ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಹಬಾಳ್ವೆ ತತ್ವವನ್ನು ಕಾಪಾಡಲು ಕರೆ ನೀಡಿದ ರಾಷ್ಟ್ರಪತಿ

|
Google Oneindia Kannada News

ನವದೆಹಲಿ, ಆಗಸ್ಟ್ 15 : 'ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆಸುವುದು ಸಹಬಾಳ್ವೆ ತತ್ವಕ್ಕೆ ವಿರುದ್ಧವಾದದ್ದು. ಇಂತಹ ಘಟನೆಗಳು ನಡೆದಾಗ ಕಠಿಣ ಕ್ರಮ ಜರುಗಿಸಬೇಕು' ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದರು.[ಚಿತ್ರಗಳು : 70ನೇ ಸ್ವಾತಂತ್ರ್ಯೋತ್ಸವ]

70ನೇ ಸ್ವಾತಂತ್ರ್ಯೋತ್ಸವದ ಮುನ್ನಾದಿನ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, 'ಇತ್ತೀಚೆಗೆ ವಿಚ್ಛಿದ್ರಕಾರಕ ಶಕ್ತಿಗಳು ತಲೆ ಎತ್ತಲು ಪ್ರಯತ್ನಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಇಂತಹ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು' ಎಂದರು.[ಕೆಂಪುಕೋಟೆ ಮೇಲೆ ಮೋದಿ ಭಾಷಣ, ಮುಖ್ಯಾಂಶಗಳು]

pranab mukherjee

'ವಿಚ್ಛಿದ್ರಕಾರಕ ಶಕ್ತಿಗಳಿಂದ ನಮ್ಮ ಸಹಬಾಳ್ವೆ ತತ್ವಕ್ಕೆ ಹಾನಿಯಾಗಬಾರದು. ಸಮಾಜದ ಒಗ್ಗಟ್ಟು ಮತ್ತು ರಾಜಕೀಯ ವ್ಯವಸ್ಥೆ ಇಂತಹ ಶಕ್ತಿಗಳು ತಲೆ ಎತ್ತದಂತೆ ನೋಡಿಕೊಳ್ಳುತ್ತವೆ ಎಂಬ ವಿಶ್ವಾಸ ತಮಗಿದೆ' ಎಂದು ರಾಷ್ಟ್ರಪತಿಗಳು ಹೇಳಿದರು.

'ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಅಧಿಕಾರಿಗಳು ಘನತೆಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಭಾರತದ ಪುರಾತನ ಮೌಲ್ಯವನ್ನು ಎತ್ತಿಹಿಡಿಯಬೇಕು' ಎಂದು ರಾಷ್ಟ್ರಪತಿಗಳು ಕರೆ ನೀಡಿದರು.

'ಸ್ವಾತಂತ್ರ್ಯ ಎಂಬ ಮಹಾವೃಕ್ಷವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ಪೋಷಿಸಬೇಕು' ಎಂದು ರಾಷ್ಟ್ರಪತಿಗಳು ಹೇಳಿದರು.

ರಾಷ್ಟ್ರಪತಿಗಳ ಭಾಷಣದ ವಿಡಿಯೋ

English summary
President of India Pranab Mukherjee addressed the nation on Saturday, August 14, 2016 On the eve of 70th Independence Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X