• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಶಕ್ಕಾಗಿ ಬಲಿದಾನಗೈದ ಆ ಮೂರು ವೀರರಿಗೆ ಭಾವಪೂರ್ಣ ಶ್ರದ್ಧಾಂಜಲಿ

|

ನವದೆಹಲಿ, ಮಾರ್ಚ್ 23: ಭಾರತದ ಇತಿಹಾಸದಲ್ಲಿ ಎಂದೂ ಮರೆಯದ ದಿನವಾಗಿ ಅಚ್ಚೊತ್ತಿದ ದಿನಗಳಲ್ಲಿ ಮಾರ್ಚ್ 23 ಸಹ ಒಂದು. ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ನೇಣಿಗೇರಿಸಿದ ದಿನ ಇದು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಬದುಕಿರುವಷ್ಟು ದಿನವಷ್ಟೇ ಅಲ್ಲ, ಸಾಯುವ ಕೊನೆಯ ಕ್ಷಣದವರೆಗೂ ಬ್ರಿಟಿಷರಿಗೆ ದುಃಸ್ವಪ್ನವೆನ್ನಿಸಿದ ಕಾರಣಕ್ಕಾಗಿಯೇ ಆ ಮೂವರನ್ನೂ ನಿಗದಿ ಪಡಿಸಿದ್ದಕ್ಕಿಂತ(ಮಾರ್ಚ್ 24) ಒಂದು ದಿನ ಮೊದಲೇ ಗಲ್ಲಿಗೇರಿಸಲಾಯಿತು!

"ಭಗತ್ ಸಿಂಗ್, ರಾಜಗುರು, ಸುಖದೇವ್ ಗೆ ಇನ್ನೂ ಯಾಕಿಲ್ಲ ಹುತಾತ್ಮಪಟ್ಟ?"

1928 ರಲ್ಲಿ ದೆಹಲಿಯ ಸೆಂಟ್ರಲ್ ಅಸೆಂಬ್ಲಿಗೆ ಬಾಂಬ್ ಎಸೆದ ಆರೋಪ ಮತ್ತು ಬ್ರಿಟಿಷ್ ಅಧಿಕಾರಿಯೊಬ್ಬನನ್ನು ಗುಂಡಿಕ್ಕಿ ಕೊಂದ ಕಾರಣಕ್ಕೆ ಅವರನ್ನು ಸೆರೆಯಲ್ಲಿರಿಸಲಾಗಿತ್ತು. ನಂತರ 1931 ಮಾರ್ಚ್ 23 ರಂದು ಅವರನ್ನು ಬ್ರಿಟಿಷ್ ಸರ್ಕಾರ ನೇಣಿಗೇರಿಸಿತು. ಯುವ ಜನಾಂಗಕ್ಕೆ ಸ್ಫೂರ್ತಿಯಾದ ಆ ದಿವ್ಯಚೇತನಗವನ್ನು ನೆನೆದು ಮಾರ್ಚ್ 23 ನ್ನು ಶಾಹಿದ್ ದಿವಸ್ ಅಥವಾ ಬಲಿದಾನ ದಿನವನ್ನಾಗಿ ಆಚರಿಸಲಾಗುತ್ತದೆ. ಇತಿಹಾಸದಲ್ಲಿ ಅಚ್ಚೊತ್ತಿದ ಈ ಮಹತ್ವದ ದಿನಕ್ಕೆ ಮತ್ತು ಆ ಮೂರು ಮಹಾನ್ ನಾಯಕರಿಗೆ ಟ್ವಿಟ್ಟರ್ ನಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಗಿದೆ.

ಸ್ಮೃತಿ ಸ್ಮರಣೆ

ಹುತಾತ್ಮ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರಿಗೆ ಅವರ ಬಲಿದಾನದ ದಿನದಂದು ಶ್ರದ್ಧಾಂಜಲಿ. ಅವರ ಮಹೋನ್ನತ ತ್ಯಾಗ ನಮ್ಮನ್ನಿಂದು ಸ್ವತಂತ್ರರನ್ನಾಗಿ ಮಾಡಿದೆ. ಅವರು ಎಂದಿಗೂ ನಮ್ಮೆಲ್ಲರ ಮನಸ್ಸಿನಲ್ಲಿ ಭದ್ರಸ್ಥಾನದಲ್ಲಿ ಉಳಿಯುತ್ತಾರೆ ಎಂದು ಕೇಮಮದ್ರ ಸಚಿವೆ ಸ್ಮೃತಿ ಇರಾನಿ ಟ್ವೀಟ್ ಮಾಡಿದ್ದಾರೆ.

ಯಡಿಯೂರಪ್ಪ ಅವರಿಂದ ಶ್ರದ್ಧಾಂಜಲಿ

ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ ತ್ಯಾಗವನ್ನು ಈ ದಿನ ನೆನೆಯುತ್ತೇನೆ. ಮತ್ತು ಅವರು ಈ ದೇಶದ ಪರಂಪರೆ ಮತ್ತು ದೇಶಭಕ್ತಿಗೆ ನೀಡಿದ ಕೊಡುಗೆಗೆ ನನ್ನ ನಮನ. ಭಾರತದ ಸ್ವಾತಂತ್ರ್ಯಕ್ಕೆ ಅವರು ನೀಡದ ಕೊಡುಗೆಯನ್ನು ನಾವು ನಿರಂತರವಾಗಿ ನೆನಪಿಸಿಕೊಳ್ಳುತ್ತೇವೆ ಎಂದು ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಅನಂತ ನಮನ

ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರು ಹುತಾತ್ಮರಾದ ದಿನದಂದು ಅವರಿಗೆ ನನ್ನ ನಮನ. ನಮ್ಮ ದೇಶದ ನಾಳೆಗಾಗಿ ತಮ್ಮ ಬದುಕನ್ನು ಬಲಿ ನೀಡಿದ ಮಹಾನ್ ಚೇತನವನ್ನು ನಾವು ಯಾವಾಗಲೂ ಸ್ಮರಿಸುತ್ತೇವೆ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಟ್ವೀಟ್ ಮಾಡಿದ್ದಾರೆ.

ಅಮರೀಂದರ್ ಸಲಾಂ

ಈ ಮಣ್ಣಿನ ವೀರಪುತ್ರರಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರಿಗೆ ಶಾಹಿದ್ ದಿನದಂದು ನಮನಗಳು. ಅವರ ತ್ಯಾಗವೇ ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ದಾರಿದೀಪವಾಗಿದ್ದು. ಅವರು ಹುತಾತ್ಮರಾದ ದಿನವನ್ನು ನಾವು ಯುವ ಸಬಲೀಕರಣ ದಿನವನ್ನಾಗಿ ಆಚರಿಸಿ, ಯುವಕರಿಗೆ ಸ್ಫೂರ್ತಿ ನೀಡುತ್ತೇವೆ ಎಂದು ಪಂಜಾಮ್ ಮುಖ್ಯಮಂತ್ರಿ ಕ್ಯಾ.ಅಮರೀಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ.

English summary
Bhagat Singh, Rajguru, and Sukhdev were hanged till death on March 23, 1931, in Lahore jail by the colonial British. After that incident every year, on March 23, Martyr’s Day or Shaheed Diwas is observed in memory of them who sacrificed their lives for the country. Here are some twitter statements.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X