MM Naravane: ಫೋರ್ ಸ್ಟಾರ್ ಆಫ್ ಡೆಸ್ಟಿನಿ ಪುಸ್ತಕದ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸೇನೆಯ ಮಾಜಿ ಮುಖ್ಯಸ್ಥ ಎಂ.ಎಂ. ನರವಣೆ
MM Naravane: ಭಾರತ - ಚೀನಾ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಮಹತ್ವದ ವಿಷಯಗಳನ್ನು ಒಳಗೊಂಡಿದೆ ಎನ್ನಲಾದ ಫೋರ್ ಸ್ಟಾರ್ ಆಫ್ ಡೆಸ್ಟಿನಿ ಪುಸ್ತಕದ ಬಗ್ಗೆ ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಎಂ.ಎಂ. ನರವಣೆ ಅವರು ಮಹತ್ವದ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ಪುಸ್ತಕವನ್ನು ನಾವು ಬಿಡುಗಡೆಯೇ ಮಾಡಿಲ್ಲ ಎಂದು ಪೆಂಗ್ವಿನ್ ಸಂಸ್ಥೆ ಹೇಳಿತ್ತು. ಇದೀಗ ಈ ವಿಷಯದ ಬಗ್ಗೆ ಮಹತ್ವದ ಟ್ವೀಟ್ ಮಾಡಿದ್ದು, ಈ ಪುಸ್ತಕದ ಸ್ಟೇಟಸ್ ಇದು ಎಂದು ಎಂ.ಎಂ ನರವಣೆ ಅವರು ಹೇಳಿದ್ದಾರೆ.
ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾದಿಂದ ನೀಡಲಾಗಿದ್ದ ವಿವರಣೆಯನ್ನು ನರವಣೆ ಅವರು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಪೆಂಗ್ವಿನ್ ಪುಸ್ತಕ ಪ್ರಕಾಶನ ಸಂಸ್ಥೆಯು, ಜನರಲ್ ಮನೋಜ್ ಮುಕುಂದ್ ನರವಣೆ ಅವರ ಫೋರ್ ಸ್ಟಾರ್ ಆಫ್ ಡೆಸ್ಟಿನಿ ಕುರಿತು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಹೇಳಿಕೆ. ಇತ್ತೀಚಿನ ಸಾರ್ವಜನಿಕ ಭಾಷಣ ಮತ್ತು ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ, ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಅವರ ಆತ್ಮಚರಿತ್ರೆ "ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ" ಪುಸ್ತಕದ ಏಕೈಕ ಪ್ರಕಾಶನ ಹಕ್ಕುಗಳನ್ನು ನಾವು ಹೊಂದಿದ್ದೇವೆ ಎಂದು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಸ್ಪಷ್ಟಪಡಿಸಲು ಬಯಸುತ್ತದೆ.

ಪುಸ್ತಕವು ಪ್ರಕಟಣೆಗೆ ಮುಕ್ತವಾಗಿಲ್ಲ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಪುಸ್ತಕದ ಯಾವುದೇ ಪ್ರತಿಗಳನ್ನು - ಮುದ್ರಣ ಅಥವಾ ಡಿಜಿಟಲ್ ರೂಪದಲ್ಲಿ - ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಪ್ರಕಟಿಸಿಲ್ಲ, ವಿತರಿಸಿಲ್ಲ, ಮಾರಾಟ ಮಾಡಿಲ್ಲ ಅಥವಾ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿಲ್ಲ.
ಪ್ರಸ್ತುತ ಚಲಾವಣೆಯಲ್ಲಿರುವ ಪುಸ್ತಕದ ಯಾವುದೇ ಪ್ರತಿಗಳು, ಸಂಪೂರ್ಣ ಅಥವಾ ಭಾಗಶಃ, ಮುದ್ರಣ, ಡಿಜಿಟಲ್, ಪಿಡಿಎಫ್ ಅಥವಾ ಯಾವುದೇ ವೇದಿಕೆಯಲ್ಲಿ ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ಯಾವುದೇ ಇತರ ಸ್ವರೂಪದಲ್ಲಿ, PRHI ನ ಹಕ್ಕುಸ್ವಾಮ್ಯದ ಉಲ್ಲಂಘನೆಯಾಗಿದೆ ಮತ್ತು ಅದನ್ನು ತಕ್ಷಣವೇ ನಿಲ್ಲಿಸಬೇಕು. ಪುಸ್ತಕದ ಕಾನೂನುಬಾಹಿರ ಮತ್ತು ಅನಧಿಕೃತ ಪ್ರಸರಣದ ವಿರುದ್ಧ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಕಾನೂನಿನಲ್ಲಿ ಲಭ್ಯವಿರುವ ಪರಿಹಾರಗಳನ್ನು ಚಲಾಯಿಸುತ್ತದೆ. ಪ್ರಕಾಶಕರ ನಿಲುವನ್ನು ದಾಖಲೆಯಲ್ಲಿ ಇರಿಸಲು ಈ ಹೇಳಿಕೆಯನ್ನು ನೀಡಲಾಗುತ್ತಿದೆ ಎನ್ನುವ ಪೋಸ್ಟ್ ಅನ್ನು ನರವಣೆ ಅವರು ಹಂಚಿಕೊಂಡಿದ್ದಾರೆ.
ಇದು ಪುಸ್ತಕದ ಸದ್ಯದ ಸ್ಥಿತಿ
ಇನ್ನು ಇದು ಪುಸ್ತಕದ ಸದ್ಯದ ಸ್ಥಿತಿ ಎಂದು ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಎಂ.ಎಂ ನರವಣೆ ಅವರು ಪ್ರಕಾಶನ ಸಂಸ್ಥೆ ಪೆಂಗ್ವಿನ್ ಇಂಡಿಯಾದ ಹೇಳಿಕೆಯನ್ನು ಮರು ಹಂಚಿಕೊಂಡಿದ್ದಾರೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಂದು ಪ್ರಶ್ನೆ ಮಾಡಿದ ಬೆನ್ನಲ್ಲೇ ನರವಣಿ ಅವರು ಈ ಪೋಸ್ಟ್ ಹಂಚಿಕೊಂಡಿದ್ದಾರೆ.
ರಾಹುಲ್ ಗಾಂಧಿ ಹೇಳಿದ್ದೇನು ?
ಪುಸ್ತಕ ಪ್ರಕಾಶನ ಸಂಸ್ಥೆ ಪೆಂಗ್ವಿನ್ ಇಂಡಿಯಾವು, ನರವಣೆ ಅವರ ಆತ್ಮಚರಿತ್ರೆ ಫೋರ್ ಸ್ಟಾರ್ ಆಫ್ ಡೆಸ್ಟಿನಿ ಪುಸ್ತಕ ಪ್ರಕಟವಾಗಿಲ್ಲ ಎಂದು ಮಂಗಳವಾರ ಹೇಳಿತ್ತು. ಈ ವಿಷಯವನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನಿರಾಕರಿಸಿದ್ದರು. ಪುಸ್ತಕವನ್ನು ಖರೀದಿಸಿ ಎಂದು ನರವಣೆ ಅವರು 2023ರಲ್ಲೇ ಟ್ವೀಟ್ ಮಾಡಿದ್ದರು. ಈ ಪುಸ್ತಕ ಪ್ರಕಟವೇ ಆಗಿಲ್ಲ ಎಂದು ಪೆಂಗ್ವಿನ್ ಇಂಡಿಯಾ ಸಂಸ್ಥೆ ಈಗ ಹೇಳುತ್ತಿದೆ. ಯಾರು ಈ ವಿಚಾರದಲ್ಲಿ ಸುಳ್ಳು ಹೇಳುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಶ್ನೆ ಮಾಡಿದ್ದರು.
-
Property: ಆಸ್ತಿದಾರರಿಗೆ 2026 ವರ್ಷ ಅದೃಷ್ಟ: ರಿಯಲ್ ಎಸ್ಟೇಟ್ನಲ್ಲಿ ಹೊಸ ಸಂಚಲನ, ಮನೆ ಮಾರಾಟ ಭರ್ಜರಿ ಹೆಚ್ಚಳ -
Kiara Advani: ವಿಜಯ್ ದೇವರಕೊಂಡ ಮೇಲೆ ಕಿಯಾರಾ ಅಡ್ವಾಣಿಗೆ ಕ್ರಶ್: ರಾಣಾ ಶೋನಲ್ಲಿ ಬಹಿರಂಗವಾದ ಹಳೆಯ ರಹಸ್ಯ, ವೈರಲ್ -
Amruthadhare Serial: ಟ್ವಿಸ್ಟ್ ಮೇಲೆ ಟ್ವಿಸ್ಟ್: ಮಲ್ಲಿ ಮದುವೆ ಬಳಿಕ ಹೊಸ ತಿರುವು, ಜೆಡಿ ಪ್ಲ್ಯಾನ್ಗೆ ಸುನೀಲ್ ವಿಲನ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ?












Click it and Unblock the Notifications