ಮಧ್ಯಪ್ರಾಚ್ಯ ಮುಳುಗುವಂತೆ ಮಾಡುತ್ತಿದೆ ಇರಾನ್ ಸಂಘರ್ಷ, ಅಮೆರಿಕದ ಹೊಸ ರಣತಂತ್ರ | Iran Conflict
ಇರಾನ್ ಎಷ್ಟು ಹೇಳಿದರೂ ಮಾತು ಕೇಳುತ್ತಿಲ್ಲ, ಅಮೆರಿಕ ಹಾಗೂ ಮಿತ್ರ ದೇಶಗಳು ಯುದ್ಧ ನಿಲ್ಲಿಸಿ ಶಾಂತಿ ಒಪ್ಪಂದ ಮಾಡಿಕೊಳ್ಳಿ ಎಂದು ಇರಾನ್ ಬಳಿ ಮನವಿ ಮಾಡಿದರೂ ಅದು ವರ್ಕೌಟ್ ಆಗ್ತಾ ಇಲ್ಲ. ಯುದ್ಧದ ಕಿಚ್ಚು ಇನ್ನಷ್ಟು ಹೆಚ್ಚಾಗುತ್ತಿರುವ ಕಾರಣಕ್ಕೆ ಆತಂಕ ಕೂಡ ಮನೆಮಾಡಿದೆ, ಇದು ಹಾಳಾಗಿ ಹೋಗಲಿ ಅಂತಾ ಬಿಟ್ಟರೂ ಆರ್ಥಿಕವಾಗಿ ದೊಡ್ಡ ಹಿನ್ನಡೆ ಎದುರಾಗುತ್ತಿದೆ. ಈಗಾಗಲೇ ಈ ಯುದ್ಧ ಶುರುವಾದ ನಂತರ ಮಧ್ಯಪ್ರಾಚ್ಯ ಭಾಗದ ಬಹುತೇಕ ದೇಶಗಳ ಷೇರು ಮಾರುಕಟ್ಟೆ ಮಕಾಡೆ ಮಲಗಿವೆ. ಹೂಡಿಕೆದಾರರು ಕೂಡ ಭಯದಲ್ಲೇ ತಮ್ಮ ಹಣ ವಾಪಸ್ ತೆಗೆದುಕೊಂಡು ಎಸ್ಕೇಪ್ ಆಗುವ ಹಂತದಲ್ಲಿ ಇದ್ದಾರೆ. ಇದೇ ಸಮಯದಲ್ಲಿ ಇರಾನ್ ಕಥೆಯನ್ನ ಮುಗಿಸಲು ದೊಡ್ಡ ಸ್ಕೆಚ್ ಸಿದ್ಧವಾದ ರೀತಿ ಕಾಣುತ್ತಿದೆ.
ಹಲವು ವರ್ಷಗಳ ನಂತರ ಅಮೆರಿಕ ದಿಢೀರ್ ಬಂಕರ್ ನಾಶ ಮಾಡುವ ಬಾಂಬ್‌ಗಳನ್ನ ಬಳಸಿದ್ದು, ಮುಂದೆ ಇನ್ನೂ ವಿನಾಶಕಾರಿ ಅಸ್ತ್ರಗಳನ್ನು ಇರಾನ್ ವಿರುದ್ಧ ಬಳಸುವ ಮುನ್ಸೂಚನೆ ಈಗ ಸಿಕ್ಕಿದೆ. ಅಮೆರಿಕ ಎಂಬ ಬೃಹತ್ ದೇಶಕ್ಕೆ ಒಂದಾದ ಬಳಿಕ ಒಂದು ದೊಡ್ಡ ಹಿನ್ನಡೆ ಎದುರಾಗುತ್ತಿದ್ದು, ಈ ಪೈಕಿ ಮಧ್ಯಪ್ರಾಚ್ಯ ಭಾಗದಲ್ಲಿ ದೊಡ್ಡ ಸೇನಾ ಕಾರ್ಯಾಚರಣೆ ಶುರು ಮಾಡಿದ್ದ ಅಮೆರಿಕ ನರಳುವಂತೆ ಆಗಿದೆ ಎನ್ನಬಹುದು. ಏಕೆಂದರೆ ಇರಾನ್ ವಿರುದ್ಧದ ಯುದ್ಧ ಶುರುವಾದ ನಂತರ ಕಚ್ಚಾತೈಲ ಬೆಲೆ ಭರ್ಜರಿ ಏರಿಕೆ ಕಾಣುವ ಮೂಲಕ, ಪ್ರತಿ ಬ್ಯಾರಲ್‌ಗೆ ಬರೋಬ್ಬರಿ 100 ಡಾಲರ್ ಮೀರುತ್ತಿದೆ. ಇದು ಅಮೆರಿಕದ ಆರ್ಥಿಕತೆಗೆ ಕೂಡ ಹೊಡೆತ ನೀಡುವ ಜೊತೆಗೆ, ಜನರನ್ನೂ ಆತಂಕಕ್ಕೆ ದೂಡುತ್ತಿದೆ.

ಇರಾನ್ ನೆಲದಲ್ಲಿ ಘೋರ ಕಾರ್ಯಾಚರಣೆ?
ಹಾಗೇ ಇಂತಹ ಸಂಕಷ್ಟದ ಪರಿಸ್ಥಿತಿ ಎದುರಾಗಿರುವ ಸಮಯದಲ್ಲೇ, ಅಮೆರಿಕದ ಷೇರುಪೇಟೆ ಕೂಡ ದೊಡ್ಡ ಮಟ್ಟದ ಕುಸಿತ ಕಾಣುತ್ತಿದೆ. ಹೀಗಿದ್ದಾಗ ತಕ್ಷಣ ಇರಾನ್ ಸೋಲು ಒಪ್ಪಿಕೊಳ್ಳುವಂತೆ ಮಾಡಲು ಅಮೆರಿಕ ಸೇನೆ ಪ್ಲಾನ್ ಮಾಡಿದೆ, ಹೀಗಾಗಿಯೇ ಇಂದು ಅಥವಾ ನಾಳೆ ಇರಾನ್ ರಾಜಧಾನಿ ತೆಹ್ರಾನ್ ನಡುಗುವಂತಹ ದಾಳಿ ನಡೆಯುವ ಬಗ್ಗೆ ಮುನ್ಸೂಚನೆ ಸಿಗುತ್ತಿದೆ. ಹೇಗಾದರೂ ಇರಾನ್ ಸೋಲಿಸಿ & ಮಧ್ಯಪ್ರಾಚ್ಯದ ಶತ್ರುಗಳ ಹುಟ್ಟಡಗಿಸಿ ಪೂರ್ಣ ಅಧಿಕಾರ ತಮ್ಮ ಕೈಗೆ ತೆಗೆದುಕೊಳ್ಳಬೇಕು, ಎಂಬ ಟ್ರಂಪ್ ಅವರ ಪ್ಲಾನ್ ಉಲ್ಟಾ ಹೊಡೆದಿದೆ. ಹೀಗಿದ್ದಾಗ ತಮ್ಮ ಬಳಿ ಇರುವ ಬಾಂಬರ್ ಫೈಟರ್ ಜೆಟ್‌ಗಳು & ವಿನಾಶಕಾರಿ ಕ್ಷಿಪಣಿಗಳ ಮೂಲಕ, ಇರಾನ್ ದೇಶವು ಮಿಸೈಲ್ ಸಂಗ್ರಹ ಮಾಡಿರುವ ಬಂಕರ್‌ಗಳನ್ನ ಈಗ ನಾಶ ಮಾಡಲು ಅಮೆರಿಕ ತಂತ್ರ ಹೂಡಿದೆ.












Click it and Unblock the Notifications