PM Vidya Lakshmi Yojana: ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ವಿದ್ಯಾಲಕ್ಷ್ಮಿ ಯೋಜನೆಯಡಿ ಸಾಲ
ನವದೆಹಲಿ: ಎಷ್ಟೋ ಬಾರಿ ಮನೆಯಲ್ಲಿ ಬಡತನವಿದೆ ಎಂಬ ಒಂದೇ ಕಾರಣಕ್ಕೆ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣದ ಕನಸಿಗೆ ಅರ್ಧದಲ್ಲೇ ತಿಲಾಂಜಲಿ ಇಡುತ್ತಾರೆ. ಇಂಜಿನಿಯರಿಂಗ್, ಮೆಡಿಕಲ್ ಅಥವಾ ಮ್ಯಾನೇಜ್ಮೆಂಟ್ನಂತಹ ಕೋರ್ಸ್ಗಳನ್ನು ಮಾಡಬೇಕೆಂಬ ಆಸೆ ಇದ್ದರೂ, ಲಕ್ಷಾಂತರ ರೂಪಾಯಿ ಫೀಸ್ ಕಟ್ಟಲಾಗದೆ ಹಿಂಜರಿಯುತ್ತಾರೆ. ಇಂತಹ ವಿದ್ಯಾರ್ಥಿಗಳ ನೆರವಿಗೆಂದೇ ಕೇಂದ್ರ ಸರ್ಕಾರವು ಮಹತ್ವದ ಯೋಜನೆಯೊಂದನ್ನು ಜಾರಿಗೆ ತಂದಿದೆ. ಅದೇ "ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆ" (PM Vidya Lakshmi Yojana).
ಈ ಯೋಜನೆಯು ಈಗ ಚಾಲ್ತಿಯಲ್ಲಿದ್ದು, 2024-25 ರಿಂದ 2030-31ರ ಅವಧಿಗೆ ಸರ್ಕಾರ ಬರೋಬ್ಬರಿ 3,600 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಸುಮಾರು 22 ಲಕ್ಷ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದ್ದು, 7 ಲಕ್ಷ ಹೊಸ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ.

ಏನಿದು ಪಿಎಂ ವಿದ್ಯಾಲಕ್ಷ್ಮಿ ಯೋಜನೆ?
ಸರಳವಾಗಿ ಹೇಳುವುದಾದರೆ, ಇದು ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಯಾವುದೇ ಅಡಮಾನ ಅಥವಾ ಜಾಮೀನುದಾರರ ಅಗತ್ಯವಿಲ್ಲದೆ ಸುಲಭವಾಗಿ ಸಾಲ ಒದಗಿಸುವ ವ್ಯವಸ್ಥೆ. ಕೇವಲ ಸಾಲವಷ್ಟೇ ಅಲ್ಲ, ಕುಟುಂಬದ ಆದಾಯಕ್ಕೆ ಅನುಗುಣವಾಗಿ ಸಾಲದ ಮೇಲಿನ ಬಡ್ಡಿಯಲ್ಲಿ ಭಾರಿ ರಿಯಾಯಿತಿಯನ್ನೂ ಸರ್ಕಾರ ನೀಡುತ್ತದೆ.
ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಹಣಕಾಸಿನ ತೊಂದರೆಯಿಂದ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ಈ ಯೋಜನೆಯ ಮುಖ್ಯ ಉದ್ದೇಶ.
ಯಾರಿಗೆ ಎಷ್ಟು ಲಾಭ?
ಈ ಯೋಜನೆಯಲ್ಲಿ ಆದಾಯದ ಮಿತಿಯ ಆಧಾರದ ಮೇಲೆ ಎರಡು ರೀತಿಯ ಲಾಭಗಳಿವೆ:
1.) 4.5 ಲಕ್ಷ ರೂ.ಗಿಂತ ಕಡಿಮೆ ಆದಾಯ ಇರುವವರಿಗೆ: ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ 4.5 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇದ್ದರೆ, ಅವರು ಪಡೆಯುವ ಶಿಕ್ಷಣ ಸಾಲಕ್ಕೆ ಸಂಪೂರ್ಣ ಬಡ್ಡಿ ರಿಯಾಯಿತಿ (100% Interest Subvention) ಸಿಗುತ್ತದೆ. ಅಂದರೆ, ಕೋರ್ಸ್ ಮುಗಿಯುವವರೆಗಿನ ಬಡ್ಡಿಯನ್ನು ಸರ್ಕಾರವೇ ಭರಿಸುತ್ತದೆ. ಇದು ಪಿಎಂ-ಯುಎಸ್ಪಿ ಸಿಎಸ್ಐಎಸ್ ಯೋಜನೆಯಡಿ ಬರುತ್ತದೆ.
2.) 4.5 ಲಕ್ಷದಿಂದ 8 ಲಕ್ಷ ರೂ. ಆದಾಯ ಇರುವವರಿಗೆ: ಕುಟುಂಬದ ವಾರ್ಷಿಕ ಆದಾಯ 4.5 ಲಕ್ಷ ರೂ.ಗಿಂತ ಹೆಚ್ಚಿದ್ದು, 8 ಲಕ್ಷ ರೂ. ಒಳಗಿದ್ದರೆ, ಅಂತಹ ವಿದ್ಯಾರ್ಥಿಗಳಿಗೆ 10 ಲಕ್ಷ ರೂಪಾಯಿವರೆಗಿನ ಸಾಲದ ಮೇಲೆ ಶೇ. 3 ರಷ್ಟು ಬಡ್ಡಿ ಸಹಾಯಧನ (3% Interest Subsidy) ಸಿಗುತ್ತದೆ.
3.) 7.5 ಲಕ್ಷ ರೂ. ಸಾಲಕ್ಕೆ ಗ್ಯಾರಂಟಿ: ಯಾವುದೇ ಆದಾಯ ಮಿತಿಯಿಲ್ಲದೆ, ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ 7.5 ಲಕ್ಷ ರೂಪಾಯಿವರೆಗಿನ ಸಾಲಕ್ಕೆ ಸರ್ಕಾರವೇ ಶೇ. 75 ರಷ್ಟು ಕ್ರೆಡಿಟ್ ಗ್ಯಾರಂಟಿ ನೀಡುತ್ತದೆ. ಇದರಿಂದ ಬ್ಯಾಂಕುಗಳು ವಿದ್ಯಾರ್ಥಿಗಳಿಗೆ ಹಿಂದೇಟು ಹಾಕದೆ ಸಾಲ ನೀಡಲು ಸಾಧ್ಯವಾಗುತ್ತದೆ.
ಅರ್ಹತೆಗಳೇನು?
1) ವಿದ್ಯಾರ್ಥಿಯು ಭಾರತೀಯ ಪ್ರಜೆಯಾಗಿರಬೇಕು.
2) NIRF ಶ್ರೇಯಾಂಕ (Ranking) ಪಡೆದ ದೇಶದ ಉನ್ನತ 860 ಗುಣಮಟ್ಟದ ಶಿಕ್ಷಣ ಸಂಸ್ಥೆಗಳಲ್ಲಿ ಮೆರಿಟ್ ಆಧಾರದ ಮೇಲೆ ಪ್ರವೇಶ ಪಡೆದಿರಬೇಕು. (ಸರ್ಕಾರಿ ಮತ್ತು ಖಾಸಗಿ ಎರಡೂ ಸಂಸ್ಥೆಗಳು ಇದರಲ್ಲಿ ಸೇರಿವೆ).
3) ವಿದ್ಯಾರ್ಥಿಯು ಬೇರೆ ಯಾವುದೇ ಸರ್ಕಾರಿ ಸ್ಕಾಲರ್ಶಿಪ್ ಅಥವಾ ಬಡ್ಡಿ ರಿಯಾಯಿತಿ ಯೋಜನೆಯ ಲಾಭ ಪಡೆಯುತ್ತಿರಬಾರದು.
4) ಶೈಕ್ಷಣಿಕ ಕಾರಣಗಳಿಂದ ಅಥವಾ ಶಿಸ್ತು ಕ್ರಮದಿಂದ ಕಾಲೇಜು ಅರ್ಧಕ್ಕೆ ಬಿಟ್ಟವರು ಇದಕ್ಕೆ ಅರ್ಹರಲ್ಲ.
ಅರ್ಜಿ ಸಲ್ಲಿಸುವುದು ಹೇಗೆ?
1) ವಿದ್ಯಾರ್ಥಿಗಳು ಬ್ಯಾಂಕ್ಗಳಿಗೆ ಅಲೆದಾಡುವ ಅಗತ್ಯವಿಲ್ಲ. ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲ್ ಮತ್ತು ಪಾರದರ್ಶಕಗೊಳಿಸಲಾಗಿದೆ.
2) ಅಧಿಕೃತ ಪೋರ್ಟಲ್ pmvidyalaxmi.co.in (ಅಥವಾ ಇಲಾಖೆಯ ಅಧಿಕೃತ ವೆಬ್ಸೈಟ್) ಗೆ ಭೇಟಿ ನೀಡಿ.
3)ವಿದ್ಯಾರ್ಥಿ ಲಾಗಿನ್ ಮೂಲಕ ನೋಂದಾಯಿಸಿಕೊಳ್ಳಿ.
4)ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ.
5) ಈ ಯೋಜನೆಯು ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಗ್ರಾಮೀಣ ಬ್ಯಾಂಕ್ಗಳೊಂದಿಗೆ ಸಂಯೋಜನೆಗೊಂಡಿದೆ.
6)ಬಡ್ಡಿ ಸಹಾಯಧನದ ಮೊತ್ತವನ್ನು ನೇರವಾಗಿ ವಿದ್ಯಾರ್ಥಿಯ ಇ-ವೋಚರ್ (E-voucher) ಅಥವಾ ಸಿಬಿಡಿಸಿ ವಾಲೆಟ್ಗೆ ವರ್ಗಾಯಿಸಲಾಗುತ್ತದೆ.
ಅರ್ಜಿಗೆ ಬೇಕಾಗುವ ದಾಖಲೆಗಳು
1.) ಅರ್ಜಿ ಸಲ್ಲಿಸುವ ಮುನ್ನ ಈ ಕೆಳಗಿನ ದಾಖಲೆಗಳನ್ನು ಸಿದ್ಧವಿಟ್ಟುಕೊಳ್ಳಿ:
2.) ಆಧಾರ್ ಕಾರ್ಡ್ / ಪಾನ್ ಕಾರ್ಡ್ / ಪಾಸ್ಪೋರ್ಟ್ (ಗುರುತಿನ ಚೀಟಿ)
3.) ರೇಷನ್ ಕಾರ್ಡ್ / ವಿದ್ಯುತ್ ಬಿಲ್ (ವಿಳಾಸದ ಪುರಾವೆ)
4.)10ನೇ ತರಗತಿ ಅಂಕಪಟ್ಟಿ (ಜನ್ಮ ದಿನಾಂಕಕ್ಕಾಗಿ)
5.) 10ನೇ ಮತ್ತು 12ನೇ ತರಗತಿ ಅಂಕಪಟ್ಟಿಗಳು ಹಾಗೂ ಪದವಿ ಪ್ರಮಾಣಪತ್ರಗಳು (ಅನ್ವಯವಾದರೆ)
6.) ಕಾಲೇಜಿನ ಪ್ರವೇಶ ಪತ್ರ ಮತ್ತು ಶುಲ್ಕದ ವಿವರ
7.) ಆದಾಯ ಪ್ರಮಾಣ ಪತ್ರ
8.) ಬ್ಯಾಂಕ್ ಪಾಸ್ಬುಕ್ ವಿವರ
9.) ಪಾಸ್ಪೋರ್ಟ್ ಅಳತೆಯ ಭಾವಚಿತ್ರ.
10.)ಬೇರೆ ಯಾವುದೇ ಯೋಜನೆಯ ಲಾಭ ಪಡೆಯುತ್ತಿಲ್ಲ ಎಂದು ಸ್ವಯಂ ಘೋಷಣೆ
ಉನ್ನತ ಶಿಕ್ಷಣ ನಿಮ್ಮ ಹಕ್ಕು. ಹಣವಿಲ್ಲ ಎಂಬ ಕಾರಣಕ್ಕೆ ಕನಸುಗಳನ್ನು ಕಮರಲು ಬಿಡಬೇಡಿ. ಇಂದೇ ಪಿಎಂ ವಿದ್ಯಾಲಕ್ಷ್ಮಿ ಪೋರ್ಟಲ್ನಲ್ಲಿ ಪರಿಶೀಲಿಸಿ ಮತ್ತು ಅರ್ಜಿ ಸಲ್ಲಿಸಿ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
SSLC ಪರೀಕ್ಷೆಗೆ ಹಾಜರಾತಿ ಶಾಕ್: ನಿಯಮ ಉಲ್ಲಂಘಿಸಿದ 35,000 ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತ -
ಹನುಮ ಜಯಂತಿ ಮುನ್ನವೇ ಅಯೋಧ್ಯೆಗೆ ಗೌತಮ್ ಅದಾನಿ ಭೇಟಿ: ಪ್ರಾಚೀನ ಗುರುಕುಲಕ್ಕೆ AI ಲ್ಯಾಬ್ ಘೋಷಣೆ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ?












Click it and Unblock the Notifications