರೆಗೆ ಕುಸಿಯುವ ಸಾಧ್ಯತೆಯಿದೆ.

ಅದೇ ರೀತಿ, ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಕೂಡ ರಾತ್ರಿಯ ತಾಪಮಾನವು ಸಾಮಾನ್ಯಕ್ಕಿಂತ -1 ಡಿಗ್ರಿಯಿಂದ -4 ಡಿಗ್ರಿ ಸೆಲ್ಸಿಯಸ್‌ವರೆಗೆ ಕುಸಿಯಲಿದ್ದು, ಚಳಿಯ ತೀವ್ರತೆ ಇನ್ನಷ್ಟು ಹೆಚ್ಚಾಗಲಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಮುಂಬರುವ ದಿನಗಳಲ್ಲಿ ಮಲೆನಾಡಿನಲ್ಲಿ ಮಾತ್ರವಲ್ಲದೆ ಇಡೀ ಕರುನಾಡಿನಲ್ಲಿ ಚಳಿಯ ಪ್ರಮಾಣ ಕಡಿಮೆಯಾಗುವ ಯಾವುದೇ ಲಕ್ಷಣಗಳಿಲ್ಲ.

Karnataka Weather: ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಪರಿಣಾಮ ನವೆಂಬರ್ 20ರಿಂದ ರಾಜ್ಯದ ಈ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ
Karnataka Weather: ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಪರಿಣಾಮ ನವೆಂಬರ್ 20ರಿಂದ ರಾಜ್ಯದ ಈ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ

ದುರ್ಬಲಗೊಂಡ ಅಕ್ವಾನ್ ಸಿಸ್ಟಮ್

ಬಂಗಾಳಕೊಲ್ಲಿಯಲ್ಲಿನ ಹವಾಮಾನ ವೈಪರೀತ್ಯಗಳ ಕುರಿತು ಗಮನಹರಿಸುವುದಾದರೆ, ದಕ್ಷಿಣ-ಮಧ್ಯ ಬಂಗಾಳಕೊಲ್ಲಿಯಲ್ಲಿ ನಿರ್ಮಾಣವಾಗಿದ್ದ 'ಅಕ್ವಾನ್' ಹೆಸರಿನ ಹವಾಮಾನ ಪರಿಚಲನೆಯು ಚೆನ್ನೈನಿಂದ ಪೂರ್ವಕ್ಕೆ ಸುಮಾರು 600 ಕಿಲೋಮೀಟರ್ ದೂರದಲ್ಲಿ ಸ್ಥಗಿತಗೊಂಡಿದೆ.

ಇದು ಮುಂದಿನ ದಿನಗಳಲ್ಲಿ ವಾಯುವ್ಯ ದಿಕ್ಕಿನತ್ತ ನಿಧಾನವಾಗಿ ಚಲಿಸುವ ನಿರೀಕ್ಷೆಯಿದೆ. ಅರಬ್ಬಿ ಸಮುದ್ರ, ಕಡಲ ಖಂಡ (Maritime continent) ಮತ್ತು ಉತ್ತರ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಅಧಿಕ ಒತ್ತಡದ ವಲಯವು ಈ ಪರಿಚಲನೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದ್ದು, ಅದನ್ನು ದುರ್ಬಲಗೊಳಿಸುತ್ತಿದೆ.

ಪ್ರಸ್ತುತ ಇದು ಕೇವಲ ಒಂದು ವಾಯುಭಾರ ಕುಸಿತದಂತೆ ಕಾಣಿಸುತ್ತಿದೆ. ಇದು ಆಂಧ್ರಪ್ರದೇಶದ ಕರಾವಳಿಯನ್ನ ತಲುಪಲಿದೆಯೇ ಅಥವಾ ಸಮುದ್ರದಲ್ಲೇ ಕರಗಿಹೋಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ರಾಜ್ಯದಲ್ಲಿ ಈ ಜಿಲ್ಲೆಗಳಲ್ಲಿ ನವೆಂಬರ್ 20ರ ವರೆಗೂ ಭಾರಿ ಮಳೆ ಮುನ್ಸೂಚನೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ರಾಜ್ಯದಲ್ಲಿ ಈ ಜಿಲ್ಲೆಗಳಲ್ಲಿ ನವೆಂಬರ್ 20ರ ವರೆಗೂ ಭಾರಿ ಮಳೆ ಮುನ್ಸೂಚನೆ

16.8 ಡಿಗ್ರಿಗೆ ಕುಸಿದ ಬೆಂಗಳೂರು ಹವಾಮಾನ

ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಚಳಿಯ ಅಬ್ಬರ ಜೋರಾಗಿದೆ. ನಿನ್ನೆ ರಾತ್ರಿ ನಗರದ ಉಷ್ಣಾಂಶವು ಮತ್ತೆ 17 ಡಿಗ್ರಿ ಸೆಲ್ಸಿಯಸ್‌ಗಿಂತ ಕೆಳಗೆ ಕುಸಿದಿದ್ದು, ಕೇವಲ 16.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬೆಂಗಳೂರಿನಲ್ಲಿ ಕಳೆದ 5 ದಿನಗಳ ಕನಿಷ್ಠ ತಾಪಮಾನದ ಅಂಕಿ-ಅಂಶಗಳನ್ನ ಗಮನಿಸಿದರೆ, ನಗರದಲ್ಲಿ ಕ್ರಮವಾಗಿ 16.3°C, 18.1°C, 18.8°C, 17.4°C ಹಾಗೂ ನಿನ್ನೆ 16.8°C ದಾಖಲಾಗಿದೆ.

ಮುಂಬರುವ ದಿನಗಳಲ್ಲೂ, ಅಂದರೆ ಇಂದಿನ ರಾತ್ರಿಯೂ ಇದೇ ರೀತಿಯ ಚಳಿಯ ಹವಾಮಾನ ಮುಂದುವರಿಯುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ಚಳಿಯ ತೀವ್ರತೆ ಹೆಚ್ಚಿರುವುದರಿಂದ ಮಕ್ಕಳು ಹಾಗೂ ವಯೋವೃದ್ಧರು ಸೂಕ್ತ ಬೆಚ್ಚಗಿನ ಉಡುಪುಗಳನ್ನು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+