• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕುಡಿದ ಮತ್ತಿನಲ್ಲಿ ಪೊಲೀಸ್ ಕೆನ್ನೆಗೆ ಮುತ್ತಿಟ್ಟ ಕುಡುಕ, ಮುಂದೇನಾಯ್ತು?

|

ಹೈದರಾಬಾದ್, ಜುಲೈ 30: ನಗರದಲ್ಲಿ ದೊಡ್ಡ ಮೆರವಣಿಗೆ ಅದರ ಮಧ್ಯೆ ಕುಡುಕರ ಕಾಟ, ಪಲ್ಲಕ್ಕಿ ಹೋದಕಡೆಗಳಲ್ಲೆಲ್ಲಾ ತೂರಾಡಿಕೊಂಡು ಹೋಗಿ ಡ್ಯಾನ್ಸ್ ಮಾಡುವುದು ಸಾಮಾನ್ಯ.

ಆದರೆ ಅಲ್ಲಿ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೊಲೀಸ್ ಅಧಿಕಾರಿಯೊಬ್ಬರ ಕೆನ್ನೆಗೆ ಕುಡುಕನೊಬ್ಬ ಮುತ್ತುಕೊಟ್ಟಿದ್ದು, ಈಗ ಕಂಬಿ ಎಣಿಸುತ್ತಿದ್ದಾರೆ.

ಆನ್ ಡ್ಯೂಟಿಯಲ್ಲಿದ್ದ ಪೊಲೀಸ್ ಗೆ ಮುತ್ತುಕೊಟ್ಟಿರುವ ಕಾರಣ ಆತನ ಮೇಲೆ ಪ್ರಕರಣ ದಾಖಲಿಸಲಾಗಿದೆ. ಹೈದರಾಬಾದ್‌ನಲ್ಲಿ ಫೇಮಸ್ ಆಗಿರುವ ಬೊನಲು ಮೆರವಣಿಗೆ ವೇಳೆ ಈ ಘಟನೆ ನಡೆದಿದೆ.

ಸಬ್ ಇನ್‌ಸ್ಪೆಕ್ಟರ್ ಮಹೇಂದ್ರ ಅವರು ಮೆರವಣಿಗೆಯ ಪ್ರದೇಶದಲ್ಲಿದ್ದರು. ಕುಡಿದಿದ್ದ ಭಾನು ಎನ್ನುವವನು ಪೊಲೀಸರ ಕೆನ್ನೆಗೆ ಮುತ್ತು ಕೊಟ್ಟಿದ್ದಾನೆ. ಆತನನ್ನು ಕೂಡಲೇ ವಶಕ್ಕೆ ಪಡೆದಿದ್ದಾರೆ. ಜ್ಯೂಡಿಷಿಯಲ್ ಡಿಮ್ಯಾಂಡ್‌ಗೆ ಕಳುಹಿಸಿಕೊಡಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೆರವಣಿಗೆ, ಪಲ್ಲಕ್ಕಿ, ದೇವರ ಉತ್ಸವಗಳಲ್ಲಿ ಯುವಕರು ಕುಡಿದು ಮಹಿಳೆಯರಿಗೆ ಕಿರುಕುಳ ನೀಡಿದ್ದ ಹಲವು ನಿದರ್ಶನಗಳು ನಮ್ಮ ಕಣ್ಣಮುಂದಿವೆ.

English summary
Drunken Man Kisses Police During Procession, The incident happened during the celebration of an annual Hindu festival Bonalu in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X