ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: 14 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಉಸ್ತುವಾರಿಗಳನ್ನು ನೇಮಿಸಿದ ಬಿಜೆಪಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 09: ಭಾರತೀಯ ಜನತಾ ಪಕ್ಷದ ಸಂಘಟನೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು 14 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಸ್ತುವಾರಿ ಹಾಗೂ ಸಹ ಪ್ರಭಾರಿಗಳನ್ನು ನೇಮಕಗೊಳಿಸಿ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ್ ನಡ್ಡಾ ಆದೇಶಿಸಿದ್ದಾರೆ.

ಬಿಜೆಪಿಯ ಸಾಂಸ್ಥಿಕ ಪುನರ್ ನಿರ್ಮಾಣದ ಉದ್ದೇಶದಿಂದ ನೂತನ ಸಾರಥಿಗಳನ್ನು ನೇಮಿಸಲಾಗಿದೆ. ಈ ಪಟ್ಟಿಯಲ್ಲಿ ಹರ್ಯಾಣಕ್ಕೆ ತ್ರಿಪುರಾ ಮಾಜಿ ಸಿಎಂ ಬಿಪ್ಲಬ್ ಕುಮಾರ್ ದೇಬ್, ಕೇರಳಕ್ಕೆ ಮಾಜಿ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಮತ್ತು ಚಂಡೀಗಢಕ್ಕೆ ಗುಜರಾತ್‌ನ ಮಾಜಿ ಸಿಎಂ ವಿಜಯ ಭಾಯ್ ರೂಪಾನಿ ಇದ್ದಾರೆ.

ಅಯ್ಯೋ ಬಿಜೆಪಿಗೆ ಯಾರ್ ಹೆದರುತ್ತಾರೆ; ಹೀಗೆ ಹೇಳಿದ್ದೇಕೆ ರಾಹುಲ್ ಗಾಂಧಿ!?ಅಯ್ಯೋ ಬಿಜೆಪಿಗೆ ಯಾರ್ ಹೆದರುತ್ತಾರೆ; ಹೀಗೆ ಹೇಳಿದ್ದೇಕೆ ರಾಹುಲ್ ಗಾಂಧಿ!?

ಬಿಜೆಪಿಯು ಸಂಸದೀಯ ಮಂಡಳಿಯ 11 ಸದಸ್ಯರ ಹೆಸರನ್ನು ಘೋಷಿಸಿದ ಒಂದು ತಿಂಗಳ ನಂತರದಲ್ಲಿ ಹೊಸ ರಾಜಕೀಯ ಬೆಳವಣಿಗೆ ನಡೆದಿದೆ. ಬಿಎಸ್ ಯಡಿಯೂರಪ್ಪ, ಸರ್ಬಾನಂದ ಸೋನೋವಾಲ್, ಕೆ ಲಕ್ಷ್ಮಣ್, ಸುಧಾ ಯಾದವ್, ಬಿಎಲ್ ಸಂತೋಷ್, ಸತ್ಯನಾರಾಯಣ್ ಜಟಿಯಾ, ಇಕ್ಬಾಲ್ ಸಿಂಗ್ ಲಾಲ್ಪುರ ಅವರಂತಹ ಹೊಸ ಸೇರ್ಪಡೆಗಳನ್ನು ಮಾಡಲಾಗಿದೆ. ಇದರ ಮಧ್ಯೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಧ್ಯಪ್ರದೇಶ ಸಿಎಂ ಶಿವರಾಜ್ ಚೌಹಾಣ್ ಅವರನ್ನು ತೆಗೆದುಹಾಕಲಾಗಿತ್ತು.

Bharatiya Janata Party appoints party state incharge and co-incharges for states; Look for List

ನೂತನ ಮಂಡಳಿಗೆ ಯಾರು ಸಾರಥಿ?

ಬಿಜೆಪಿಯಲ್ಲಿ ಹೊಸದಾಗಿ ರಚನೆಯಾದ ಮಂಡಳಿಯು ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ನೇತೃತ್ವದಲ್ಲಿ ಇರುತ್ತದೆ. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ಒಳಗೊಂಡಿರುತ್ತದೆ.

Bharatiya Janata Party appoints party state incharge and co-incharges for states; Look for List

ಕೇಸರಿ ಪಕ್ಷವು 15 ಸದಸ್ಯರ ಕೇಂದ್ರ ಚುನಾವಣಾ ಸಮಿತಿಯನ್ನು ಸಹ ರಚಿಸಿದೆ. ಅದು ಜೆಪಿ ನಡ್ಡಾ ನೇತೃತ್ವದಲ್ಲಿ ಮತ್ತು ಪಿಎಂ ಮೋದಿ, ರಾಜನಾಥ್ ಸಿಂಗ್, ಅಮಿತ್ ಶಾ, ಬಿಎಸ್ ಯಡಿಯೂರಪ್ಪ, ಸರ್ಬಾನಂದ ಸೋನೋವಾಲ್, ಕೆ ಲಕ್ಷ್ಮಣ್, ಸುಧಾ ಯಾದವ್, ಬಿಎಲ್ ಸಂತೋಷ್, ಸತ್ಯನಾರಾಯಣ್ ಜಟಿಯಾ, ಇಕ್ಬಾಲ್ ಸಿಂಗ್ ಲಾಲ್ಪುರ, ಭೂಪೇಂದ್ರ ಯಾದವ್, ದೇವೇಂದ್ರ ಫಡ್ನವಿಸ್, ಓಂ ಮಾಥುರ್ ಅವರನ್ನು ಒಳಗೊಂಡಿರುತ್ತದೆ.

English summary
Bharatiya Janata Party appoints party state incharge and co-incharges for states; Look for List.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X