ಕಾಲಕಡಗದ ಹಿಂದೆ ಬಿದ್ದ ಉತ್ತರ ಕರ್ನಾಟಕದ ಗೃಹಿಣಿಯರ ಕಥೆ

By: ಶಂಭು, ಹುಬ್ಬಳ್ಳಿ
Subscribe to Oneindia Kannada

ಹುಬ್ಬಳ್ಳಿ, ಜನವರಿ 13: ಕಳೆದ ವರ್ಷ ಸುದ್ದಿವಾಹಿನಿಯ ಜ್ಯೋತಿಷಿಯೊಬ್ಬರು ಮನೆ ಮನೆಗೆ ಹೋಗಿ ಭಿಕ್ಷೆ ಬೇಡಿ ಒಂದು ರೂಪಾಯಿ ಇಸಿದುಕೊಳ್ಳಿ ಎಂದು ಹೇಳಿದ್ದಕ್ಕೆ ಸಾವಿರಾರು ಹೆಂಗಸರು ಭಿಕ್ಷುಕಿಯರಾಗಿ ದೇಶದ ಗಮನ ಸೆಳೆದಿದ್ದರು.

ಅದೇ ರೀತಿ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ಕೆಲ ಪ್ರಾಂತ್ಯಗಳಲ್ಲಿ ಹೊಸ ಪದ್ಧತಿಯೊಂದು ಹುಟ್ಟಿಕೊಂಡಿದೆ. ಅದರಂತೆ, ಮನೆಯ ಮಗನಿಗೆ ಒಬ್ಬ ಗಂಡು ಮಗುವಿದ್ದರೆ, ಆ ಮಗನ ಸಹೋದರಿ ತನ್ನ ಸೋದರಳಿಯನಾಗುವ ಆ ಮಗುವಿಗೆ ಬೆಳ್ಳಿಯ ಕಾಲ್ಗಡಗ ತೊಡಿಸಬೇಕು. ಇಲ್ಲವಾದರೆ, ಆ ಮಗುವಿಗೆ ಒಳ್ಳೆಯದಾಗುವುದಿಲ್ಲ ಎಂಬ ಪ್ರತೀತಿ ಇದ್ದಕ್ಕಿದ್ದಂತೆ ಹರಡಿದೆ.

ಹಾಗಾಗಿ, ಇಲ್ಲಿನ ಹೆಣ್ಣುಮಕ್ಕಳೆಲ್ಲಾ ಒಬ್ಬನೇ ಮಗನಿರುವ ತಮ್ಮ ಅಣ್ಣ, ತಮ್ಮಂದಿರ ಮನೆಗೆ ಬೆಳ್ಳಿ ಕಡಗ ತರಲು ಚಿನ್ನಾಭರಣ ಅಂಗಡಿಗಳಿಗೆ ಮುಗಿಬೀಳುತ್ತಿದ್ದಾರೆ. ಒಬ್ಬರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಹೋದರರಿದ್ದು, ಅವರಿಗೆ ಕೇವಲ ಒಬ್ಬೇ ಒಬ್ಬ ಗಂಡುಮಗನಿದ್ದಾರೆಂದರೆ, ಹೆಣ್ಣುಮಕ್ಕಳಿಗೆ ಇನ್ನೂ ಒತ್ತಡ ಹೆಚ್ಚಾಗುತ್ತದೆ. ಅಪನಗದೀಕರಣದಿಂದಾಗಿ ಮೊದಲೇ ಹಣವಿಲ್ಲದೆ ಪರದಾಡುತ್ತಿರುವ ಇಲ್ಲಿನ ಜನರು, ಮಹಿಳೆಯರಿಗೀಗ ಇದೊಂದು ಅಂಧಶ್ರದ್ಧೆಯ ಭಾರವೂ ಹೊರಬೇಕಾಗಿದೆ. ಬೆಳಗಾವಿ, ಧಾರವಾಡ ಆಸುಪಾಸಿನಲ್ಲೇ ಈ ಆಚರಣೆ ಮನೆ ಮಾಡಿದೆ.

A new superstition came into practice in North Karnataka

ಇದೇ ರೀತಿ ಒಬ್ಬಳೇ ಮಗಳು ಇದ್ದರೆ ಅವಳ ಎರಡೂ ಕಾಲುಗಳಲ್ಲಿನ ಕಾಲ್ಗೆಜ್ಜೆಗಳಲ್ಲಿ ಒಂದನ್ನು ತೆಗೆಯಬೇಕು. ಮಕರ ಸಂಕ್ರಮಣವು ಚಿಕ್ಕ ಮಕ್ಕಳ ಮೇಲೆ ಪರಿಣಾಮ ಬೀರುವುದರಿಂದ ಈ ಪದ್ಧತಿ ಆರಂಭಿಸಲಾಗಿದೆ ಎನ್ನುತ್ತಾರೆ ಇಲ್ಲಿನ ಗೃಹಿಣಿಯರು.

ಪ್ರತಿ ವರ್ಷದ ಹೊಸ್ತಿಲು ಹುಣ್ಣಿಮೆ ಸಮಯದಲ್ಲಿ ಈ ರೀತಿಯ ಹೊಸ ಪದ್ಧತಿಗಳು ಈ ಭಾಗದಲ್ಲಿ ಹುಟ್ಟಿಕೊಳ್ಳುತ್ತವೆ. ಇದನ್ನು ಯಾರು ಹೇಳಿದರು, ಯಾರಿಗೆ ಹೇಳಿದರು, ಎಲ್ಲಿ ಹೇಳಿದರು, ಯಾಕೆ ಹೇಳಿದರು ಎಂಬ ಪ್ರಶ್ನೆಗಳಿಗೆ ಯಾರಲ್ಲಿಯೂ ಇಲ್ಲಿ ಉತ್ತರವಿಲ್ಲ. ಜನ
ಮರಳೋ, ಜಾತ್ರೆ ಮರಳೋ ಎಂಬಂತೆ ಅವರು ಮಾಡಿದ್ರಂತೆ, ನಾವೂ ಮಾಡಬೇಕು ಎಂದು ಗೃಹಿಣಿಯರು ಅಂಧಾನುಕರಣೆಯಲ್ಲಿ ನಿರತರಾಗಿದ್ದಾರೆ. ಒಬ್ಬರೇ ಹೆಣ್ಣು ಮಗುವಿದ್ದವರು ಕಾಲ್ಗೆಜ್ಜೆ ತೆಗೆದು ಪುಣ್ಯಕ್ಕೆ ಪಾರಾದೆವು ಎಂದು ನಿಟ್ಟುಸಿರು ಬಿಡುತ್ತಿದ್ದಾರೆ.

ಇನ್ನೊಂದು ವಿಷಯವೆಂದರೆ ಇಂಥಹ ಪದ್ಧತಿಗಳನ್ನು ಕೇವಲ ಮುತ್ತೈದೆಯರು ಮಾಡಬೇಕಾಗಿದ್ದುದು, ವಿಧವೆಯವರಿಗೆ ಈ ಹೊಸ ಪದ್ಧತಿ ಅನ್ವಯಿಸುವುದಿಲ್ಲ ಎನ್ನಲಾಗಿದೆ. ಪ್ರತಿ ವರ್ಷ ಜನೇವರಿ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಈ ತರಹದ ಹೊಸ ಪದ್ಧತಿ, ಆಚರಣೆಗಲೂ ಉತ್ತರ ಕರ್ನಾಟಕದಲ್ಲಿ ಸಾಮಾನ್ಯವಾಗಿವೆ.

ಅಂಧಾನುಕರಣೆಗೆ ಕಡಿವಾಣ ಹಾಕಿ...
ಜನರು ಇಂಥಹ ಮೂಢನಂಬಿಕೆಗಳನ್ನು ಆಚರಿಸುವುದು ಸರಿಯಲ್ಲ. ಇಂಥ ಪದ್ಧತಿಗಳು ಕೇವಲ ಮುಗ್ಧ ಹೆಣ್ಣು ಮಕ್ಕಳ ಮೇಲೇಯೇ ಏಕೆ ಬರುತ್ತವೆ ಎಂಬುದು ಪ್ರಶ್ನಾರ್ಹ.
- ಮಂಗಳಾ, ಸಮಾಜ ಸೇವಕಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A new kind of blind belief has came into practice of some parts of north karnataka. According to this, a woman whose brother or brothers has only one son as their offspring, should give a silver wristlet to that nephew. Otherwise, curse will shadow its impact on that child. On following anounimous blind belief, women are rush towards jewellary.
Please Wait while comments are loading...