ಔಷಧಿ ಪೂರೈಸುವ ಕೆಸ್‌ಎಂಸಿಎಲ್‌ಗೆ ಐಎಎಸ್ ಅಧಿಕಾರಿ ಮುಖ್ಯಸ್ಥ, ಇ-ಔಷಧಿ ಸಾಫ್ಟವೇರ್ ಜಾರಿ: ದಿನೇಶ್ ಗುಂಡೂರಾವ್
ಬೆಂಗಳೂರು: ಆರೋಗ್ಯ ಸಂಸ್ಥೆಗಳ ಮನವಿಯಂತೆ ರಾಜ್ಯ ಸರ್ಕಾರ ಇತ್ತೀಚೆಗೆ ಔಷಧಿಗಳ ಖರೀದಿಗಾಗಿ ಒಟ್ಟು 30 ಕೋಟಿ ರೂಪಾಯಿ ಅನುದಾನ ಘೋಷಿಸಿತ್ತು. ಇದರ ಬೆನ್ನಲ್ಲೆ ಔಷಧಿ ಖರೀದಿ, ಪೂರೈಕೆಯಲ್ಲಿ ಪಾರದರ್ಶಕತೆಗೆ ಒತ್ತು ನೀಡಲಾಗುತ್ತಿದೆ. ಆರೋಗ್ಯ ಸಂಸ್ಥೆಗಳಿಗೆ ಔಷಧಿಗಳನ್ನು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (KSMCL) ಸರಬರಾಜು ಮಾಡುತ್ತದೆ. ಮಾತ್ರವಲ್ಲದೇ 'ಇ-ಔಷಧಿ ಸಾಫ್ಟವೇರ್' ಜಾರಿಗೆ ತರಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದರು.
ಈ ಕುರಿತು ಸದನದಲ್ಲಿ ಮಾಹಿತಿ ನೀಡಿರುವ ಬಗ್ಗೆ ಅವರು ಎಕ್ಸ್ ಪೋಸ್ಟ್ ಮಾಡಿದ್ದು, ಕೆಎಸ್‌ಎಂಸಿಎಲ್ ಸರಿಯಾಗಿ ದಿಕ್ಕಿನಲ್ಲಿ ಸಾಗಬೇಕು ಎನ್ನುವ ಕಾರಣಕ್ಕೆ ಐಎಎಸ್ ಅಧಿಕಾರಿಯನ್ನು ಮುಖ್ಯಸ್ಥರನ್ನಾಗಿ ಮಾಡಿದ್ದೇವೆ. ಈ ಮೂಲಕ ಎಲ್ಲ ಇಲಾಖೆಗಳ ಔಷಧಿ ಖರೀದಿ ಪ್ರಕ್ರಿಯೆ ಸರಿಯಾಗಿ ನಡೆಸಯಬೇಕು ಎಂಬುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ. ಔಷಧಿಗಳನ್ನು ಪಾರದರ್ಶಕವಾಗಿ ಖರೀದಿ ಮಾಡುತ್ತಿದ್ದೇವೆ. ಮೊದಲು ಟೆಂಡರ್ ನಲ್ಲಿ ಪಾಸ್ಟ್ ಪರ್ಪಾಮನ್ಸ್ ಅಂತ ಕೆಲವೇ ಜನರಿಗೆ ಟೆಂಡರ್ ಆಗುತ್ತಿತ್ತು. ಹೊಸಬರಿಗೆ ಅವಕಾಶ ಇರಲಿಲ್ಲ.

ಔಷಧಿ ಖರೀದಿ ಆರ್ಡರ್, ಗುಣಮಟ್ಟ ಪರಿಶೀಲನೆ
ಔಷಧಿ ಖರೀದಿಗೆ ಆರ್ಡರ್ ಕೊಟ್ಟ ನಂತರ ಕಂಪನಿ ಪರಿಶೀಲನೆ ನಡೆಸುತ್ತೇವೆ. ಪೂರೈಕೆ ಅದ ಮೇಲೆ ಪ್ರತಿ ಔಷಧಿ ಟೆಸ್ಟ್ ಮಾಡಿ ಗುಣಮಟ್ಟ ಪರಿಶೀಲನೆ ನಡೆಸಲಾಗುತ್ತದೆ. ಇದೊಂದು ನೂತನ ಕ್ರಮ ನಾವು ತಂದಿದ್ದೇವೆ. ಕ್ವಾರಂಟೀನ್ ಪಾಲಿಸಿ ತಂದಿದ್ದೇವೆ. ಅಲ್ಲಿ ಉತ್ತೀರ್ಣ ಅದಮೇಲೆ ಅಸ್ಪತ್ರೆಗಳಿಗೆ ಕಳುಹಿಸುತ್ತೇವೆ. 890 ಔಷಧ ಖರೀದಿಗೆ ತೀರ್ಮಾನಿಸಿ 534 ಕೆಎಸ್‌ಎಂಸಿಎಲ್ ಮುಖಾಂತರ 356 ಸ್ಥಳಿಯವಾಗಿ ಖರೀದಿ ಮಾಡುತ್ತೇವೆ ಎಂದು ಸಚಿವರು ಔಷಧಿ ಖರೀದಿ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು.
534 ಔಷಧಿಗಳಲ್ಲಿ 236 ಈಗಾಗಲೇ ಪೂರೈಕೆ ಮಾಡುತ್ತಿದ್ದೇವೆ. ಮೊದಲು ಒಂದು ವರ್ಷಕ್ಕೆ ಬೇಕಾದ ಔಷಧ ಒಮ್ಮೆಲೇ ಖರಿದಿ ಮಾಡಲಾಗುತ್ತಿತ್ತು. ಹಲವಾರು ಔಷಧಗಳು ಬಳಸದೇ ಎಕ್ಸಪೈರಿ ಆಗುತ್ತಿತ್ತು. ಇದೀಗ ಶೇಕಡಾ 25ರಷ್ಟು ಈಡೀ ವರ್ಷ ನಿಯಮಿತವಾಗಿ ಪೂರೈಕೆ ಮಾಡಲು ಹೇಳಿದ್ದೇವೆ. ನಮ್ಮ ಆಸ್ಪತ್ರೆಯಲ್ಲಿ ಔಷಧ ಇಲ್ಲ ಎಂದು ಹೇಳಬಾರದು. ಆ ನಿಟ್ಟಿನಲ್ಲಿ ಲಭ್ಯತೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಾತಿ ಹಂತದಲ್ಲಿದೆ ಇ-ಔಷಧಿ ಸಾಫ್ಟವೇರ್
ಈ ಬದಲಾವಣೆ ಮಾಡುವ ಸಂದರ್ಭದಲ್ಲಿ ಸ್ವಲ್ಪ ತೊಂದರೆ ಆಗಿದೆ. ಅದಿಕಾರಿಗಳ ಸಭೆ ನಡೆಸಿ 534 ರಲ್ಲಿ 487 ಔಷಧ ಇದೆ. ಎಸೆನ್ಸಿಯಲ್ ಔಷಧ ತಾಲ್ಲೂಕು ಆಸ್ಪತ್ರೆಯಲ್ಲಿ 98, ಸಮುದಾಯ ಆರೋಗ್ಯ ಕೇಂದ್ರ ದಲ್ಲಿ 73, ಪಿಹೆಚ್ ಸಿ ನಲ್ಲಿ 53 ಇರಬೇಕು, ಅದೆಲ್ಲವೂ ಲಭ್ಯವಿದೆ. ಇ-ಔಷಧಿ ಸಾಫ್ಟವೇರ್ ತಂದಿದ್ದು ರಿಯಲ್ ಟೈಮ್ ಪರಿಶೀಲನೆ ನಡೆಸಲಾಗುತ್ತದೆ.
ರಾಜ್ಯದ ಔಷಧ ಅವಶ್ಯಕತೆ ಎಲ್ಲ ಉನ್ನತ ಅಧಿಕಾರಿಗಳು ಸದಾ ಪರೀಕ್ಷೆ ನಡೆಸಲು ಅವಕಾಶವಿರುತ್ತದೆ. ಈ ಎಲ್ಲ ಬದಲಾವಣೆಯಿಂದ ಮುಂದಿನ ದಿನದಲ್ಲಿ ಶೇಕಡಾ 80 ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (KSMCL) ನಿಂದಲೇ ಪೂರೈಕೆ ಅಗುತ್ತದೆ ಎಂದರು.












Click it and Unblock the Notifications